ವಿಶ್ವದ ಅಗ್ರ ನಾಯಕ ಪ್ರಧಾನಿ ನರೇಂದ್ರ ಮೋದಿ
Team Udayavani, Jan 22, 2022, 7:00 AM IST
ವಾಷಿಂಗ್ಟನ್: ವಿಶ್ವದ ನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಗ್ರ ಸ್ಥಾನದಲ್ಲಿದ್ದಾರೆ.
ಜಾಗತಿಕವಾಗಿ ಅವರ ಅನುಮೋದನೆ ರೇಟಿಂಗ್ ಶೇ.71ರಷ್ಟಿದೆ. ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆಯು ಈ ಅಂಕಿಅಂಶವನ್ನು ಬಿಡುಗಡೆ ಮಾಡಿದೆ.
ಅದರ ಪ್ರಕಾರ ಪ್ರಧಾನಿ ಮೋದಿಯವರಿಗೆ ಶೇ.71 ಅನುಮೋದನೆ ರೇಟಿಂಗ್ ಇದೆ. ಪಟ್ಟಿಯ ಎರಡನೇ ಸ್ಥಾನದಲ್ಲಿ ಶೇ.66 ರೇಟಿಂಗ್‌ನೊಂದಿಗೆ ಮೆಕ್ಸಿಕೋದ ಅಧ್ಯಕ್ಷ ಆ್ಯಂಡ್ರೆಜ್ ಮ್ಯಾನುಯೆಲ್ ಇದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇ.43 ಅನುಮೋದನೆ ರೇಟಿಂಗ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಮೋದಿಯವರ ಅನುಮೋದನೆ ರೇಟಿಂಗ್ 2020ರ ಮೇ 2ರಂದು ಶೇ.84ಕ್ಕೆ ಏರಿತ್ತು.
2021ರ ಮೇ 7ಕ್ಕೆ ಶೇ.63ಕ್ಕೆ ಇಳಿದಿತ್ತು. ಇದು ಮೋದಿಯವರ ಗರಿಷ್ಠ ಹಾಗೂ ಕನಿಷ್ಠ ದಾಖಲೆಯಾಗಿದೆ.
ಇದನ್ನೂ ಓದಿ:ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ
ಸಮೀಕ್ಷೆ ಹೇಗೆ?: ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಪ್ರತಿ ದಿನ ಜಾಗತಿಕವಾಗಿ 20,000 ಸಮೀಕ್ಷೆಗಳನ್ನು ನಡೆಸುತ್ತದೆ. ಪ್ರತಿದಿನ ಆಯಾ ರಾಷ್ಟ್ರಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಯುವಜನತೆಯ ಸಮೀಕ್ಷೆ ನಡೆಸಲಾ ಗುತ್ತದೆ. ಏಳು ದಿನಗಳ ಸರಾಸರಿ ಲೆಕ್ಕದಲ್ಲಿ ಈ ವರದಿ ಬಿಡುಗಡೆ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂಕಷ್ಟದಲ್ಲಿರುವ ಶ್ರೀಲಂಕಾಕ್ಕೆ ಒಣ ಪಡಿತರ ನೀಡಿ ಆಕ್ರೋಶಕ್ಕೆ ಗುರಿಯಾದ ಚೀನಾ
ಕಾಡ್ಗಿಚ್ಚಿ ನಲ್ಲೂ ಟಿಕ್ ಟಾಕ್ ಹುಚ್ಚು!; ಪಾಕಿಸ್ತಾನಿ ಮಹಿಳೆಯ ವಿರುದ್ಧ ಆಕ್ರೋಶ
ಶ್ರೀಲಂಕಾ ಏರ್ಲೈನ್ಸ್ ಮಾರಲು ಹೊರಟ ಪ್ರಧಾನಿ ವಿಕ್ರಮ ಸಿಂಘೆ
6 ತಿಂಗಳಲ್ಲಿ ಗ್ರೀನ್ ಕಾರ್ಡ್ ಪ್ರಕ್ರಿಯೆ ನಡೆಸಲು ಜೋ ಬೈಡೆನ್ ಅವರಿಗೆ ಶಿಫಾರಸು
ಜಮ್ಮು& ಕಾಶ್ಮೀರದ ಕುರಿತು ಪಾಕ್ ನಿಲುವಳಿಗೆ ಭಾರತ ತಿರಸ್ಕಾರ