ತಟಸ್ಥ ನೀತಿಯಿಂದ ಯುದ್ಧ ತಡೆಯಲಾಗದು..: ಭಾರತದ ನಿಯಮಕ್ಕೆ ಉಕ್ರೇನ್ ಸಚಿವರ ಅಸಮಾಧಾನ
Team Udayavani, Apr 28, 2022, 9:52 AM IST
ಕೀವ್/ಹೊಸದಿಲ್ಲಿ: ತಟಸ್ಥ ನೀತಿಯಿಂದ ಯುದ್ಧವನ್ನು ತಡೆಯಲು ಸಾಧ್ಯವಿಲ್ಲ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮೆಟ್ರೋ ಕುಲೆಬಾ ಹೇಳಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಮುಂದುವರಿದಿದೆ. ಫೆ.24ರಂದು ರಷ್ಯಾ ಆರಂಭಿಸಿದ ಉಕ್ರೇನ್ ಮೇಲಿನ ದಾಳಿ ಎರಡು ತಿಂಗಳಾದರೂ ಮುಂದುವರಿದಿದೆ. ಯುದ್ಧ ಆರಂಭವಾದ ದಿನದಿಂದಲೂ ಭಾರತ ತಟಸ್ಥ ನೀತಿ ಅನುಸರಿಸುತ್ತಿದೆ. ಉಕ್ರೇನ್ ಮತ್ತು ರಷ್ಯಾ ಎರಡೂ ದೇಶಕ್ಕೂ ಭಾರತ ಬೆಂಬಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಉಕ್ರೇನ್ ವಿದೇಶಾಂಗ ಸಚಿವ ಖಾಸಗಿ ಸುದ್ದಿವಾಹಿನಿಗೆ ಈ ಮಾತುಗಳನ್ನು ಹೇಳಿದ್ದಾರೆ.
ಇದನ್ನೂ ಓದಿ:‘ಹಿಂದಿ ರಾಷ್ಟ್ರ ಭಾಷೆ ವಿವಾದ’; ಕಿಚ್ಚ ಸುದೀಪ್ ಗೆ ಕುಮಾರಸ್ವಾಮಿ ಬೆಂಬಲ
“ಉಕ್ರೇನ್ ಗೆ ಭಾರತದ ನಾಯಕತ್ವದಿಂದ ಬರುತ್ತಿರುವ ಸಹಾನುಭೂತಿಯನ್ನು ನಾವು ಪ್ರಶಂಸಿಸುತ್ತೇವೆ. ಯುದ್ಧವನ್ನು ನಿಲ್ಲಿಸಬೇಕು ಎಂಬ ಭಾರತದ ನಿಲುವನ್ನು ನಾವು ಸಹ ಪ್ರಶಂಸಿಸುತ್ತೇವೆ. ಅದೇ ಸಮಯದಲ್ಲಿ, ಈ ಸಂದರ್ಭಗಳಲ್ಲಿ, ತಟಸ್ಥತೆಯು ಯುದ್ಧವನ್ನು ನಿಲ್ಲಿಸಲು ಸಹಾಯ ಮಾಡದ ಸ್ಥಾನವಾಗಿದೆ ಎಂದು ನಾನು ನಮೂದಿಸಬೇಕು. ಯುದ್ಧವನ್ನು ನಿಲ್ಲಿಸಲು ಉತ್ತಮ ಮಾರ್ಗವೆಂದರೆ ಉಕ್ರೇನ್ ಗೆ ಬೆಂಬಲ ನೀಡುವುದು” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿದ್ದರಾಮೋತ್ಸವದಂತಹ 10 ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗಿದೆ: ಸಚಿವ ಎಸ್.ಟಿ ಸೋಮಶೇಖರ್
ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು
ಸಿಎಂ ಬದಲಾವಣೆ ಸುದ್ದಿಯ ಮೂಲ ಸ್ವತಃ ಬಿಜೆಪಿಯೇ : ಡಿ.ಕೆ. ಶಿವಕುಮಾರ್
ಪುಲ್ವಾಮಾ: ತಪ್ಪಿದ ಭಾರೀ ದುರಂತ-30 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಸೇನೆ
ಮೈಸೂರು ದಸರಾಕ್ಕೆ ಮುನ್ನುಡಿ : ಸಾಂಪ್ರದಾಯಿಕ ಪೂಜೆ ಮೂಲಕ ಅರಮನೆ ಪ್ರವೇಶಿಸಿದ ಗಜಪಡೆ