ʼಪೋಕೆಮಾನ್ ಗೋʼ ಗೇಮ್‌ ಚಟ: 64 ಮೊಬೈಲ್‌ ನಲ್ಲಿ ನಿತ್ಯ ಗೇಮ್‌ ಆಡುತ್ತಾರೆ ಈ 74 ವರ್ಷದ ವೃದ್ಧ.!

Team Udayavani, Jan 25, 2023, 10:14 AM IST

thumb-1

ನವದೆಹಲಿ: ಇತ್ತೀಚಿನ ಯುವಜನರು ಮೊಬೈಲ್‌ ಫೋನ್‌ ಬಿಟ್ಟು ಎಲ್ಲಿಗೂ ಹೋಗಲ್ಲ. ಎಲ್ಲಿ ಹೋದರೂ ಮೊಬೈಲ್‌ ಫೋನ್‌ ಬೇಕು ಅದರಲ್ಲಿ ಡೇಟಾ ಪ್ಯಾಕ್‌ ಇರಬೇಕು. ರೀಲ್ಸ್‌ ನೋಡಲು ಚಾರ್ಜ್‌ ಇರಬೇಕು. ಇವಿಷ್ಟಿದ್ದರೆ ಸಾಕು ದಿನದ ಸಮಯ ವ್ಯರ್ಥ ಆಗುವುದೇ ಗೊತ್ತಾಗುವುದಿಲ್ಲ.

ಸಣ್ಣ ಮಕ್ಕಳು ಕೂಡ ಪಬ್‌ ಜಿ, ಫ್ರೀ ಫೈಯರ್‌ ನಂತಹ ಗೇಮ್‌ ಗಳ ದಾಸನಾಗುತ್ತಿದ್ದಾರೆ. ಪೋಕೆಮಾನ್ ಯಾರಿಗೆ ಗೊತ್ತಿಲ್ಲ ಹೇಳಿ, ಟಿವಿಗಳಲ್ಲಿ ನಾವು ನೋಡಿದ್ದೇವೆ. ವಿಡಿಯೋ ಗೇಮ್‌ ಗಳಲ್ಲಿ ಗೇಮ್‌ ಆಡಿದ್ದೇವೆ. ಇತ್ತೀಚೆಗಿನ ದಿನಗಳಲ್ಲಿ ಈ ʼಪೋಕೆಮಾನ್ ಗೋʼ ಎನ್ನುವ ಗೇಮ್‌ ವೊಂದು ಬಹಳ ಜನಪ್ರಿಯವಾಗಿದೆ.

ಈ ಗೇಮ್‌ 8 ವರ್ಷದ ಮಕ್ಕಳಿಂದ ಹಿಡಿದು 80 ವರ್ಷ ದಾಟಿದ ವೃದ್ಧರಿಗೂ ಫೇವರಿಟ್. ತೈವಾನ್‌ ಮೂಲದ ಚೆನ್ ಸ್ಯಾನ್-ಯುವಾನ್ ಎಂಬ 74 ವರ್ಷದ ಅಜ್ಜನೊಬ್ಬ ಈ ಗೇಮ್‌ ನ ದಾಸನಾಗಿದ್ದಾನೆ. ಅದು ನಮ್ಮ ನಿಮ್ಮ ಹಾಗೆ ಒಂದರ್ಧ ಗಂಟೆ ಗೇಮ್‌ ಆಡಿ, ಅಥವಾ ರೀಲ್ಸ್‌ ನೋಡುವ ದಾಸನಾಗಿ ಅಲ್ಲ. ಪ್ರತಿನಿತ್ಯ, ಪ್ರತಿ ನಿಮಿಷವೂ ಗೇಮ್‌ ನಲ್ಲೇ ಕಾಲ ಕಳೆಯುವ ಚಟ ಇವರದು.!

2018 ರಲ್ಲಿ ಚೆನ್ ಸ್ಯಾನ್-ಯುವಾನ್ ಅವರ ಮೊಮ್ಮಗ ಪೋಕೆಮಾನ್ ಗೋ ಮೊಬೈಲ್‌ ಗೇಮ್‌ ನ್ನು ಅಜ್ಜನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಿನಿಂದ ಹಿಡಿದ ಚಟ ಇಂದಿಗೂ ಹೋಗಿಲ್ಲ. ಎಲ್ಲಿಯವರೆಗೆ ಅಂದರೆ ಗೇಮ್‌ ಆಡಲು ಇವರು ಒಂದು ಸೈಕಲ್‌ ನಲ್ಲಿ ದೊಡ್ಡ ಪರದೆಯನ್ನೇ ಹಾಕಿರುವಂತೆ ಸ್ಟ್ಯಾಂಡ್‌ ವೊಂದನ್ನು ಇಟ್ಟು ಅದರಲ್ಲಿ ಒಂದೊಂದೇ ಮೊಬೈಲ್‌ ಇಟ್ಟಿದ್ದಾರೆ. ಒಂದಲ್ಲ ಎರಡಲ್ಲ 64 ಮೊಬೈಲ್‌ ಫೋನ್‌ ಗಳಲ್ಲಿ ಇವರು ಗೇಮ್‌ ಆಡುತ್ತಾರೆ.

ಎಲ್ಲಾ ಮೊಬೈಲ್‌ ಗಳಲ್ಲಿ ಪೋಕೆಮಾನ್ ಗೋ ಆಡುತ್ತಾರೆ. ಇವರು ಎಲ್ಲಿ ಹೋದರೂ, ಯಾವ ಬೀದಿ ಸುತ್ತಿದ್ದರೂ, ಇವರನ್ನು ಎಲ್ಲರೂ ನೋಡುತ್ತಾರೆ. ಯಾಕೆಂದರೆ ಇವರು ಮೊಬೈಲ್‌ ಅಂಗಡಿಯನ್ನೇ ಹೊತ್ತುಕೊಂಡು ಹೋದವರಂತೆ, ಎಲ್ಲಾ ಮೊಬೈಲ್‌ ನಲ್ಲೂ ಪೋಕೆಮಾನ್ ಗೋ ಗೇಮ್‌ ಆನ್‌ ಮಾಡಿಕೊಂಡೇ ಹೋಗುತ್ತಾರೆ.

ಇವರನ್ನು ಸ್ಥಳೀಯರು ʼಪೋಕೆಮಾನ್ ಗೋ ಅಜ್ಜʼ ಎಂದೇ ಕರೆಯುತ್ತಾರೆ. ಆ ಹೆಸರಿನಿಂದಲೇ ಇವರು ಖ್ಯಾತಿಯನ್ನು ಗಳಿಸಿದ್ದಾರೆ.ಇವರ ಈ ಗೇಮ್‌ ಚಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಟಾಪ್ ನ್ಯೂಸ್

ಕೋಟ: ಪೊಲೀಸ್‌ ಬಂಧನಕ್ಕೆ ಹೆದರಿ ಆತ್ಮಹತ್ಯೆ

ಕೋಟ: ಪೊಲೀಸ್‌ ಬಂಧನಕ್ಕೆ ಹೆದರಿ ಆತ್ಮಹತ್ಯೆ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋ. ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

ಆಸ್ಟ್ರೇಲಿಯ ಟೆಸ್ಟ್‌ ಸರಣಿ: ಭಾರತ ತಂಡದಲ್ಲಿ ನಾಲ್ವರು ನೆಟ್‌ ಬೌಲರ್

ಆಸ್ಟ್ರೇಲಿಯ ಟೆಸ್ಟ್‌ ಸರಣಿ: ಭಾರತ ತಂಡದಲ್ಲಿ ನಾಲ್ವರು ನೆಟ್‌ ಬೌಲರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chinese Spy Balloon Spotted Surveilling US Nuclear Weapons Sites

ಅಮೆರಿಕ ಪರಮಾಣು ಶಸ್ತ್ರಾಸ್ತ್ರ ತಾಣಗಳ ಮೇಲೆ ಚೀನೀ ಸ್ಪೈ ಬಲೂನ್ ಕಣ್ಗಾವಲು

ಪಾಕ್‌ಗೆ ಐಎಂಎಫ್ ಶಾಕ್‌: ಸಾಲದ ಹೊಸ ಪ್ರಸ್ತಾವನೆ ತಿರಸ್ಕಾರ

ಪಾಕ್‌ಗೆ ಐಎಂಎಫ್ ಶಾಕ್‌: ಸಾಲದ ಹೊಸ ಪ್ರಸ್ತಾವನೆ ತಿರಸ್ಕಾರ

tdy-20

30 ಎಂಕ್ಯೂ-9ಬಿ ಡ್ರೋನ್‌ಗಳ ಖರೀದಿಗೆ ಒಪ್ಪಂದ

tdy-17

ಬಡ್ಡಿ ದರ ಏರಿಸಿದ ಬ್ಯಾಂಕ್‌ ಆಫ್ ಇಂಗ್ಲೆಂಡ್‌

ಅಮೆರಿಕ ಅಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ?

ಅಮೆರಿಕ ಅಧ್ಯಕ್ಷ ಚುನಾವಣೆಗೆ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ?

MUST WATCH

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಹೊಸ ಸೇರ್ಪಡೆ

ಕೋಟ: ಪೊಲೀಸ್‌ ಬಂಧನಕ್ಕೆ ಹೆದರಿ ಆತ್ಮಹತ್ಯೆ

ಕೋಟ: ಪೊಲೀಸ್‌ ಬಂಧನಕ್ಕೆ ಹೆದರಿ ಆತ್ಮಹತ್ಯೆ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋ. ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.