
ಕತ್ತಲಲ್ಲಿ ಮುಳುಗಿದ ಪಾಕ್; ತಾಂತ್ರಿಕ ತೊಂದರೆಯಿಂದ ಕುಸಿದ ವಿದ್ಯುತ್ ಗ್ರಿಡ್
ನಾಲ್ಕು ತಿಂಗಳಲ್ಲಿ 2ನೇ ಬಾರಿಗೆ ಸಮಸ್ಯೆ
Team Udayavani, Jan 24, 2023, 7:40 AM IST

ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯಂಚಿನಲ್ಲಿರುವ ಪಾಕಿಸ್ತಾನದಲ್ಲಿ ಸೋಮವಾರ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ನಾಲ್ಕು ತಿಂಗಳಲ್ಲಿ 2ನೇ ಬಾರಿಗೆ ಪಾಕ್‌ನಲ್ಲಿ ಇಂತಹ ಘಟನೆ ನಡೆಯುತ್ತಿದೆ.
ಸೋಮವಾರ ಬೆಳಗ್ಗೆ 7.30ರ ಹೊತ್ತಿಗೆ ಕೆಲವು ಉತ್ಪಾದನಾ ಘಟಕಗಳಲ್ಲಿ ವಿದ್ಯುತ್ ಪ್ರಸರಣದಲ್ಲಿ ವ್ಯತ್ಯಾಸಗಳಾಗಿವೆ. ಅದರ ಫಲಿತಾಂಶವೆಂಬಂತೆ ಸರಣಿಸರಣಿಯಾಗಿ ಉತ್ಪಾದನಾ ಘಟಕಗಳು ಕಾರ್ಯಾಚರಣೆ ನಿಲ್ಲಿಸಿವೆ. ಕೆಲವು ಕಡೆ ವೋಲ್ಟೆàಜ್‌ನಲ್ಲೇ ಏರುಪೇರು ಕಂಡುಬಂದಿದೆ. ಪ್ರಮುಖ ನಗರಗಳಾದ ಕರಾಚಿ, ಪೇಶಾವರ, ಲಾಹೋರ್, ಇಸ್ಲಾಮಾಬಾದ್ ಗಳಲ್ಲಿ ವಿದ್ಯುತ್ ಕೈಕೊಟ್ಟಿತ್ತು.
ಅದಕ್ಕೆ ಪೂರಕವಾಗಿ ಚಳಿಗಾಲವೂ ಇರುವುದರಿಂದ ಜನಸಾಮಾನ್ಯರ ಹೀಟರ್‌ಗಳ ಬಳಕೆ ಮಾಡಲಾಗದೆ ಪರಿತಪಿಸುವಂತಾಗಿದೆ. ಈಗಾಗಲೇ ಇಂಧನ ಉಳಿತಾಯದ ನಿಟ್ಟಿನಲ್ಲಿ ರಾತ್ರಿ 8 ಗಂಟೆಯ ಬಳಿಕ ಮಾರುಕಟ್ಟೆ, ಮಾಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಈ ಮೂಲಕ ವಿದ್ಯುತ್ ಉಳಿತಾಯಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ.
ಸರ್ಕಾರ ಹೇಳಿದ್ದೇನು?
ರಾಷ್ಟ್ರೀಯ ಗ್ರಿಡ್‌ನಲ್ಲೇ ಪ್ರಸರಣ ಅಸ್ತವ್ಯಸ್ತವಾಗಿದೆ. ಅದರಿಂದಾಗಿಯೇ ವಿದ್ಯುತ್ ಕೈಕೊಟ್ಟಿದೆ ಎಂದು ಕೆ ಎಲೆಕ್ಟ್ರಿಕ್ ಕಂಪನಿಯ ವಕ್ತಾರ ಇಮ್ರಾನ್ ರಾಣಾ ಹೇಳಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾದ ಹಿನ್ನೆಲೆಯಲ್ಲಿ 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಟ್ವೀಟರ್‌ನಲ್ಲಿ ವ್ಯಂಗ್ಯ, ಟೀಕೆಗಳ ಮೀಮ್
ಪಾಕಿಸ್ತಾನದಲ್ಲಿ ವಿದ್ಯುತ್ ವೈಫಲ್ಯ ಉಂಟಾಗಿರುವುದು ಟ್ವಿಟರ್‌ನಲ್ಲಿ ನಗೆ ಬುಗ್ಗೆಗಳನ್ನೇ ಛಿಮ್ಮಿಸಿದೆ. “ವೆಲ್‌ಕಂ ಬ್ಯಾಕ್ ಟು ಪುರಾನಾ ಪಾಕಿಸ್ತಾನ್’ ಎಂದು ಹಾಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಸಂಸತ್‌ನಲ್ಲಿ ಹಿಂದೊಮ್ಮೆ ಮಾತನಾಡಿದ್ದ ವಿಡಿಯೋ ತುಣುಕನ್ನು ಹಾರೂನ್ ಎಂಬುವರು ಅಪ್‌ಲೋಡ್ ಮಾಡಿದ್ದಾರೆ. ಚಾನೆಲ್‌ಗಳಲ್ಲಿ ಸೋಮವಾರದ ಬ್ರೇಕಿಂಗ್ ನ್ಯೂಸ್ ವಿದ್ಯುತ್ ವೈಫಲ್ಯದ ಬಗ್ಗೆಯೇ ಆಗಿದೆ ಸೇರಿದಂತೆ ಹಲವರು ಟೀಕಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
