
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಮೊಬೈಲ್, ಇಂಟರ್‌ನೆಟ್ ಸೇವೆ ಸ್ಥಗಿತ?
Team Udayavani, Jul 1, 2022, 10:33 PM IST

ಇಸ್ಲಾಮಾಬಾದ್: ಭಾರೀ ಆರ್ಥಿಕ ಹೊಡೆತ ಕಾಣುತ್ತಿರುವ ಪಾಕಿಸ್ತಾನದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಆ ಹಿನ್ನೆಲೆ ಇನ್ನು ಮುಂದೆ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳೂ ತಾತ್ಕಾಲಿವಾಗಿ ಸ್ಥಗಿತವಾಗುವ ಸಾಧ್ಯತೆಯಿದೆ ಎಂದು ಪಾಕ್ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಮಂಡಳಿ(ಎನ್‌ಐಟಿಬಿ) ಎಚ್ಚರಿಸಿದೆ.
“ಪ್ರತಿದಿನ ಸಾಕಷ್ಟು ಸಮಯ ವಿದ್ಯುತ್ ಸಂಪರ್ಕವಿರುವುದಿಲ್ಲ. ಇದರಿಂದಾಗಿ ನಮಗೆ ಕಾರ್ಯನಿರ್ವಹಿಸುವುದೂ ಕಷ್ಟವಾಗಿದೆ. ಹಾಗಾಗಿ ಮೊಬೈಲ್ ಸೇವೆ ಮತ್ತು ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಬಹುದಾದ ಸನ್ನಿವೇಶ ಬಂದರೂ ಬರಬಹುದು’ ಎಂದು ಟೆಲಿಕಾಂ ಸಂಸ್ಥೆಗಳು ತಿಳಿಸಿವೆ ಎಂದು ಎನ್‌ಐಟಿಬಿ ತಿಳಿಸಿದೆ.
ದೇಶದಲ್ಲಿ ಈಗಾಗಲೇ ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ) ಕೊರತೆ ಹೆಚ್ಚಿದ್ದು, ಜುಲೈನಲ್ಲಿ ಕೊರತೆ ಹೆಚ್ಚಾಗಿ ಎಲ್‌ಎನ್‌ಜಿ ಸೇವೆ ಸ್ಥಗಿತವಾಗುವ ಸಾಧ್ಯತೆಯಿದೆ ಎಂದು ಪ್ರಧಾನ ಮಂತ್ರಿ ಶೆಹಬಾಜ್ ಶರೀಫ್ ಹೇಳಿದ್ದಾರೆ.
ಎಲ್‌ಎನ್‌ಜಿ ಪೂರೈಕೆಗಾಗಿ ಕತಾರ್‌ನೊಂದಿಗೆ ಪಾಕ್ ಒಪ್ಪಂದ ಮಾಡಿಕೊಳ್ಳುವ ಯತ್ನದಲ್ಲಿದೆ.
ಟಾಪ್ ನ್ಯೂಸ್
