
ಪಾಕಿಸ್ತಾನಿ ನಟಿಯ ಎಮ್.ಎಮ್.ಎಸ್ ವೀಡಿಯೊ ಲೀಕ್: ಪ್ರಿಯಕರನಿಂದ ವಂಚನೆ
Team Udayavani, Nov 18, 2022, 5:43 PM IST

ಹೊಸದೆಹಲಿ: ಜನಪ್ರಿಯ ಪಾಕಿಸ್ತಾನಿ ಮಾಡೆಲ್-ನಟಿ ರಿದಾ ಇಸ್ಫಹಾನಿ ಅವರ ಖಾಸಗಿ ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಇದು ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಈ ವಿವಾದವು ಹಲವಾರು ದಿನಗಳವರೆಗೆ ಗಮನ ಸೆಳೆಯಿತು ಮತ್ತು ಈಗ ನಟಿಯು ಇತ್ತೀಚೆಗೆ ಪಾಕಿಸ್ತಾನಿ ಹಾಸ್ಯನಟ ನಾದಿರ್ ಅಲಿ ಅವರ ಪಾಡ್‌ಕ್ಯಾಸ್ಟ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೀಗ ಎಂಎಂಎಸ್ ಸೋರಿಕೆ ಹಗರಣದ ಬಗ್ಗೆ ಮೌನವನ್ನು ಮುರಿದು ಮಾತನಾಡಿದರು. ಪಾಡ್‌ಕ್ಯಾಸ್ಟ್‌ನಲ್ಲಿ ಪಾಕಿಸ್ತಾನಿ ನಟಿಯನ್ನು ಉಲ್ಲೇಖಿಸಿ ಫ್ರೀ ಪ್ರೆಸ್ ಜರ್ನಲ್ ಅವರ ಮಾತನ್ನು ಉಲ್ಲೇಖಿಸಿದೆ: “ನನ್ನ ನಿಶ್ಚಿತಾರ್ಥವಾದ ವರನಿಂದ ನಂಬಿಕೆ ದ್ರೋಹವಾಗಿದೆ. ನಾನು ಅವನಿಗಾಗಿ ನನ್ನ ಹೆತ್ತವರಿಗೆ ನಮ್ಮ ಪ್ರೀತಿಯ ಬಗ್ಗೆ ಮನವರಿಕೆ ಮಾಡಿದ್ದೆ ಎಂದಿದ್ದಾರೆ.
View this post on Instagram
ಅವನು ಪ್ರೀತಿ ಪ್ರಸ್ತಾಪ ಮಾಡಿದಾಗ ಆತ ಈಗಿನಷ್ಟು ಶ್ರೀಮಂತನಾಗಿರಲಿಲ್ಲ ಆದರೂ ನಾನು ಅದನ್ನು ಒಪ್ಪಿಕೊಂಡೆ, ನಮ್ಮ ನಿಶ್ಚಿತಾರ್ಥದ ಮೂರು ವರ್ಷಗಳ ನಂತರ, ನಾನು ಯುಎಸ್‌ನಲ್ಲಿದ್ದಾಗ ಅವರು ನನ್ನ ಚಿತ್ರಗಳನ್ನು ಸೋರಿಕೆ ಮಾಡಿದರು. ಜನರು ನನ್ನನ್ನು ಪತ್ರಿಕಾಗೋಷ್ಠಿ ಮಾಡಲು ಒತ್ತಾಯಿಸಿದರು ಆದರೆ ನಾನು ಮಾಡಲಿಲ್ಲ ಏಕೆಂದರೆ ಅದು ಅವರ ಕಾರ್ಯ ಮತ್ತು ನನ್ನ ದುರಂತ ಅದು ನನ್ನೊಂದಿಗೆ ನನ್ನ ಸಮಾಧಿಗೆ ಹೋಗುತ್ತದೆ.” ಎಂದು ಪ್ರತಿಕ್ರಿಯಿಸಿದ್ದಾರೆ.
ಎಂಎಂಎಸ್ ವೀಡಿಯೋ ಹಗರಣದಿಂದಾಗಿ ಅನೇಕ ಪ್ರಾಜೆಕ್ಟ್‌ಗಳನ್ನು ಕಳೆದುಕೊಂಡಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ರಿದಾ ಹಲವಾರು ಪಾಕ್ ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ‘ಮೊಹಬ್ಬತ್ ಹಮ್ ಸಫರ್ ಮೇರಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರು 2018 ರಲ್ಲಿ ‘ರೋಗ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
ಟಾಪ್ ನ್ಯೂಸ್
