
ಇಸ್ರೇಲ್‌ನಲ್ಲಿ ಉಗ್ರರ ದಾಳಿ: 7 ಸಾವು; 3 ಮಂದಿಗೆ ಗಾಯ
Team Udayavani, Jan 28, 2023, 8:31 PM IST

ಜೆರುಸಲೇಮ್: ಇಸ್ರೇಲ್‌ನ ಜೆರುಸಲೇಮ್ ಸಮೀಪ ನೆವ್ ಯಾಕೋವ್‌ನಲ್ಲಿ ಶುಕ್ರವಾರ ಸಂಜೆ ನಡೆದ ಉಗ್ರ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಇತರೆ ಮೂವರು ಗಾಯಗೊಂಡಿದ್ದಾರೆ.
“ಪೂರ್ವ ಜೆರುಸಲೇಮ್‌ನ ನೆರೆಯ ನೆವ್ ಯಾಕೋವ್‌ಗೆ ಕಾರಿನಲ್ಲಿ ಆಗಮಿಸಿದ ಉಗ್ರನೊಬ್ಬ ಕಟ್ಟಡವೊಂದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಉಗ್ರನನ್ನು ಎನ್‌ಕೌಂಟರ್ ಮಾಡಿದ್ದು, ಆತನ ಬಳಿಯಿದ್ದ ಹ್ಯಾಂಡ್‌ಗನ್ ವಶಪಡಿಸಿಕೊಳ್ಳಲಾಗಿದೆ,’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಉಗ್ರ ದಾಳಿಯಲ್ಲಿ ಕಟ್ಟಡದಲ್ಲಿದ್ದ ಏಳು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಇತರೆ ಮೂವರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತಿದೆ,’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೇರಿದಂತೆ ಅನೇಕ ಗಣ್ಯರು ಖಂಡಿಸಿದ್ದಾರೆ. ಅಲ್ಲದೇ ಇದು ಇಸ್ಲಾಮಿಕ್ ಜಿಹಾದಿ ಕೃತ್ಯ ಎಂದು ದೂರಿದ್ದಾರೆ. ಇದೇ ವೇಳೆ ಮಡಿದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಇನ್ನೊಂದೆಡೆ, ಪ್ಯಾಲೆಸ್ತೇನ್‌ನ ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ಎರಡು ರಾಕೆಟ್‌ಗಳನ್ನು ಉಡಾಯಿಸಲಾಗಿದೆ. ಆದರೆ ರಾಕೆಟ್‌ಗಳನ್ನು ಇಸ್ರೇಲ್ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿದೆ ಎಂದು ಇಸ್ರೇಲ್ ಸೇನೆ ವಕ್ತಾರರು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್ ವಿರುದ್ದ ನೆಟ್ಟಿಗರು ಗರಂ

ಈ ಬಾರಿಯ ಅರ್ಜುನ್ ತೆಂಡೂಲ್ಕರ್ ಗೆ ಸಿಗುತ್ತಾ ಚಾನ್ಸ್?: ಉತ್ತರ ನೀಡಿದ ರೋಹಿತ್

ರಾಜಕೀಯ ವಿವಾದ; ಮೊಸರು ಪ್ಯಾಕೆಟ್‌ಗಳ ಮೇಲೆ ಪ್ರಾದೇಶಿಕ ಹೆಸರು!

ಜೋಸ್ ಆಲುಕ್ಕಾಸ್‌ನ ಪ್ಯಾನ್ ಇಂಡಿಯಾ ಬ್ರಾಂಡ್ ಅಂಬಾಸಿಡರ್ ಆಗಿ ಆರ್. ಮಾಧವನ್ ಆಯ್ಕೆ

ರಾಮನವಮಿ 2023: ಬಾವಿ ಮೇಲಿನ ಸಿಮೆಂಟ್ ಹಾಸು ಕುಸಿತ; ಬಾವಿಯೊಳಗೆ ಬಿದ್ದ 25 ಭಕ್ತರು…