
ಮಾನವನ ದೇಹಕ್ಕೆ ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳು!
Team Udayavani, Nov 8, 2022, 7:35 AM IST

ಲಂಡನ್: ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ವಿಜ್ಞಾನಿಗಳು ವೈದ್ಯಕೀಯ ಪ್ರಯೋಗದ ಭಾಗವಾಗಿ, ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳನ್ನು ಮಾನವರ ದೇಹಕ್ಕೆ ವರ್ಗಾಯಿಸಿದ್ದಾರೆ.
ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸಂಶೋಧಕರ ತಂಡ ಈ ಪ್ರಯೋಗ ಕೈಗೊಂಡಿದೆ.
“ಈ ಪ್ರಯೋಗವು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೆ, ರಕ್ತಕ್ಕೆ ಸಂಬಂಧಿಸಿದ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವವರ ಚಿಕಿತ್ಸೆಯಲ್ಲಿ ಪ್ರಯೋಗಾಲಯದಲ್ಲಿ ತಯಾರಿಸಿದ ರಕ್ತ ಕಣಗಳು ಕ್ರಾಂತಿಕಾರಿ ಪರಿಣಾಮ ಉಂಟುಮಾಡಲಿದೆ,’ ಎಂದು ವಿಜ್ಞಾನಿಗಳು ಹೇಳಿದ್ದಾರೆ.
“ಈ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅವರದೇ ಗುಂಪಿನ ರಕ್ತ ಸಿಗುವುದು ಕಷ್ಟಸಾಧ್ಯ. ರಕ್ತ ಕಣಗಳನ್ನು ದಾನಿಗಳ ಕಾಂಡಕೋಶದಿಂದ ಬೆಳಸಲಾಯಿತು. ನಂತರ ಕೆಂಪು ರಕ್ತ ಕಣಗಳನ್ನು ಆರೋಗ್ಯಕರ ಸ್ವಯಂ ಸೇವಕರ ದೇಹಕ್ಕೆ ವರ್ಗಾಯಿಸಲಾಯಿತು. ಈ ರೀತಿಯ ಪ್ರಯೋಗವು ವಿಶ್ವದಲ್ಲೇ ಇದೇ ಮೊದಲು,’ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕ್ ನಲ್ಲಿ ದಟ್ಟ ದಾರಿದ್ರ್ಯ: ಉಚಿತ ಆಹಾರದ ಸಾಲಿನಲ್ಲಿ ನೂಕುನುಗ್ಗಲು, 20 ಮಂದಿ ಸಾವು

ನೇಪಾಳ ಅಧ್ಯಕ್ಷರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!

ಖಾಸಗಿ ಚಾಟ್‌ಗೆ “ಬೀಗ’ ಹಾಕಿ ಅಡಗಿಸಿಡಿ! ವಾಟ್ಸ್‌ಆ್ಯಪ್‌ನಿಂದ ಹೊಸ “ಲಾಕ್ ಚಾಟ್’ ಫೀಚರ್

“ವೋಗ್’ ಮುಖಪುಟದಲ್ಲಿ ಮಿಂಚಿದ 106ರ ಟ್ಯಾಟೂ ಕಲಾವಿದೆ!