

Team Udayavani, Aug 19, 2018, 6:00 AM IST
ಬರ್ನ್: ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನಾನ್(80) ಸ್ವಿಜರ್ಲೆಂಡ್‌ನಲ್ಲಿ ಶನಿವಾರ ನಿಧನ ರಾಗಿದ್ದಾರೆ. ಘಾನಾ ಮೂಲದ ಅನ್ನಾನ್ ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದರಿಂದ ಸ್ವಿಜ ರ್ಲೆಂಡ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಪತ್ನಿ, ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ.
ವಿಶ್ವದ ಅತ್ಯುನ್ನತ ಹುದ್ದೆಗೇರಿದ ಮೊದಲ ಆಫ್ರಿಕಾ ಕಪ್ಪು ವರ್ಣೀಯ ವ್ಯಕ್ತಿಯಾಗಿದ್ದ ಕೋಫಿ ಅನ್ನಾನ್, 1997 ರಿಂದ 2006 ರ ವರೆಗೆ ಎರಡು ಅವಧಿಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ದ್ದರು. ನಂತರ ಅವರು ಯುದ್ಧ ಪೀಡಿತ ಸಿರಿಯಾಗೆ ವಿಶ್ವಸಂಸ್ಥೆಯ ವಿಶೇಷ ರಾಯ ಭಾರಿಯಾಗಿದ್ದರು. 2001ರಲ್ಲಿ ವಿಶ್ವಸಂಸ್ಥೆ ಹಾಗೂ ಕೋಫಿ ಅನ್ನಾನ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕರಿಸಲಾಗಿತ್ತು.
ಅನ್ನಾನ್ ಅವಧಿಯಲ್ಲಿ ವಿಶ್ವಸಂಸ್ಥೆ ಅತ್ಯಂತ ಸಂಕೀರ್ಣ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ವ ಹಿ ಸಿದೆ. 1945ರಲ್ಲಿ ಸಂಸ್ಥೆ ಸ್ಥಾಪನೆಯಾದ ನಂತರ ದಲ್ಲೇ ಅತ್ಯಂತ ಸಂಕೀರ್ಣ ಸಮಯ ಇದಾಗಿತ್ತು. ಹೀಗಾಗಿ ಅನ್ನಾನ್ ಸಂಸ್ಥೆಯ ಗೌರ ವವನ್ನು ಮರು ಸ್ಥಾಪಿಸಲು ಭಾರಿ ಪರಿಶ್ರಮ ವಹಿಸಬೇ ಕಾಯಿತು. ಸಂಸ್ಥೆ ಹಗರಣಗಳನ್ನು ಕಂಡಿದ್ದರೂ ಅನ್ನಾನ್ ಬಗ್ಗೆ ವಿಶ್ವವೇ ಇಟ್ಟಿದ್ದ ಗೌರವಕ್ಕೆ ಚ್ಯುತಿ ಬಂದಿರಲಿಲ್ಲ.
ಅನ್ನಾನ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿ ದ್ದಾರೆ. ಹಲವು ಅರ್ಥದಲ್ಲಿ ವಿಶ್ವಸಂಸ್ಥೆ ಎಂದರೇ ಕೋಫಿ ಅನ್ನಾನ್ ಎಂದಾಗಿತ್ತು. ಅಪಾರ ಗೌರವ, ಬದ್ಧತೆಯನ್ನು ಹೊಂದಿದ್ದ ಅವರು, ಸಂಸ್ಥೆ ಯನ್ನು ಈ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು ಎಂದು ವಿಶ್ವಸಂಸ್ಥೆಯ ಹಾಲಿ ಪ್ರಧಾನಿ ಕಾರ್ಯದರ್ಶಿ ಗುಟೆರಸ್ ಹೇಳಿದ್ದಾರೆ.
ಕೋಫಿ ಅನ್ನಾನ್ ವಿಶ್ವದ ಅಭಿವೃದ್ಧಿಗೆ ನೀಡಿದ ಕೊಡುಗೆ ಅತ್ಯಂತ ಗಮನಾರ್ಹ.ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ನರೇಂದ್ರ ಮೋದಿ, ಪ್ರಧಾನಿ
Ad
Melbourne: ಆಸ್ಟ್ರೇಲಿಯಾದಲ್ಲಿ ಅತೀದೊಡ್ಡ ಸಮರಾಭ್ಯಾಸ: ಭಾರತವೂ ಭಾಗಿ
Pakistan ವಿಮಾನಯಾನ ಸಂಸ್ಥೆಯ ಪ್ರಮಾದ: ಪ್ರಯಾಣಿಕ ಕರಾಚಿ ಬದಲು ಸೌದಿ ಅರೇಬಿಯಾಕ್ಕೆ!!
Indonesia: ಇಂಡೋನೇಷ್ಯಾದ ತನಿಂಬಾರ್ ದ್ವೀಪಪ್ರದೇಶದಲ್ಲಿ 6.7 ತೀವ್ರತೆಯ ಪ್ರಬಲ ಭೂಕಂಪ
Video: ಟೇಕ್ ಆಫ್ ಆಗುತ್ತಿದ್ದಂತೆ ಪತನಗೊಂಡ ಲಘು ವಿಮಾನ…
Budapest: ಹಂಗೇರಿ ಲೈಬ್ರರಿಗೆ ಕೊರೆವ ಹುಳು ಕಾಟ: 1 ಲಕ್ಷ ಪುಸ್ತಕ ಸ್ಥಳಾಂತರ!
You seem to have an Ad Blocker on.
To continue reading, please turn it off or whitelist Udayavani.