ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!
Team Udayavani, Dec 7, 2021, 10:15 PM IST
ಅಮೆರಿಕ: ಆ ಛಾಯಾಗ್ರಾಹಕನ ಹೆಸರು ಆ್ಯಂಡ್ರ್ಯೂ ಮೆಕಾರ್ಥಿ. ಅಮೆರಿಕದ ಅರಿಜೋನಾದವರಾಗಿರುವ ಅವರು, ನ.29, ಮಧ್ಯಾಹ್ನ 2 ಗಂಟೆಗೆ ಸೂರ್ಯನ ಅದ್ಭುತ ಚಿತ್ರ ತೆಗೆದಿದ್ದಾರೆ.
ಟೆಲಿಸ್ಕೋಪ್ ಬಳಸಿ ತೆಗೆದಿರುವ ಈ ಚಿತ್ರ ಎಷ್ಟು ಅದ್ಭುತವಾಗಿದೆಯೆಂದರೆ ಸೂರ್ಯನ ಹೊರಾವರಣ ಸ್ಪಷ್ಟವಾಗಿ ಕಾಣುವಂತೆ ಇದೆ. ಅದನ್ನು ಕಾಸ್ಮಿಕ್ ಬ್ಯಾಕ್ಗ್ರೌಂಡ್ ಹೆಸರಿನಲ್ಲಿ ಮೆಕಾರ್ಥಿ ಇನ್ಸ್ಟಾಗ್ರಾಂಗೆ ಹಾಕಿದ್ದಾರೆ.
ಇದನ್ನು ಯಾರು ಬೇಕಾದರೂ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಇಲ್ಲೊಂದು ಷರತ್ತಿದೆ. 50 ಡಾಲರ್ಗಳನ್ನು ಪಾವತಿ ಮಾಡಬೇಕು!
ಭಾರತೀಯ ಲೆಕ್ಕಾಚಾರದಲ್ಲಾದರೆ ಇದಕ್ಕೆ 3,771.85 ರೂ. ಆಗುತ್ತದೆ.
ಮೆಕಾರ್ಥಿ ಟೆಲಿಸ್ಕೋಪ್ ಮೂಲಕ ಒಟ್ಟು 1.50 ಲಕ್ಷ ಚಿತ್ರಗಳನ್ನು ತೆಗೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಫೋಟೋಕ್ಕೆ 30 ಸಾವಿರಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
View this post on Instagram