ಪಾಕ್‌ ವಿರುದ್ಧ ಇನ್ನಷ್ಟು  ಕ್ರಮ?

Team Udayavani, May 25, 2017, 3:04 AM IST

Pakistan-Flag-700.jpg

ಇಸ್ಲಾಮಾಬಾದ್‌/ಹೊಸದಿಲ್ಲಿ/ವಾಷಿಂಗ್ಟನ್‌: ಕಾಶ್ಮೀರದಲ್ಲಿ ಪಾಕ್‌ ಪ್ರಾಯೋಜಿತ ಭಯೋತ್ಪಾದನೆ, ಒಳನುಸುಳುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕ್‌ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿ ಮಾಡುವುದು ಮತ್ತು ದಂಡನಾತ್ಮಕ ಕ್ರಮ ಜಾರಿ ಕುರಿತು ಭಾರತ ಆಲೋಚಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ವಿಭಾಗದ ನಿರ್ದೇಶಕ ಲೆ| ವಿನ್ಸೆಂಟ್‌ ಸ್ಟೀವರ್ಟ್‌ ಅಲ್ಲಿನ ಶಾಸನ ಸಭೆಗೆ ತಿಳಿಸಿದ್ದಾರೆ. ರಾಜತಾಂತ್ರಿಕವಾಗಿ ಪಾಕ್‌ ಅನ್ನು ಏಕಾಂಗಿಯಾಗಿಸುವ ಯತ್ನವನ್ನು ಭಾರತ ಮತ್ತಷ್ಟು ಮುಂದುವರಿಸಿದೆ. ಇದರ ಬೆನ್ನಲ್ಲೇ ಹೆಚ್ಚುತ್ತಿರುವ ಉಗ್ರವಾದ ವಿರುದ್ಧ ಇಸ್ಲಾಮಾಬಾದ್‌ಗೆ ಪಾಠ ಕಲಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಿಲಿಟರಿಗೆ ಬಲ ತುಂಬುವುದು, ಏಷ್ಯಾದಲ್ಲಿ ರಾಜತಾಂತ್ರಿಕ ವಾಗಿ, ಆರ್ಥಿಕವಾಗಿ ಭಾರತ ತನ್ನ ಹಿಡಿತವನ್ನು ಬಲಪಡಿಸಲು ಮುಂದಾಗಿದೆ. ಭಾರತದಲ್ಲಿ ಉಗ್ರ ದಾಳಿಗಳಿಂದಾಗಿ ಪಾಕ್‌ – ಭಾರತ ಸಂಬಂಧ ಮತ್ತಷ್ಟು ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ  ಭಾರತದ ರಕ್ಷಣಾ ಸಚಿವ ಅರುಣ್‌ ಜೇಟ್ಲಿ ಪಾಕ್‌ ವಿರುದ್ಧದ ಸೇನಾ ಕ್ರಮಕ್ಕೆ ಸಂಬಂಧಿಸಿದಂತೆ ಕಠಿನ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಯುದ್ಧಪೀಡಿತ ಪ್ರದೇಶದಂತಾಗಿರುವ ಕಾಶ್ಮೀರದಲ್ಲಿ ಸರಕಾರದ ನಿರ್ದೇಶ ಪಡೆದು ಕ್ರಮ ಕೈಗೊಳ್ಳುವಷ್ಟು ಸಮಯ ಸೇನೆಗೆ ಇಲ್ಲ. ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಮಿಲಿಟರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ನಿಯಂತ್ರಣ ರೇಖೆಯಲ್ಲಿ ನುಸುಳುಕೋರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ಥಾನ ಸೇನಾ ಬಂಕರ್‌ಗಳ ಮೇಲೆ ಭಾರತೀಯ ಸೇನೆ ಕಠಿನ ಕ್ರಮ ಕೈಗೊಂಡಿರುವುದು ಹಾಗೂ ಪ್ರತಿ ಚಿತಾವಣೆಗೂ ಭಾರತದ ಕಡೆಯಿಂದ ಭಾರೀ ಎದುರೇಟು ಸಿಗುತ್ತಿರುವುದು ಪಾಕ್‌ಗೆ ನುಂಗಲಾರದ ತುತ್ತಾಗಿದೆ.

ಪಾಕ್‌ ಸಿದ್ಧತೆ: ಜತೆಗೆ ನಿಯಂತ್ರಣ ರೇಖೆಯಲ್ಲಿ ದಾಳಿ ಕುರಿತ ವಿಡಿಯೋ ಬಿಡುಗಡೆಯಿಂದಾಗಿ ಅದು ತೀವ್ರ ಅವಮಾನಕ್ಕೊಳಗಾಗಿದೆ. ಈಗ ಯುದ್ಧ ಸನ್ನದ್ಧತೆಯ ಮಾತುಗಳನ್ನು ಆಡತೊಡಗಿದೆ. ಭಾರತ ಗಡಿಯಲ್ಲಿನ ಮುಂಚೂಣಿ ವಾಯುನೆಲೆಯನ್ನು ಸನ್ನದ್ಧ ಸ್ಥಿತಿಯಲ್ಲಿಡುವುದಾಗಿ ಹೇಳಿದೆ. ಇದರೊಂದಿಗೆ, ಪಾಕ್‌ ಸೇನಾ ಮುಖ್ಯಸ್ಥರು ಮುಂಚೂಣಿ ವಾಯುನೆಲೆ ಸ್ಕಾರ್ದು ಎಂಬಲ್ಲಿಗೆ ಬುಧವಾರ ಭೇಟಿ ನೀಡಿದ್ದು, ಅಲ್ಲಿ ಪಾಕ್‌ ವಾಯುಪಡೆ ಯುದ್ಧ ಸನ್ನದ್ಧತೆಯನ್ನು ಪರಿಶೀಲಿಸಿದ್ದಾಗಿ ಪಾಕ್‌ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಪಾಕ್‌ ವಾಯುಪಡೆಯ ಮಿರಾಜ್‌ ಸ್ಕ್ವಾಡ್ರನ್‌ ಒಂದು ಸಿಯಾಚಿನ್‌ ಭಾಗದಲ್ಲಿ ಹಾರಾಟ ನಡೆಸಿದ್ದಾಗಿಯೂ ಜತೆಗೆ ಭಾರತದ ವಾಯು ಸರಹದ್ದನ್ನು ದಾಟಿದ್ದಾಗಿಯೂ ಮಾಧ್ಯಮಗಳು ಹೇಳಿವೆ. ಆದರೆ ಪಾಕ್‌ ಮಾಧ್ಯಮಗಳ ವರದಿಯನ್ನು ಭಾರತೀಯ ವಾಯುಪಡೆ ತಿರಸ್ಕರಿಸಿದೆ.

ಪಾಕ್‌ಗೆ 1,230 ಕೋಟಿ ರೂ. ನೆರವು ಕಟ್‌
ಅಮೆರಿಕ ಪಾಕ್‌ಗೆ ನೀಡುತ್ತಿದ್ದ ವಾರ್ಷಿಕ 1,230 ಕೋಟಿ ಮಿಲಿಟರಿ ನೆರವು ಸಹಿತ ಒಟ್ಟು 2227 ಕೋಟಿ ರೂ.ಗಳ ಹಣಕಾಸು ನೆರವನ್ನು ಕಡಿತಗೊಳಿಸಲು ಮುಂದಾಗಿದೆ. ಇದರ ಬದಲಿಗೆ ಈ ನೆರವನ್ನು ‘ಸಾಲ’ ಎಂದು ನೀಡಲು ಚಿಂತಿಸಿದೆ. ಈ ಕುರಿತ ಶಿಫಾರಸನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ತನ್ನ ಬಜೆಟ್‌ನಲ್ಲಿ ಪ್ರಸ್ತಾವಿಸಿದೆ. ಪಾಕ್‌ ಭಯೋತ್ಪಾದನಾ ನಿಗ್ರಹದಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ಅದಕ್ಕೆ ವಾರ್ಷಿಕ 1,230 ಕೋಟಿ ರೂ. ಮಿಲಿಟರಿ ನೆರವನ್ನು ಅಮೆರಿಕ ನೀಡುತ್ತಿತ್ತು. ಒಂದು ವೇಳೆ ಮಿಲಿಟರಿ ಮತ್ತು ಹಣಕಾಸು ನೆರವು ಅಮೆರಿಕದಿಂದ ನಿಂತು, ಅದು ಸಾಲರೂಪದಲ್ಲಿ ಸಿಕ್ಕರೆ, ಹಣಕಾಸು ವಿಚಾರದಲ್ಲಿ  ಪಾಕ್‌ ಸ್ಥಿತಿ ಬಿಗಡಾಯಿಸಲಿದೆ ಎನ್ನಲಾಗಿದೆ.

ಗಡಿ ಸರಹದ್ದು ಉಲ್ಲಂಘಿಸಿಲ್ಲ: ಭಾರತ
ಸಿಯಾಚಿನ್‌ ಭಾಗದಲ್ಲಿ ಪಾಕ್‌ನ ಯಾವುದೇ ಯುದ್ಧ ವಿಮಾನಗಳು ಭಾರತದ ವಾಯು ಪ್ರದೇಶಕ್ಕೆ ಪ್ರವೇಶ ಮಾಡಿಯೇ ಇಲ್ಲ ಎಂದು ಭಾರತೀಯ ವಾಯುಪಡೆ ಹೇಳಿದೆ. ಈ ಮೂಲಕ ಭಾರತದ ವಾಯುಸರಹದ್ದಿನೊಳಕ್ಕೆ ಪಾಕ್‌ ಯುದ್ಧ ವಿಮಾನಗಳು ನುಗ್ಗಿವೆ ಎಂಬ ವರದಿಯನ್ನು ಅದು ಅಲ್ಲಗಳೆದಿದೆ.

ಟಾಪ್ ನ್ಯೂಸ್

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.