Calendar

Updated: 11:00 AM IST

Monday 18 Aug, 2025

image
Home
translate

UV English

Visit UV Englisharrow_outward

translate
image

UV English

language switch
search

Get App

android

Android

apps

iOS

home_btn

ಮುಖಪುಟ

home_btn

ಸುದ್ದಿ ವಿಭಾಗ

home_btn

ದಿನ ಭವಿಷ್ಯ

home_btn

ಹೊಂಗಿರಣ

home_btn

Search

back buttonಜಗತ್ತುJul 12, 2025, 6:48 AM ISTJul 12, 2025, 6:48 AM IST

ಭಾರತದಲ್ಲಿ ದಾಳಿಗೆ ಪಾಕ್‌ ಉಗ್ರರಿಗೆ “ನೇಪಾಲ ದಾರಿ’!

ನೇಪಾಲ ಅಧ್ಯಕ್ಷರ ಸಲಹೆಗಾರ ಸುನಿಲ್‌ ಥಾಪಾ ಎಚ್ಚರಿಕೆ

ಭಾರತದಲ್ಲಿ ದಾಳಿಗೆ ಪಾಕ್‌ ಉಗ್ರರಿಗೆ “ನೇಪಾಲ ದಾರಿ’!
sudhi_img1

Team Udayavani

ಕಾಠ್ಮಂಡು: ಪಾಕಿಸ್ಥಾನ‌ ಮೂಲದ ಜೈಷ್‌-ಎ- ಮೊಹಮ್ಮದ್‌, ಲಷ್ಕರ್‌-ಎ-ತಯ್ಯಬಾ ಉಗ್ರ ಸಂಘಟನೆಗಳು ನೇಪಾಲದ ಮೂಲಕ ಭಾರತವನ್ನು ಪ್ರವೇಶಿಸಿ ಉಗ್ರ ಕೃತ್ಯ ನಡೆಸುವ ಅಪಾಯವಿದೆ ಎಂದು ನೇಪಾಲ ಅಧ್ಯಕ್ಷ ಕೆ.ಪಿ.ಓಲಿ ಅವರ ಸಲಹೆಗಾರ ಸುನಿಲ್‌ ಬಹದ್ದೂರ್‌ ಥಾಪಾ ಅವರು ಎಚ್ಚರಿಕೆ ನೀಡಿದ್ದಾರೆ.

ನೇಪಾಲ ಅಂತಾರಾಷ್ಟ್ರೀಯ ಸಹಕಾರ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದು, ಪಾಕಿಸ್ಥಾನ‌ವು ಪೋಷಿಸುತ್ತಿರುವ ಉಗ್ರರು ಭಾರತವಷ್ಟೇ ಅಲ್ಲದೇ, ಇಡೀ ದಕ್ಷಿಣ ಏಷ್ಯಾ ಭಾಗದ ಶಾಂತಿ ಹಾಗೂ ಸ್ಥಿರತೆಗೆ ಸವಾಲಾಗಿದ್ದಾರೆ. ಪಾಕಿ ಸ್ಥಾನವು ನೇಪಾಲದ ಭೂ-ಸಾರಿಗೆ ಮಾರ್ಗವನ್ನು ಬಳಸಿ ಭಾರತಕ್ಕೆ ಉಗ್ರರನ್ನು ಕಳುಹಿಸುತ್ತಿರುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಥಾಪಾ, ಈ ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ಭಾರತದ ಸಹಾಯವನ್ನೂ ಕೋರಿದ್ದಾರೆ.

ಅಲ್ಲದೇ ಉಗ್ರರಿಗೆ ಪಾಕಿಸ್ಥಾನ‌ ನೀಡುತ್ತಿರುವ ಬೆಂಬ ಲವು ಸಾರ್ಕ್‌ನ ಕಾರ್ಯದಕ್ಷತೆಗೆ ಹಾಗೂ ಪ್ರಾದೇಶಿಕ ಗಡಿಗಳ ಸಮನ್ವಯಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದ ಅವರು, ಉಗ್ರವಾದವನ್ನು ನಿಗ್ರಹಿಸಲು ಯಾವುದೇ ಪ್ರಾದೇಶಿಕ ಆಡಳಿತವೂ ಇಬ್ಬಗೆ ನೀತಿಯನ್ನು ಅನುಸರಿಸಬಾರದು. ಪ್ರಾದೇಶಿಕ ಸಮನ್ವಯತೆ ಮೂಲಕ ಗಡಿಯಾಚೆಗಿನ ಅಕ್ರಮ ಹಣ ವರ್ಗಾವಣೆ ತಡೆ, ಭದ್ರತೆ, ಗುಪ್ತಚರ ಮಾಹಿತಿ ಹಂಚಿಕೊಳ್ಳುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದ್ದಾರೆ.ಕಾರ್ಯಕ್ರಮದಲ್ಲಿ ಪಹಲ್ಗಾಮ್‌ ಉಗ್ರ ದಾಳಿ, ಆಪರೇಷನ್‌ ಸಿಂದೂರ ಬಗ್ಗೆಉಲ್ಲೇಖಿಸಲಾಗಿದೆ.

ನೇಪಾಲ-ಭಾರತದ ಗಡಿಯಲ್ಲಿ
ಕನಿಷ್ಠ ಭದ್ರತೆಯೇ ಲಾಭ?
ಭಾರತ ಹಾಗೂ ನೇಪಾಲದ ನಡುವೆ 1,751 ಕಿ.ಮೀ. ಮುಕ್ತವಾದ ಗಡಿಯಿದ್ದು, ಇಲ್ಲಿ ಭದ್ರತಾ ತಪಾಸಣೆ ಬಹಳ ಕಡಿಮೆ ಮಟ್ಟದಲ್ಲಿದೆ. ಆದ್ದರಿಂದ ಉಗ್ರರು ನೇಪಾಲಿಗರ ದಾಖಲೆಗಳನ್ನು ನಕಲು ಮಾಡಿ ಸುಲಭವಾಗಿ ಭಾರತದ ಗಡಿ ಪ್ರವೇಶಿಸಬಹುದಾಗಿದೆ. ಈ ಹಿಂದೆಯೂ ಹಲವು ಬಾರಿ ನೇಪಾಲ ಗಡಿ ಮೂಲಕ ಪ್ರವೇಶಿಸಲು ಯತ್ನಿಸಿದ್ದ ಉಗ್ರರನ್ನು ಬಂಧಿಸಲಾಗಿದೆ. 1999ರಲ್ಲಿ ನಡೆದ ಕಂದಾಹಾರ ಹೈಜಾಕ್‌ ವೇಳೆಯೂ ಇದೇ ಮಾದರಿ ಗಡಿ ಉಲ್ಲಂಘನೆ ನಡೆದಿತ್ತು.

ಇನ್ನಷ್ಟು ಸುದ್ದಿ ಈ ವಿಭಾಗದಿಂದ

2 hours ago

ಯುದ್ಧ ತಡೆಗಾಗಿ ಇಂದು ಡೊನಾಲ್ಡ್‌ ಟ್ರಂಪ್‌, ಜೆಲೆನ್‌ಸ್ಕಿ ಚರ್ಚೆ

ಯುದ್ಧ ತಡೆಗಾಗಿ ಇಂದು ಡೊನಾಲ್ಡ್‌ ಟ್ರಂಪ್‌, ಜೆಲೆನ್‌ಸ್ಕಿ ಚರ್ಚೆ

2 hours ago

ಯುದ್ಧದಿಂದ ಉಕ್ರೇನ್‌ ಮಕ್ಕಳ ರಕ್ಷಿಸಿ: ವ್ಲಾದಿಮಿರ್‌ ಪುತಿನ್‌ಗೆ ಟ್ರಂಪ್‌ ಪತ್ನಿಯಿಂದ ಪತ್ರ

ಯುದ್ಧದಿಂದ ಉಕ್ರೇನ್‌ ಮಕ್ಕಳ ರಕ್ಷಿಸಿ: ವ್ಲಾದಿಮಿರ್‌ ಪುತಿನ್‌ಗೆ ಟ್ರಂಪ್‌ ಪತ್ನಿಯಿಂದ ಪತ್ರ

3 hours ago

ಪಾಕಿಸ್ಥಾನದ ರಕ್ಷಕನಾಗಿ ದೇವರು ನನ್ನ ಸೃಷ್ಟಿಸಿದ್ದಾನೆ: ಆಸಿಮ್‌ ಮುನೀರ್‌

ಪಾಕಿಸ್ಥಾನದ ರಕ್ಷಕನಾಗಿ ದೇವರು ನನ್ನ ಸೃಷ್ಟಿಸಿದ್ದಾನೆ: ಆಸಿಮ್‌ ಮುನೀರ್‌

Yesterday

US-Russia; ಟ್ರಂಪ್‌- ಪುತಿನ್‌ ಮಾತುಕತೆ ಫ‌ಲಪ್ರದ: ಫ‌ಲಿತಾಂಶ ಸಶೇಷ

US-Russia; ಟ್ರಂಪ್‌- ಪುತಿನ್‌ ಮಾತುಕತೆ ಫ‌ಲಪ್ರದ: ಫ‌ಲಿತಾಂಶ ಸಶೇಷ

Yesterday

ಭಾರತಕ್ಕೆ 25% ಸುಂಕ ವಿನಾಯಿತಿ: ಟ್ರಂಪ್‌ ಸುಳಿವು

ಭಾರತಕ್ಕೆ 25% ಸುಂಕ ವಿನಾಯಿತಿ: ಟ್ರಂಪ್‌ ಸುಳಿವು

Yesterday

ರೋಬೋಟ್‌ಗೆ ಗರ್ಭಧಾರಣೆ: ನೈಸರ್ಗಿಕ ಸೃಷ್ಟಿಗೆ ಚೀನ ಸವಾಲು!

ರೋಬೋಟ್‌ಗೆ ಗರ್ಭಧಾರಣೆ: ನೈಸರ್ಗಿಕ ಸೃಷ್ಟಿಗೆ ಚೀನ ಸವಾಲು!

Yesterday

ಸಿಯಾಟೆಲ್‌ನ 'ಸ್ಪೇಸ್‌ ನೀಡಲ್‌' ಮೇಲೆ ತ್ರಿವರ್ಣ ಧ್ವಜಾರೋಹಣ

ಸಿಯಾಟೆಲ್‌ನ 'ಸ್ಪೇಸ್‌ ನೀಡಲ್‌' ಮೇಲೆ ತ್ರಿವರ್ಣ ಧ್ವಜಾರೋಹಣ

Yesterday

ಆಪರೇಷನ್‌ ಸಿಂದೂರಕ್ಕೆ 13 ಪಾಕ್‌ ಸೈನಿಕರ ಸಾ*ವು?

ಆಪರೇಷನ್‌ ಸಿಂದೂರಕ್ಕೆ 13 ಪಾಕ್‌ ಸೈನಿಕರ ಸಾ*ವು?

Yesterday

ಸೌದಿಯಲ್ಲಿ ಹ*ತ್ಯೆ: 26 ವರ್ಷಗಳ ಬಳಿಕ ಆರೋಪಿ ಸಿಬಿಐ ಬಲೆಗೆ!

ಸೌದಿಯಲ್ಲಿ ಹ*ತ್ಯೆ: 26 ವರ್ಷಗಳ ಬಳಿಕ ಆರೋಪಿ ಸಿಬಿಐ ಬಲೆಗೆ!

Yesterday

2022ರಲ್ಲಿ ಟ್ರಂಪ್‌ ಅಧ್ಯಕ್ಷರಾಗಿದ್ದರೆ ಉಕ್ರೇನ್‌ ಯುದ್ದವೇ ಆಗುತ್ತಿರಲಿಲ್ಲ: ಪುಟಿನ್‌

2022ರಲ್ಲಿ ಟ್ರಂಪ್‌ ಅಧ್ಯಕ್ಷರಾಗಿದ್ದರೆ ಉಕ್ರೇನ್‌ ಯುದ್ದವೇ ಆಗುತ್ತಿರಲಿಲ್ಲ: ಪುಟಿನ್‌

ಭಾರತದಲ್ಲಿ ದಾಳಿಗೆ ಪಾಕ್‌ ಉಗ್ರರಿಗೆ “ನೇಪಾಲ ದಾರಿ’! | Udayavani – Latest Kannada News, Udayavani Newspaper