
ಚೀನದಲ್ಲಿ ನಿಲ್ಲದ ಆಕ್ರೋಶ: ಶಾಂಘೈನಲ್ಲಿ ಪೊಲೀಸರ ಜತೆಗೆ ಘರ್ಷಣೆ
Team Udayavani, Nov 29, 2022, 7:40 AM IST

ಬೀಜಿಂಗ್: ಕೊರೊನಾ ಸೋಂಕಿನ ವಿರುದ್ಧ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಸರ್ಕಾರದ ಆಡಳಿತ ಜಾರಿಗೊಳಿಸಿರುವ ಕಠಿಣ ಪ್ರತಿಬಂಧಕ ಕ್ರಮಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆ ದೇಶದ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಯ ಪ್ರಧಾನ ಕೇಂದ್ರವಾಗಿರುವ ಶಾಂಘೈನಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಪ್ರತಿಭಟನೆಗಳು ಸರ್ಕಾರವನ್ನು ಕೆಂಗಡಿಸಿವೆ. ಶುಕ್ರವಾರ (ನ.25)ದಿಂದ ಈಚೆಗೆ ಆ ದೇಶದಲ್ಲಿ ಸೋಂಕು ಪ್ರತಿಬಂಧಕ ಕ್ರಮಗಳನ್ನು ಪ್ರಶ್ನೆ ಮಾಡಿ ಜನರು ಬೀದಿಗೆ ಇಳಿದಿದ್ದಾರೆ.
ಭಾನುವಾರ ರಾತ್ರಿ ಶಾಂಘೈನಲ್ಲಿ ನಿಯಮಗಳನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಜತೆಗೆ ಘರ್ಷಣೆಯನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಹಲವು ಮಂದಿಯನ್ನು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದೆ.
ಈ ಘಟನೆಯ ಬಳಿಕ ಶಾಂಘೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕ್ಸಿ ಜಿನ್‌ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಈ ಘಟನೆಗಳು ನಡೆದಿವೆ.
40 ಸಾವಿರ ಕೇಸು:
ಚೀನದಲ್ಲಿ ಒಟ್ಟಾರೆಯಾಗಿ 40 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಬೀಜಿಂಗ್ ಒಂದರಲ್ಲೇ 4 ಸಾವಿರ ಕೇಸುಗಳು ದೃಢಪಟ್ಟಿವೆ. ಜತೆಗೆ ಕಠಿಣ ಪ್ರತಿಬಂಧಕ ಕ್ರಮಗಳನ್ನು ಅಲ್ಲಿನ ಸರ್ಕಾರ ಸಮರ್ಥಿಸಿಕೊಂಡಿದೆ.
ಬಿಬಿಸಿ ಪತ್ರಕರ್ತಗೆ ಥಳಿತ:
ಶಾಂಘೈನಲ್ಲಿ ಸರ್ಕಾರಿ ನೀತಿ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತನಿಗೆ ಥಳಿಸಲಾಗಿದೆ ಎಂದು ಬಿಬಿಸಿ ಆರೋಪಿಸಿದೆ. ಆದರೆ, ಪೊಲೀಸರು ಈ ವಾದವನ್ನು ತಿರಸ್ಕರಿಸಿದ್ದಾರೆ.
ವಿರೋಧಿ ಘೋಷಣೆಗಳಿಗೆ ಸೆನ್ಸಾರ್:
ಚೀನ ಅಧ್ಯಕ್ಷ ಕ್ಸಿಜಿನ್‌ಪಿಂಗ್ ರಾಜೀನಾಮೆ ಕೊಡಬೇಕು, ಕೂಡಲೇ ಲಾಕ್‌ಡೌನ್ ವಾಪಸ್ ಪಡೆಯಿರಿ ಸೇರಿದಂತೆ ಹಲವು ಸರ್ಕಾರಿ ವಿರೋಧಿ ಘೋಷಣೆಗಳು ಹೊರ ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣದಿಂದಾಗಿ ಆ ಘೋಷಣೆಗಳಿಗೆ ಸರ್ಕಾರದ ವತಿಯಿಂದ ಸೆನ್ಸಾರ್ ಮಾಡಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆನಡಾದ ಹಿಂದೂ ದೇವಸ್ಥಾನದಲ್ಲಿ ಭಾರತ ವಿರೋಧಿ ಬರಹಗಳು; ವ್ಯಾಪಕ ಆಕ್ರೋಶ

1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್ : ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್

“ಮಾಹಿತಿ ಯುದ್ಧ ನಡೆಸುತ್ತಿದೆ..” ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಭಾರತದ ಬೆಂಬಲಕ್ಕೆ ನಿಂತ ರಷ್ಯಾ

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಬರ್ತ್ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 8 ಮಂದಿ ಸಾವು, 3 ಮಂದಿಗೆ ಗಾಯ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
