80 ರೂ.ಗೆ ರಷ್ಯಾದ ನಿಸಾನ್ ಕಾರು ಕಂಪನಿ ಮಾರಾಟ
Team Udayavani, Oct 12, 2022, 6:45 AM IST
ಟೋಕಿಯೋ: ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಮೂಲದ ನಿಸಾನ್ ಕಾರು ಕಂಪನಿ, ರಷ್ಯಾದ ತನ್ನ ಎಲ್ಲ ವಹಿವಾಟನ್ನು ಕೇವಲ 80 ರೂ.(1 ಯೂರೋ)ಗಳಿಗೆ ಮಾರಾಟ ಮಾಡಿದೆ. ಈ ಮೂಲಕ 56,485 ಕೋಟಿ ರೂ.(687 ದಶಲಕ್ಷ ಡಾಲರ್) ನಷ್ಟ ಮಾಡಿಕೊಂಡಿದೆ.
ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ಎನ್ಎಎಂಐ ಎಂಬ ಸಂಸ್ಥೆಗೆ ಇದನ್ನು ಮಾರಿದೆ ಎಂದು ರಷ್ಯಾದ ಉದ್ಯಮ ಮತ್ತು ವ್ಯಾಪಾರ ಸಚಿವಾಲಯ ಹೇಳಿದೆ. ಆದರೆ, ಮುಂದಿನ ಆರು ವರ್ಷಗಳಲ್ಲಿ ಯಾವಾಗ ಬೇಕಾದರೂ, ನಿಸಾನ್ ಮೋಟಾರ್ಸ್ ತನ್ನ ವಹಿವಾಟನ್ನು ವಾಪಸ್ ಪಡೆಯಬಹುದಾಗಿದೆ ಎಂದೂ ತಿಳಿಸಿದೆ.
ಉಕ್ರೇನ್ ಮೇಲಿನ ಯುದ್ಧದಿಂದಾಗಿ ಈಗಾಗಲೇ ಹಲವಾರು ಜಾಗತಿಕ ಕಂಪನಿಗಳು ರಷ್ಯಾ ಬಿಟ್ಟು ಹೋಗಿವೆ. ಈಗ ನಿಸಾನ್ ಕೂಡ ಅದೇ ಹಾದಿ ಹಿಡಿದಿದೆ.
ಅಲ್ಲದೆ, ಕಳೆದ ಮೇನಲ್ಲೇ ನಿಸಾನ್ನ ಪ್ರಮುಖ ಷೇರುದಾರ ಕಂಪನಿಯಾಗಿರುವ ಫ್ರಾನ್ಸ್ನ ರಿನಾಲ್ಟ್ ಕಂಪನಿ ರಷ್ಯಾದ ಕಾರು ತಯಾರಕ ಕಂಪನಿ ಆವೊಸ್ಗೆ ತನ್ನೆಲ್ಲಾ ಷೇರುಗಳನ್ನು ಮಾರಾಟ ಮಾಡಿ ಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು