
ಸೀಕ್ವೇರಿಯಂನಲ್ಲಿ 50 ವರ್ಷ ಬಂಧಿಯಾಗಿದ್ದ ಲೋಲಿಟ ಇನ್ನು ಬಂಧ ಮುಕ್ತ…!
Team Udayavani, Apr 2, 2023, 8:15 AM IST

ಸುಮಾರು ಐವತ್ತು ವರ್ಷಗಳಗಿಂತಲೂ ಅಧಿಕವಾಗಿ ಯಾರ ಒಡನಾಟವಿಲ್ಲದೇ ನೀರಿನಲ್ಲೇ ಒಂಟಿಯಾಗಿ ಬಂಧಿಯಾಗಿರುವುದನ್ನು ಕಲ್ಪಿಸುವುದು ಕಷ್ಟವೇ. ಕೇವಲ ಮಾನವ ಜೀವಿಗೆ ಮಾತ್ರವಲ್ಲ, ಯಾವುದೇ ಜೀವಿಗಾದರೂ ಅದು ಅಸಾಧ್ಯವೆನಿಸಬಹುದು. ಈ ಬಂಧನದಿಂದ ಮುಕ್ತವಾಗಿ ಸ್ವತಂತ್ರವಾಗುವ ಘಳಿಗೆ ಅದೆಷ್ಟು
ಖುಷಿ ಕೊಡಬಹುದು….ಈಗ ಹೇಳ ಹೊರಟಿರುವುದು ಐವತ್ತು ವರ್ಷಗಳ ಹಿಂದೆ ಬಂಧಿಯಾಗಿ, ನಿರಂತರ ನೋಡ ಬಂದ ವೀಕ್ಷಕರಿಗೆಲ್ಲ ಮನರಂಜನೆಯ ನೀಡಿ ಸ್ವತಂತ್ರವಾಗುತ್ತಿರುವ ಲೋಲಿಟ ತಿಮಿಂಗಲದ ಬಗ್ಗೆ!
ಏನಿದು?
ಲೋಲಿಟ ತಿಮಿಂಗಲಗಳ ಪ್ರಬೇಧಗಳಲ್ಲೇ ಅತೀ ಅಪಾಯಕಾರಿ ತಿಮಿಂಗಲವಾದ ಆರ್ಕ್ ( Orch ) ಕುಟುಂಬಕ್ಕೆ ಸೇರಿದ್ದು. 1970ರಲ್ಲಿ ವಾಯುವ್ಯ ಫೆಸಿಫಿಕ್ ಸಮುದ್ರದಿಂದ 90 ತಿಮಿಂಗಲಗಳನ್ನು ಹಿಡಿಯಲಾಗಿತ್ತು. ಆಗ ಹಿಡಿದ 4 ವರ್ಷದ ಲೋಲಿಟಾವನ್ನು ಅಮೆರಿಕದ ಮಿಯಾಮಿ ಸೀಅಕ್ವೇರಿಯಂನಲ್ಲಿ ಇರಿಸಲಾಗಿತ್ತು. ಅದನ್ನು ಸೆರೆ ಹಿಡಿದಾಗಿಂದಲೂ ಅದರ ಬಿಡುಗಡೆಗೆ ಪ್ರಾಣಿ ಹಕ್ಕುಗಳ ರಕ್ಷಣೆಯ ಹೋರಾಟಗಾರರು ಪ್ರಯತ್ನಿಸುತ್ತಲೇ ಇದ್ದಾರೆ.
35ರಿಂದ 80 ಅಡಿಯ ಕೊಳ
ಆರ್ಕ್ ತಿಮಿಂಗಲಗಳು 90 ವರ್ಷದ ವರೆಗೂ ಬದುಕಬಹುದು ಎಂದು ಅಂದಾಜಿಸಲಾಗಿದೆ. ಲೋಲಿಟಾ ಜೀವಿತಾವಧಿಯ ಅರ್ಧ ಆಯಸ್ಸನ್ನು ಮೀರಿಯಾಗಿದೆ. ಅಂದಿನಿಂದ ಕಳೆದ ವರ್ಷದವರೆಗೂ ಲೋಲಿಟ ಸಾರ್ವಜನಿಕ ಪ್ರದರ್ಶನದಲ್ಲಿ ಭಾಗಿಯಾಗುತ್ತಲೇ ಬಂದಿದೆ. ಮಿಯಾಮಿ ಸೀಕ್ವೇರಿಯಂನಲ್ಲಿ ಕಳೆದ 50 ವರ್ಷಗಳಿಂದ ಸುಮಾರು 35ರಿಂದ 80 ಅಡಿಯಷ್ಟು ಜಾಗದ ನೀರಿನ ತೊಟ್ಟಿಯಲ್ಲಿ ಲೋಲಿಟ ಬದುಕು ಸವೆಸಿದೆ.
1970ರಲ್ಲಿ ಹಿಡಿಯಲಾದ 90 ತಿಮಿಂಗಲಗಳ ಪೈಕಿ ಈಗ ಉಳಿದಿರುವುದು ಲೋಲಿಟ ಒಂದೇ. ಇದೀಗ ಲೋಲಿಟಾಗೆ ಮರಳಿ ತನ್ನ ಮನೆಯನ್ನು ಸೇರುವ ಕಾಲ. ಮಿಯಾಮಿ ಸೀಕ್ವೇರಿಯಂನಿಂದ ಲೋಲಿಟಾವನ್ನು ಬಿಡುಗಡೆ ಗೊಳಿಸಲಾಗುತ್ತಿದೆ. ಲೋಲಿಟ ಮತ್ತೆ ತನ್ನ ಕುಟುಂಬವನ್ನು ಸೇರಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಚಿಕ್ಕಮಗಳೂರು: ನ್ಯಾಯಕ್ಕಾಗಿ 4 ವರ್ಷದ ಮಗು ಜತೆ ರಾತ್ರಿ 1ಗಂಟೆವರೆಗೂ ಠಾಣೆಯಲ್ಲಿ ಕೂತ ಮಹಿಳೆ!

Kadaba: ಕಾಡಾನೆ ದಾಳಿ; ಕೆಎಸ್ಸಾರ್ಟಿಸಿ ಬಸ್ ಗೆ ಹಾನಿ

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್ ವಿರುದ್ಧ ಜೈಲು ಅಧಿಕಾರಿಗಳ ದೂರು