ಲಂಡನ್: ಮಿಸ್ ಇಂಗ್ಲೆಂಡ್ ಗೆ ಮೇಕಪ್ ಇಲ್ಲದೆ ಸ್ಪರ್ಧಿಸಿದ ಮೊದಲ ಸ್ಪರ್ಧಿ
Team Udayavani, Aug 29, 2022, 7:30 AM IST
ಲಂಡನ್: ಮಾಡೆಲ್ಗಳೆಂದರೆ ಮೇಕಪ್ ಹಾಕಿಕೊಂಡೇ ಇರುತ್ತಾರೆ ಎನ್ನುವ ಕಲ್ಪನೆಯಿದೆ. ಆದರೆ ಲಂಡನ್ ವಾಸಿಯಾಗಿರುವ 20 ವರ್ಷದ ಯುವತಿ ಮೆಲಿಸಾ ರೂಫ್ ಅದನ್ನು ಸುಳ್ಳೆಂದು ತೋರಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ನಡೆದ ಮಿಸ್ ಇಂಗ್ಲೆಂಡ್ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಮೆಲಿಸಾ ಮೇಕಪ್ ಹಾಕಿಕೊಳ್ಳದೆಯೇ ಸ್ಪರ್ಧಿಸಿ ತೀರ್ಪುಗಾರರ ಮನ ಗೆದ್ದಿದ್ದಾರೆ.
ಅಕ್ಟೋಬರ್ನಲ್ಲಿ ನಡೆಯಲಿರುವ ಅಂತಿಮ ಹಂತದ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಮಿಸ್ ಇಂಗ್ಲೆಂಡ್ನ 94 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲನೇ ಬಾರಿಗೆ ಸ್ಪರ್ಧಿಯೊಬ್ಬರು ಮೇಕಪ್ ಇಲ್ಲದೆಯೇ ಸ್ಪರ್ಧೆಗಿಳಿದಿರುವುದು. “ನನಗೂ ಮೇಕಪ್ ಇಲ್ಲದಿದ್ದರೆ ಆತ್ಮವಿಶ್ವಾಸ ಕುಗ್ಗುತ್ತಿತ್ತು. ಆದರೆ ನನ್ನ ನಿಜಸೌಂದರ್ಯವನ್ನು ಪ್ರಪಂಚದೆದುರು ತೋರಿಸಬೇಕೆಂದು ಈ ನಿರ್ಧಾರ ಮಾಡಿದೆ. ಎಲ್ಲ ಹೆಣ್ಣು ಮಕ್ಕಳೂ ಅವರದ್ದೇ ಆದ ರೀತಿಯಲ್ಲಿ ಸುಂದರವಾಗಿಯೇ ಇರುತ್ತಾರೆ’ ಎನ್ನುತ್ತಾರೆ ಮೆಲಿಸಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ