ಪಾಕಿಸ್ತಾನ ಸಿಂಧ್ ಪ್ರಾಂತ್ಯ; ಸ್ವಾತಂತ್ರ್ಯ ಪರ ರಾಲಿಯಲ್ಲಿ ಪ್ರಧಾನಿ ಮೋದಿ ಪೋಸ್ಟರ್!
ಸಿಂಧುದೇಶ್ ಸ್ವಾತಂತ್ರ್ರ ಹೋರಾಟ ಪೋಸ್ಟರ್ ಕೂಡಾ ಪ್ರತಿಭಟನಾಕಾರರ ಬಳಿ ಇದ್ದಿರುವುದಾಗಿ ವರದಿ ತಿಳಿಸಿದೆ.
Team Udayavani, Jan 18, 2021, 12:44 PM IST
ನವದೆಹಲಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಸೋಮವಾರ(ಜನವರಿ 18, 2021) ನಡೆದ ಸ್ವಾತಂತ್ರ್ಯ ಪರ ರಾಲಿಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ಹಲವು ನಾಯಕರ ಪೋಸ್ಟರ್ ಗಳು ರಾರಾಜಿಸಿರುವುದಾಗಿ ವರದಿ ತಿಳಿಸಿದೆ.
ಪ್ರತ್ಯೇಕ ಸಿಂಧುದೇಶವಾಗಬೇಕು ಎಂಬ ಸಿದ್ದಾಂತವನ್ನು ಪ್ರತಿಪಾದಿಸುತ್ತಿದ್ದ ಜಿಎಂ ಸೈಯದ್ ಜನ್ಮ ದಿನಾಚರಣೆ ಅಂಗವಾಗಿ ಪ್ರತಿಭಟನಾಕಾರರು ಈ ರಾಲಿಯನ್ನು ಹಮ್ಮಿಕೊಂಡಿರುವುದಾಗಿ ವರದಿ ವಿವರಿಸಿದೆ.
ಪಾಕ್ ವಿರುದ್ಧದ ಹಾಗೂ ಸ್ವಾತಂತ್ರ್ಯ ಪರ ರಾಲಿಯಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್, ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಗನಿ, ಬಾಂಗ್ಲಾದೇಶದ ಶೇಕ್ ಹಸೀನಾ, ಫ್ರಾನ್ಸ್ ನ ಮಾರ್ಕೋನ್, ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗ್ಯುಟೇರ್ರಸ್, ಬ್ರಿಟನ್ ಪ್ರಧಾನಿ ಬೋರಿಸ್ ಜೋಹ್ಸನ್ ಅವರ ಫೋಟೋಗಳು ಪ್ರತಿಭಟನಾಕಾರರ ಕೈಯಲ್ಲಿ ಇದ್ದಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಬೆಳಗಾವಿ ನಮ್ಮದು, ನೀವೊಬ್ಬರು ಮುಖ್ಯಮಂತ್ರಿ ಎಂದು ಮರೆಯಬೇಡಿ; ಮಹಾ ಸಿಎಂ ಗೆ ಸಿದ್ದರಾಮಯ್ಯ
“ಪಾಕಿಸ್ತಾನದಿಂದ ಸಿಂಧ್ ಗೆ ಸ್ವಾತಂತ್ರ್ಯ” ಬೇಕಾಗಿದೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಸಿಂಧುದೇಶ್ ಸ್ವಾತಂತ್ರ್ರ ಹೋರಾಟ ಪೋಸ್ಟರ್ ಕೂಡಾ ಪ್ರತಿಭಟನಾಕಾರರ ಬಳಿ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಿಎಂಗೆ ಪತ್ರ ಬರೆದಿಟ್ಟು ಅರಣ್ಯ ಇಲಾಖೆಯ ಅರೆಕಾಲಿಕ ನೌಕರ ಕಚೇರಿಯಲ್ಲಿ ನೇಣಿಗೆ ಶರಣು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್.ಶೆಟ್ಟಿ
30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ಹೊಸ ಸೇರ್ಪಡೆ
ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣ, ನಿರಂತರ ಧನಾಗಮನ: ಹೇಗಿದೆ ಇಂದಿನ ಗ್ರಹಬಲ ?
ಸಿಇಟಿಗೆ ಪಠ್ಯಕಡಿತ, ನೀಟ್ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ
ದಾವೂದ್ ಆಸ್ತಿ ಜಪ್ತಿಗೆ ಆದೇಶ : ಎಫ್ಎಟಿಎಫ್ ಕಪ್ಪುಪಟ್ಟಿಗೆ ತಪ್ಪಿಸಿಕೊಳ್ಳಲು ಪಾಕ್ ಉಪಾಯ
ಸಂಗೀತ ಇಲ್ಲದ ಸಿನೆಮಾ ಊಹಿಸಲಸಾಧ್ಯ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ಗೆ 1 ವರ್ಷ ಜೈಲು ಶಿಕ್ಷೆ