
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಾಕಿಸ್ತಾನದ ಹೋರಾಟಗಾರ್ತಿ ಮಲಾಲ
Team Udayavani, Nov 10, 2021, 9:01 AM IST

ನವದೆಹಲಿ : ಪಾಕಿಸ್ತಾನದ ಹೋರಾಟಗಾರ್ತಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸೂಫ್ ಮದುವೆಯಾಗಿದ್ದು, ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಗಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ಸಂಬ್ರಮದ ಫೋಟೋಗಳನ್ನು ಶೇರ್ ಮಾಡಿರುವ ಮಲಾಲ, ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನವಾಗಿದೆ. ಅಸ್ಸರ್ ಮತ್ತು ನಾನು ನಮ್ಮ ಜೀವನದ ಪಾಲುದಾರರಾಗಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ ಹ್ಯಾಮ್ ನಲ್ಲಿರುವ ಮನೆಯಲ್ಲಿ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣಕ್ಕಾಗಿ ನಾವು ಒಟ್ಟಿಗೆ ನಡೆಯಲು ಉತ್ಸುಕರಾಗಿದ್ದೇವೆ ಎಂದು ಬರೆದಿದ್ದಾರೆ.
Today marks a precious day in my life.
Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead.
?: @malinfezehai pic.twitter.com/SNRgm3ufWP— Malala (@Malala) November 9, 2021
ಈ ಹಿಂದೆ ಮಲಾಲ ಮದುವೆ ವಿಚಾರವಾಗಿ ಮಾತನಾಡಿದ್ದು ಪಾಕಿಸ್ತಾನ ಇಸ್ಲಾಂ ಸಮುದಾಯಲ್ಲಿ ಚರ್ಚೆಯಾಗಿದ್ದರು, ಅನೇಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಹೇಳಿಕೊಳ್ಳೋದನ್ನ ನೋಡಿ ನನಗೆ ಆಶ್ಚರ್ಯವಾಗಿದೆ. ನೀವು ಒಬ್ಬರನ್ನ ನೀವು ನಂಬಬೇಕೋ ಬೇಡವೋ ಅನ್ನೋದರ ಬಗ್ಗೆ ನೀವು ಖಚಿತತೆ ಹೊಂದಲು ಹೇಗೆ ಸಾಧ್ಯ..? ಜನರು ಯಾಕೆ ಮದುವೆಯಾಗುತ್ತಾರೆ ಅನ್ನೋದೇ ನನಗೆ ಅರ್ಥವಾಗೋದಿಲ್ಲ.
ನಿಮ್ಮ ಜೀವನಕ್ಕೆ ಒಬ್ಬ ಸಂಗಾತಿ ಬೇಕು ಎನಿಸಿದ್ರೆ ನೀವು ಮದುವೆ ನೋಂದಣಿ ಪತ್ರಕ್ಕೆ ಏಕೆ ಸಹಿ ಹಾಕಬೇಕು..? ಸುಮ್ಮನೇ ನೀವು ಪಾರ್ಟ್ನರ್ಗಳಂತೆ ಇರಬಹುದಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆನಡಾದ ಹಿಂದೂ ದೇವಸ್ಥಾನದಲ್ಲಿ ಭಾರತ ವಿರೋಧಿ ಬರಹಗಳು; ವ್ಯಾಪಕ ಆಕ್ರೋಶ

1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್ : ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್

“ಮಾಹಿತಿ ಯುದ್ಧ ನಡೆಸುತ್ತಿದೆ..” ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಭಾರತದ ಬೆಂಬಲಕ್ಕೆ ನಿಂತ ರಷ್ಯಾ

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಬರ್ತ್ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 8 ಮಂದಿ ಸಾವು, 3 ಮಂದಿಗೆ ಗಾಯ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
