
ಪ್ರವಾಸಿಗರಂತೆ ವೇಷ ಧರಿಸಿ…ಪಾಕ್ ಸಂಸ್ಥಾಪಕ ಜಿನ್ನಾ ಪ್ರತಿಮೆ ಸ್ಫೋಟ
ಪ್ರವಾಸಿಗರಂತೆ ವೇಷ ಧರಿಸಿದ ಬಲೂಚ್ ರಿಪಬ್ಲಿಕ್ ಆರ್ಮಿಯ ಸದಸ್ಯರು ಈ ಕೃತ್ಯವೆಸಗಿದ್ದಾರೆ
Team Udayavani, Sep 28, 2021, 1:21 PM IST

ಇಸ್ಲಾಮಾಬಾದ್: ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಪ್ರತಿಮೆಯನ್ನು ಬಾಂಬ್ ಮೂಲಕ ಸ್ಫೋಟಿಸಲಾಗಿದೆ. ಪಾಕಿಸ್ತಾನದ ಬಲೂಚಿಸ್ತಾನದ ಗ್ವದಾರ್ ಎಂಬಲ್ಲಿ ಈ ಘಟನೆ ನಡೆದಿದೆ. ಸಮುದ್ರ ಕಿನಾರೆಯಲ್ಲಿರುವ ಈ ನಗರದ ಮರೈನ್ ಡ್ರೈವ್‌ನಲ್ಲಿ ಜೂನ್‌ನಲ್ಲಿ ಜಿನ್ನಾ ಪ್ರತಿಮೆ ಸ್ಥಾಪಿಸಲಾಗಿದೆ.
ಪ್ರವಾಸಿಗರಂತೆ ವೇಷ ಧರಿಸಿದ ಬಲೂಚ್ ರಿಪಬ್ಲಿಕ್ ಆರ್ಮಿಯ ಸದಸ್ಯರು ಈ ಕೃತ್ಯವೆಸಗಿದ್ದಾರೆ ಎಂದು ಸಂಘಟನೆಯ ವಕ್ತಾರ ಹೇಳಿಕೊಂಡಿದ್ದಾನೆ ಎಂದು “ಡಾನ್’ ಪತ್ರಿಕೆ ವರದಿ ಮಾಡಿದೆ. ಪ್ರಕರಣದ ಬಗ್ಗೆ ಕೇಸು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರ, ತೆಲಂಗಾಣದಲ್ಲಿ ಮಳೆ
ಅಮರಾವತಿ/ಭುವನೇಶ್ವರ: ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭಾನುವಾರ ಅಪ್ಪಳಿ ಸಿದ್ದ ಗುಲಾಬ್ ಚಂಡಮಾರುತ ದುರ್ಬಲವಾಗಿದೆ. ಒಡಿಶಾದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರೂ, ಹೆಚ್ಚಿನ ಅನಾಹುತ ಉಂಟಾಗಿಲ್ಲ. ಆಂಧ್ರ ಪ್ರದೇಶ, ತೆಲಂಗಾಣದ ಕೆಲವು ಭಾಗಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ.
ಆಂಧ್ರಪ್ರದೇಶದಲ್ಲಿ ಮಳೆಯಿಂದಾಗಿ ನಾಪತ್ತೆಯಾಗಿದ್ದ ಮಹಿಳೆಯ ಮೃತ ದೇಹ ಸಿಕ್ಕಿದೆ. ಹೀಗಾಗಿ, ಅಸುನೀಗಿದವರ ಸಂಖ್ಯೆ 3ಕ್ಕೆ ಏರಿದೆ. ವಿಶಾಖಪಟ್ಟಣದಲ್ಲಿ ಕೂಡ ಧಾರಾಕಾರ ಮಳೆಯಾಗಿದ್ದು, ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮಳೆಯಿಂದಾಗಿ ಹಾನಿಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿರುವ ಆಂಧ್ರ ಸಿಎಂ ವೈ.ಎ ಸ್. ಜಗನ್ ಮೋಹನ್ ರೆಡ್ಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಇದೇ ವೇಳೆ, ತೆಲಂಗಾಣದ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಸಿಎಂ ಕೆ.ಚಂದ್ರಶೇಖರ ರಾವ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಖಮ್ಮಮ್ ಜಿಲ್ಲೆಯ ಬಚೋಡುವಿ ನಲ್ಲಿ ಅತಿ ಹೆಚ್ಚು (151.5ಮಿಮೀ) ಮಳೆ ವರದಿಯಾಗಿದೆ. ಮಕ್ಕಳಿಗೆ ಗುಲಾಬ್ ಹೆಸರು: ಒಡಿಶಾದಲ್ಲಿ ಇಬ್ಬರು ತಾಯಂದಿರು ತಮ್ಮ ಮಕ್ಕಳಿಗೆ “ಗುಲಾಬ್’ ಎಂದು ಹೆಸರು ಇರಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Engagement: ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೇ ಮಾಜಿ ವಿಂಬಲ್ಡನ್ ಚಾಂಪಿಯನ್ ನಿಶ್ಚಿತಾರ್ಥ!

ಕರ್ನಾಟಕದಲ್ಲಿ ನೀರಿನ ಅಭಾವ…: ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಮನವಿ

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

ಯಲ್ಲಾಪುರ:ಉನ್ನತ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸಬೇಡಿ- ಡಾ| ವಿಜಯ ಸಂಕೇಶ್ವರ

26/11 ದಾಳಿಕೋರರಿಗೆ ತರಬೇತಿ ನೀಡಿದ್ದ ಅಬ್ದುಲ್ ಸಾಲಾಮ್ ಭುಟ್ಟಾವಿ ಮೃತ್ಯು