ಅಂದು ಸಹ ಪೈಲೆಟ್‌ ಆಗಿದ್ದ ಪತಿ ಸಾವು; ಇಂದು ಸಹ ಪೈಲೆಟ್‌ ಆಗಿ ಪತ್ನಿಯೂ ಸಾವು.!

ವಿಮಾನ ಯಶಸ್ವಿಯಾಗಿ ಲ್ಯಾಂಡ್‌ ಆಗಿದ್ದರೆ ಕ್ಯಾಪ್ಟನ್‌ ಆಗುತ್ತಿದ್ದರು; ಕ್ಯಾಪ್ಟನ್‌ ಕನಸು ಕಂಡಿದ್ದಾಕೆ ಸಜೀವ ದಹನ

Team Udayavani, Jan 16, 2023, 9:39 AM IST

TDY-2

ಕಾಠ್ಮಂಡು: ನೇಪಾಳ ವಿಮಾನ ಪತನದಲ್ಲಿ 72 ಮಂದಿ ಅಸುನೀಗಿದ್ದಾರೆ. ಇನ್ನೇನು ವಿಮಾನದಿಂದ ಇಳಿದು ತಮ್ಮ ತಮ್ಮ ಕೆಲಸ – ಕಾರ್ಯದಲ್ಲಿ ನಿರತರಾಗಬೇಕಿದ್ದ ಜನ ಒಂದು ಕ್ಷಣದಲ್ಲೇ ಸಜೀವ ದಹನವಾಗಿದ್ದಾರೆ.

ಐವರು ಭಾರತೀಯರು, 15 ಮಂದಿ ವಿದೇಶಿಗರು, ನಾಲ್ವರು ಸಿಬ್ಬಂದಿಗಳು ಸೇರಿ ಒಟ್ಟು 72 ಮಂದಿ ದುರಂತ ಅಂತ್ಯ ಕಂಡಿದ್ದಾರೆ. 72 ಮಂದಿಯಲ್ಲಿ ಇನ್ನೇನು ಒಂದು ಯಶಸ್ವಿ ಲ್ಯಾಂಡಿಂಗ್‌ ನಿಂದ ವರ್ಷಗಟ್ಟಲೇ ಕ್ಯಾಪ್ಟನ್‌ ಆಗಬೇಕೆನ್ನುವ ಕನಸನ್ನು ನನಸಾಗಿಸಬೇಕಿದ್ದ ಅಂಜು ಖತಿವಾಡ ಬೆಂಕಿ ಕೆನ್ನಾಲೆಯಲ್ಲಿ ಸಜೀವ ದಹನವಾಗಿ ಹೋದರು.

 ಸಹ ಪೈಲಟ್ ಆಗಿದ್ದ ಪತಿ: ವಿಮಾನ ಅಪಘಾತದಲ್ಲೇ ಮೃತ್ಯು:

ಅದು 2006, ಜೂನ್‌ 21 ರ ದಿನ. ಇದೇ ಯೇಟಿ ಏರ್‌ ಲೈನ್ಸ್‌ ನಲ್ಲಿ ಸಹ ಪೈಲಟ್ ಆಗಿ ಅಂಜು ಅವರ ಗಂಡ ದೀಪಕ್ ಪೋಖ್ರೆಲ್ ವಿಮಾನದಲ್ಲಿದ್ದರು. ನೇಪಾಲಗಂಜ್‌ನಿಂದ ಜುಮ್ಲಾಗೆ ತೆರಳುತ್ತಿದ್ದ  9ಎನ್‌  ಇಕ್ಯೂ (9N AEQ ) ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ 6 ಮಂದಿ ಪ್ರಯಾಣಿಕರು ಹಾಗೂ 4 ಸಿಬ್ಬಂದಿಗಳು ಮೃತಪಟ್ಟಿದ್ದರು. ಈ ನಾಲ್ವರಲ್ಲಿ ಒಬ್ಬರು ಅಂಜು ಅವರ ಪತಿಯೂ ಆಗಿದ್ದರು.

ವೃತ್ತಿಯಲ್ಲಿ ಪೈಲೆಟ್‌ ಆಗಿದ್ದ ಅಂಜು ಗಂಡನ ನಿಧನದ ಬಳಿಕ ಕುಗ್ಗಲಿಲ್ಲ. ಹತ್ತಾರು ವಿಮಾನಗಳನ್ನು ಯಶಸ್ವಿಯಾಗಿ ಲ್ಯಾಂಡ್‌ ಮಾಡಿ ಸೈ ಎನ್ನಿಸಿಕೊಂಡಿದ್ದರು. ಪೈಲೆಟ್‌ ಆಗಲು 100 ಗಂಟೆ ವಿಮಾನ ಹಾರಿಸುವ  ಅನುಭವಬೇಕು. ಇದನ್ನು ಈಗಾಗಲೇ ಬಹುತೇಕವಾಗಿ ನಿಭಾಯಿಸಿದ ಅಂಜು ರವಿವಾರ ಒಂದೇ ಒಂದು ಲ್ಯಾಂಡಿಂಗ್‌ ಮಾಡಿದ್ದರೆ ವಿಮಾನದ ಕ್ಯಾಪ್ಟನ್‌ ಆಗುತ್ತಿದ್ದರು.

ಕಳೆದ 35 ವರ್ಷಗಳಿಂದ ಅನೇಕ ಪೈಲೆಟ್‌ ಗಳಿಗೆ ಸಲಹೆ ನೀಡುತ್ತಾ, ತರಬೇತಿ ಕೊಡುತ್ತಿದ್ದ ಕಮಲ್ ಕೆ.ಸಿ‌ ವಿಮಾದಲ್ಲಿ ಅನುಭವಿ ಕ್ಯಾಪ್ಟನ್‌ ಆಗಿದ್ದರು. ಅಂಜು ಅವರಿಗೆ ರವಿವಾರ ಕಮಲ್‌ ಅವರು ಈ ಹಿಂದೆ ಎಷ್ಟೋ ಪೈಲೆಟ್‌ ಗಳಿಗೆ ನೀಡುತ್ತಿದ್ದ ಸೂಚನೆಗಳನ್ನು ನೀಡುತ್ತಿದ್ದರು. ಇನ್ನೇನು 10 ಸೆಕೆಂಡ್‌ ಗಳು ವಿಮಾನ ಲ್ಯಾಂಡ್‌ ಆಗುತ್ತಿತ್ತು. ಒಂದು ಯಶಸ್ವಿಯಾಗಿ ವಿಮಾನ ಲ್ಯಾಂಡ್‌ ಆಗುತ್ತಿದ್ದರೆ ಮುಖ್ಯ ಪೈಲಟ್ ಪರವಾನಗಿ ಪಡೆದು ಕ್ಯಾಪ್ಟನ್‌ ಆಗುತ್ತಿದ್ದರು. ಆದರೆ ವಿಧಿಯ ಆಟದ ಮುಂದೆ ಅದು ಸಾಧ್ಯವಾಗಲೇ ಇಲ್ಲ.

ವಿಮಾನ ಲ್ಯಾಂಡಿಂಗ್‌ ವೇಳೆ ನೆಲಕ್ಕೆ ಅಪ್ಪಳಿಸಿ ಬೆಂಕಿ ಕಾಣಿಸಿಕೊಂಡು ಅಂಜು ಸಹಿತ ಎಲ್ಲರ ಬದುಕು ದುರಂತವಾಗಿ ಅಂತ್ಯ ಕಂಡಿದೆ.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.