

Team Udayavani, Apr 22, 2018, 6:00 AM IST
ಸಿಯೋಲ್: ಯಾರ ಬೆದರಿಕೆ, ಒತ್ತಡಕ್ಕೂ ಮಣಿಯದೇ ನಿರಂತರವಾಗಿ ಅಣ್ವಸ್ತ್ರಗಳು, ಕ್ಷಿಪಣಿಗಳ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಾ ಉದ್ಧಟತನದಿಂದ ವರ್ತಿಸುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಶನಿವಾರ ಅಚ್ಚರಿಯ ಘೋಷಣೆ ಮಾಡಿದ್ದಾರೆ. ಇನ್ನು ಯಾವ ಕಾರಣಕ್ಕೂ ಕ್ಷಿಪಣಿಗಳು ಹಾಗೂ ಅಣ್ವಸ್ತ್ರಗಳ ಪರೀಕ್ಷೆ ನಡೆಸುವುದಿಲ್ಲ ಹಾಗೂ ಇದಕ್ಕೆಲ್ಲ ಸಂಪೂರ್ಣ ವಿರಾಮ ಹಾಕುತ್ತಿದ್ದೇನೆ ಎಂದು ಕಿಮ್ ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಮುನ್ನವೇ ಈ ಬೆಳವಣಿಗೆ ನಡೆದಿದೆ. ಕಿಮ್ ನಿರ್ಧಾರವನ್ನು ಅಮೆರಿಕ, ಚೀನಾ ಸೇರಿದಂತೆ ಹಲವು ದೇಶಗಳು ಸ್ವಾಗತಿಸಿವೆ.
ಶನಿವಾರ ಆಡಳಿತಾರೂಢ ವರ್ಕರ್ಸ್ ಪಾರ್ಟಿಯ ಕೇಂದ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಕಿಮ್, “ಕ್ಷಿಪಣಿ, ಅಣ್ವಸ್ತ್ರಗಳ ಪರೀಕ್ಷೆಯನ್ನು ಇಲ್ಲಿಗೇ ಸ್ಥಗಿತಗೊಳಿಸುತ್ತೇನೆ. ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷಾ ಕೇಂದ್ರದ ಅಗತ್ಯ ಇನ್ನು ಎದುರಾಗದು’ ಎಂದು ಹೇಳಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, “ಇದು ಉತ್ತರ ಕೊರಿಯಾ ಮತ್ತು ಇಡೀ ಜಗತ್ತಿಗೆ ಸಿಹಿ ಸುದ್ದಿ. ಅತಿದೊಡ್ಡ ಯಶಸ್ಸು. ನಮ್ಮ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ,’ ಎಂದು ಹೇಳಿದ್ದಾರೆ. ದಕ್ಷಿಣ ಕೊರಿಯಾ ಕೂಡ ಸಂತಸ ವ್ಯಕ್ತಪಡಿಸಿದ್ದು, ಕೊರಿಯಾ ಪರ್ಯಾಯ ದ್ವೀಪವನ್ನು ಅಣ್ವಸ್ತ್ರರಹಿತವಾಗಿಸುವಲ್ಲಿ ಇದು ಅರ್ಥಪೂರ್ಣ ಹೆಜ್ಜೆ ಎಂದು ಬಣ್ಣಿಸಿದೆ. ಚೀನಾ, ಐರೋಪ್ಯ ಒಕ್ಕೂಟ, ಜಪಾನ್ ಕೂಡ ಇದನ್ನು ಸ್ವಾಗತಿಸಿವೆ.
ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕಿಮ್
ಕಳೆದ ವರ್ಷ ಕಿಮ್ ಜಾಂಗ್ 6 ಅಣ್ವಸ್ತ್ರ ಪರೀಕ್ಷೆ, ನಿರಂತರ ಕ್ಷಿಪಣಿ ಪರೀಕ್ಷೆಗಳ ಮೂಲಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದರು. ಯಾವ ಒತ್ತಡಕ್ಕೂ ಬಗ್ಗದ ಹಿನ್ನೆಲೆಯಲ್ಲಿ ಉ.ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಮಂಡಳಿ, ಅಮೆರಿಕ, ಐರೋಪ್ಯ ಒಕ್ಕೂಟ, ದಕ್ಷಿಣ ಕೊರಿಯಾ ಮತ್ತಿತರ ದೇಶಗಳು ನಿರ್ಬಂಧವನ್ನೂ ಹೇರಿದ್ದವು. ಟ್ರಂಪ್ ಮತ್ತು ಕಿಮ್ ಟ್ವಿಟರ್‌ನಲ್ಲೇ ಬೈದಾಡಿಕೊಂಡಿದ್ದಲ್ಲದೆ, ಪರಸ್ಪರ ಸಮರ ಸಾರುವ ಬೆದರಿಕೆಯನ್ನೂ ಹಾಕಿದ್ದರು. ಶನಿವಾರದ ಘೋಷಣೆಯಿಂದಾಗಿ ಈ ಎಲ್ಲ ಪ್ರಕ್ಷುಬ್ಧತೆಯೂ ಇದೀಗ ತಣ್ಣಗಾದಂತಾಗಿದೆ.
Ad
Stray Dogs: ಬೀದಿ ನಾಯಿಗೆ ಮನೆಯಲ್ಲೇ ಆಹಾರ ನೀಡಿ: ಸುಪ್ರೀಂ ಕೋರ್ಟ್
Mangaluru: ಅತ್ಯಾಚಾರ ಆರೋಪದಡಿ ಪೊಲೀಸ್ ಸಿಬ್ಬಂದಿ ಬಂಧನ
Bollywood;ಮೊದಲ ಮಗುವಿನ ಸಂಭ್ರಮದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ದಂಪತಿ
Shocking; ಸ್ಲೀಪರ್ ಕೋಚ್ ಬಸ್ ನಲ್ಲೆ ಹೆರಿಗೆ: ಹೊರಗೆಸೆದ ನವಜಾತ ಶಿಶು ಸಾ*ವು!
Bengaluru;ವಿಮಾನ, ಬಸ್‌ನಲ್ಲಿ ಮಾದಕ ವಸ್ತು ತರಿಸುತ್ತಿದ್ದ 3 ಮಹಿಳೆಯರ ಬಂಧನ
You seem to have an Ad Blocker on.
To continue reading, please turn it off or whitelist Udayavani.