ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಲಲಿತ್ ಮೋದಿ
Team Udayavani, Jul 17, 2022, 9:22 PM IST
ಲಲಿತ್ ಮೋದಿ ಮತ್ತು ನಟಿ ಸುಶ್ಮಿತಾ ಸೇನ್ ತಮ್ಮ ಸಂಬಂಧದ ಬಗ್ಗೆ ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
“ಇಬ್ಬರು ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎನ್ನುವಂತಹ ಯುಗದಲ್ಲಿದ್ದೇವೆ. ನನ್ನನ್ನು ದೇಶ ಭ್ರಷ್ಟ ಎನ್ನುತ್ತೀರಿ. ಆದರೆ ನೀವೆಂದೂ ತಲುಪಲಾಗದ ಸ್ಥಾನದಲ್ಲಿ ನಾನಿದ್ದೇನೆ.
ನಾನು ಸೃಷ್ಟಿಸಿದ ಐಪಿಎಲ್ ಇವತ್ತು ದೇಶವನ್ನೇ ಒಗ್ಗೂಡಿಸಿ, ಮನರಂಜನೆ ನೀಡುತ್ತಿದೆ. ಬದುಕಿ ಹಾಗೆಯೇ ಬೇರೆಯವರನ್ನು ಬದುಕಲು ಬಿಡಿ’ ಎಂದು ಲಲಿತ್ ಮೋದಿ ಹೇಳಿದ್ದಾರೆ.
“ಸುಶ್ಮಿತಾ ಗೋಲ್ಡ್ ಡಿಗ್ಗರ್’ (ಹಣಕ್ಕಾಗಿ ಹಿಂದೆ ಬಿದ್ದವರು) ಎಂದಿದ್ದ ಟ್ರೋಲ್ಗೆ ಉತ್ತರಿಸಿರುವ ಸುಶ್ಮಿತಾ, “ನಾನು ಬರೀ ಬಂಗಾರವನ್ನಲ್ಲ, ವಜ್ರವನ್ನೇ ಅಗೆಯುತ್ತೇನೆ. ಏನೀಗ’ ಎಂದಿದ್ದಾರೆ.