ತಾಳೆ ಎಣ್ಣೆ ರಫ್ತು ನಿಷೇಧ ತೆರವಿಗೆ ಇಂಡೋನೇಷ್ಯಾ ನಿರ್ಧಾರ: ಬೆಲೆ ಇಳಿಕೆ ಸಾಧ್ಯತೆ
Team Udayavani, May 20, 2022, 7:00 AM IST
ಜಕಾರ್ತ : ಈ ತಿಂಗಳ 23ರಿಂದ ತಾಳೆ ಎಣ್ಣೆ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲು ಇಂಡೋನೇಷ್ಯಾ ನಿರ್ಧರಿಸಿದೆ.
ರಫ್ತು ಪ್ರಕ್ರಿಯೆ ಪುನರಾರಂಭಗೊಂಡರೆ ಭಾರತದಲ್ಲೂ ಅಡುಗೆ ಎಣ್ಣೆ ದರ ಇಳಿಕೆಯಾಗುವ ಸಾಧ್ಯತೆಯಿದೆ.
ಇಂಡೋನೇಷ್ಯಾದಲ್ಲಿ ಅಡುಗೆ ಎಣ್ಣೆ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದರಿಂದ, ಅಲ್ಲಿ ಭಾರೀ ಮಟ್ಟದಲ್ಲಿ ಬೆಲೆಯೇರಿಕೆ ಆಗಿತ್ತು. ಇದನ್ನು ತಡೆಯಲು ತಾಳೆ ಎಣ್ಣೆ ರಫ್ತು ಮಾಡದಂತೆ ಎ.28ರಿಂದ ನಿಷೇಧ ವಿಧಿಸಿತ್ತು.