ದೇಶಕ್ಕೆ ಕಪ್ಪು ಚುಕ್ಕಿ ತಂದಿಟ್ಟ ಎಮರ್ಜೆನ್ಸಿ: ಜರ್ಮನಿಯ ಮ್ಯೂನಿಚ್‌ನಲ್ಲಿ ಪ್ರಧಾನಿ ಅಭಿಮತ


Team Udayavani, Jun 27, 2022, 7:20 AM IST

thumb 2 pm

ಮ್ಯೂನಿಚ್‌: “47 ವರ್ಷಗಳ ಹಿಂದೆ ಭಾರತದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು. ತುರ್ತು ಪರಿಸ್ಥಿತಿಯು ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕಿ.

ಜೂ. 26 ನಮಗೆ ಪ್ರಜಾಪ್ರಭುತ್ವವನ್ನು ದಮನ ಮಾಡಲು ಯತ್ನಿಸಿದ ದಿನವನ್ನು ನೆನಪಿಸುತ್ತದೆ’
-ಹೀಗೆಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ. ಜರ್ಮನಿಯ ಮ್ಯೂನಿ­ಚ್‌­ನಲ್ಲಿ ಭಾರತೀಯ ಸಮುದಾಯ­ದವರನ್ನು ಉದ್ದೇಶಿಸಿ ಅವರು ಮಾತನಾಡಿ­ದರು.

“ಭಾರತೀಯರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಪ್ರಜಾ­ಪ್ರಭುತ್ವದ ಬಗ್ಗೆ ಹೆಮ್ಮೆ ಪಡುತ್ತಾರೆ. ಭಾರತ ಪ್ರಜಾಪ್ರಭುತ್ವದ ಮಾತೆ’ ಎಂದರು ಮೋದಿ.

ಅಭಿವೃದ್ಧಿಯಾಗಿದೆ: ಈಗ ಭಾರತದ ಪ್ರತೀ ಹಳ್ಳಿಗೆ ವಿದ್ಯುತ್‌ ಸಂಪರ್ಕವಿದೆ ಎಂದು ಹೇಳಿದ ಅವರು, ಶೇ. 99ಕ್ಕೂ ಅಧಿಕ ಮನೆಗಳಿಗೆ ಗ್ಯಾಸ್‌ ಸೌಲಭ್ಯವಿದೆ ಎಂದರು. ಬಡವರಿಗೆ 5 ಲಕ್ಷ ರೂ. ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ. ಪ್ರತೀ 10 ದಿನಕ್ಕೊಂದು ಯುನಿಕಾರ್ನ್ ಸೃಷ್ಟಿಯಾಗುತ್ತಿದೆ.

ತಿಂಗಳಿಗೆ 5,000 ಪೇಟೆಂಟ್‌ಗಳಿಗೆ ಅರ್ಜಿ ಸಲ್ಲಿಕೆಯಾಗುತ್ತಿದೆ, 500 ರೈಲು ಬೋಗಿ ನಿರ್ಮಾಣವಾಗುತ್ತಿದೆ. 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತ ಮುಂದಾಳತ್ವ ಪಡೆದುಕೊಂಡಿದೆ. ಡಿಜಿಟಲ್‌ ಬ್ಯಾಂಕಿಂಗ್‌, ಡೇಟಾ ಬಳಕೆ ಸೇರಿ ಎಲ್ಲ ವಿಚಾರದಲ್ಲೂ ಇಂದು ಭಾರತೀಯರು ಮುಂದಿದ್ದಾರೆ. ಭಾರತ ಈ ಹಿಂದೆ ಸ್ಟಾರ್ಟ್‌ಅಪ್‌ ಸ್ಪರ್ಧೆಯಲ್ಲೇ ಇರಲಿಲ್ಲ. ಆದರೆ ಈಗ ವಿಶ್ವದ ಮೂರನೇ ಅತೀ ದೊಡ್ಡ ಸ್ಟಾರ್ಟ್‌ಅಪ್‌ ಎಕೋ ಸಿಸ್ಟಂ ನಮ್ಮಲ್ಲಿದೆ’ ಎಂದು ಮೋದಿ ಹೇಳಿದ್ದಾರೆ.

ಚಲ್ತಾ ಹೈ ನಿಲುವು ಇಲ್ಲ: ದೇಶದಲ್ಲಿ ಈಗ ಚಲ್ತಾ ಹೈ ನಿಲುವು ಇಲ್ಲ. ಅದರ ಬದಲಾಗಿ ಈಗ ಕೆಲಸ ಪೂರ್ಣವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಾಣ ಉಳಿಸಿದ ದೇಸಿ ಲಸಿಕೆ: ಭಾರತವು ಕೊರೊನಾ ಸಮಯದಲ್ಲಿ ಭಾರೀ ಪ್ರಮಾಣ­ದಲ್ಲಿ ಲಸಿಕೆ ಉತ್ಪಾದಿಸಿ, ರಫ್ತು ಮಾಡಿದೆ. ಇಂದು ದೇಶದ ಶೇ. 90 ಮಂದಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಲಸಿಕೆ ಹಂಚಿಕೆಗೆ ಕನಿಷ್ಠ 10-15 ವರ್ಷ ಬೇಕೆಂದು ವಿರೋಧಿಗಳು ಪ್ರಾರಂಭದಲ್ಲಿ ದೂರಿದ್ದರು. ಆದರೆ ನಾವು ಎರಡೇ ವರ್ಷಗಳಲ್ಲಿ ಅದನ್ನು ಮಾಡಿ ತೋರಿಸಿದ್ದೇವೆ ಎಂದು ಅವರು ಹೇಳಿದರು.

ಅದ್ಧೂರಿ ಸ್ವಾಗತ: ರವಿವಾರ ಬೆಳಗ್ಗೆ ಜರ್ಮನಿಯ ಮ್ಯೂನಿಚ್‌ಗೆ ಬಂದಿಳಿದ ಮೋದಿಯವರಿಗೆ ಜರ್ಮನಿಯ ಆಡಳಿತ ಮತ್ತು ಅಲ್ಲಿನ ಭಾರತೀಯರು ಅದ್ಧೂರಿ ಸ್ವಾಗತ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಾರತೀಯರು “ಭಾರತ್‌ ಮಾತಾ ಕೀ ಜೈ’ ಘೋಷಣೆಗಳೊಂದಿಗೆ ಮೋದಿ­ಯನ್ನು ಬರಮಾಡಿ­ಕೊಂಡಿದ್ದಾರೆ. ಅಲ್ಲಿ ನೆರೆದಿದ್ದ ಪುಟಾಣಿ­ಗಳೊಂದಿಗೆ ಪ್ರಧಾನಿಯವರು ಕೆಲ ಕಾಲ ಮಾತನಾಡಿದ್ದು, ಆ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ತಂಗುವ ಹೊಟೇಲ್‌ನಲ್ಲಿ ಎ.ಸಿ. ಇಲ್ಲ
ಜರ್ಮನಿಯಲ್ಲಿರುವ ಪ್ರಧಾನಿ ಮೋದಿಯವರು ರವಿವಾರ ಜರ್ಮನಿಯ ದಕ್ಷಿಣ ಗಡಿ ಭಾಗದಲ್ಲಿರುವ ಪ್ರಸಿದ್ಧ ಸ್ಕೊ$Éàಸ್‌ ಎಲೌ¾ ಹೊಟೇಲ್‌ನಲ್ಲಿ ತಂಗಿದ್ದಾರೆ. ವಿಶೇಷವೆಂದರೆ ಈ ಹೊಟೇಲ್‌ನಲ್ಲಿ ಹವಾನಿಯಂತ್ರಿತ ಕೊಠಡಿಗಳಿಲ್ಲ. ಹಾಗೆಯೇ ಅದ್ಧೂರಿ ಕೊಠಡಿಗಳೂ ಇಲ್ಲ. ಗುಡ್ಡಗಾಡು ಪ್ರದೇಶದಲ್ಲಿರುವ ಹೊಟೇಲ್‌ಗೆ ಕೂಲರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.

 

ಟಾಪ್ ನ್ಯೂಸ್

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

train

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

1-wqwq-wwqe

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

ವಿಜಯಪುರ ಮಹಾನಗರ ಪಾಲಿಕೆ : ವಾರ್ಡ್ ಮೀಸಲು ಪ್ರಕಟ

ವಿಜಯಪುರ ಮಹಾನಗರ ಪಾಲಿಕೆ : ವಾರ್ಡ್ ಮೀಸಲು ಪ್ರಕಟ

ಫೋರ್ಡ್‌ ಇಂಡಿಯಾ ಕಂಪನಿಯ ಸನಂದ್‌ ಸ್ಥಾವರ ಈಗ ಟಾಟಾ ತೆಕ್ಕೆಗೆ

ಫೋರ್ಡ್‌ ಇಂಡಿಯಾ ಕಂಪನಿಯ ಸನಂದ್‌ ಸ್ಥಾವರ ಈಗ ಟಾಟಾ ತೆಕ್ಕೆಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ವಿಟರ್‌ ನ್ನು ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್‌ ಮಸ್ಕ್

ಟ್ವಿಟರ್‌ ಮನಸ್ಸು ಮಾಡಿದರೆ ಈಗಲೂ ಖರೀದಿಸಲು ಸಿದ್ಧ: ಎಲಾನ್‌ ಮಸ್ಕ್

taliban

ಅಫ್ಘಾನ್ ನಲ್ಲಿ ತೆಹ್ರೀಕ್-ಇ-ತಾಲಿಬಾನ್ ಉನ್ನತ ಕಮಾಂಡರ್ ಸೇರಿ ಮೂವರ ಹತ್ಯೆ

thumb news rushi 3

ಅಕ್ಷತಾ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ: ರಿಷಿ ಸುನಕ್‌

thumb 5 china

ತೈವಾನ್‌-ಚೀನ ಶಕ್ತಿ ಪ್ರದರ್ಶನ; ಜಲಸಂಧಿಯಲ್ಲಿ ನೌಕಾಪಡೆಗಳ ಗಸ್ತು

1-asd-da-dsa

ಇಸ್ರೇಲ್‌ ಕಾರ್ಯಾಚರಣೆ: ಕ್ಷಿಪಣಿ ಹಾರಿಸಿ ಉಗ್ರ ಕಮಾಂಡರ್‌ ಹತ್ಯೆ

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

train

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

1-wqwq-wwqe

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.