

Team Udayavani, Jul 5, 2018, 6:00 AM IST
ಟೋಕಿಯೊ: ಬ್ರಿಟನ್‌ನ ರಾಜಕುಮಾರರು ಸಾಮಾನ್ಯ ಕೌಟುಂಬಿಕ ಹಿನ್ನೆಲೆ ಇರುವ ಮಹಿಳೆಯರನ್ನು ಮದುವೆಯಾದದ್ದು ಈ ವರೆಗೆ ಸುದ್ದಿಯಾಗುತ್ತಿತ್ತು. ಈಗ ಜಪಾನ್ ರಾಜಕುಮಾರಿ ಸಾಮಾನ್ಯ ಕೌಟುಂಬಿಕ ಹಿನ್ನೆಲೆಯ ವ್ಯಕ್ತಿಯನ್ನು ಪ್ರೀತಿಸಿ ಅವರನ್ನೇ ವರಿಸುತ್ತಿರುವುದು ಸುದ್ದಿಯಾಗಿದೆ. ಪ್ರೀತಿಸಿದ ವ್ಯಕ್ತಿಗಾಗಿ ರಾಜಕುಮಾರಿ ಅಯಾಕೊ(27) ತನ್ನ ರಾಜಕುಮಾರಿ ಪಟ್ಟವನ್ನೇ ತ್ಯಜಿಸಲು ಸಿದ್ಧರಾಗಿದ್ದಾರೆ.
ಜಪಾನ್‌ನ ರಾಜಮನೆತನದವರು ರಾಜಮನೆತನದವರ ಹೊರತಾಗಿ ಸಾಮಾನ್ಯರನ್ನು ಮದುವೆಯಾದರೆ ರಾಜ ಪದವಿಯನ್ನು ತ್ಯಜಿಸಬೇಕು. ರಾಜಕುಮಾರಿ ಆಯಾಕೊ ಖುಷಿಯಿಂದ ರಾಜಪದವಿ ತ್ಯಜಿಸುವುದಾಗಿ ಹೇಳಿದ್ದಾರೆ.
ಆಕಿಯೊ ಭಾವಿ ಪತಿ ಕೇಯ್ ಮೊರಿಯೊ ಹಡಗಿನಲ್ಲಿ ಕೆಲಸ ಮಾಡುವ ನೌಕರ. ರೆಸ್ಟಾರೆಂಟ್‌ನಲ್ಲಿ ಊಟ ಮಾಡುವಾಗ ಕೇಯ್ ನನಗೆ ಪ್ರೇಮ ನಿವೇದನೆ ಮಾಡಿದರು. ನನಗೆ ನನ್ನ ಕುಟುಂಬವೂ ಮುಖ್ಯವಾದ್ದರಿಂದ ನಾನು ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಅವರನ್ನೇ ಮದುವೆಯಾಗಲು ಒಪ್ಪಿಕೊಂಡೆ ಎಂದಿ ದ್ದಾರೆ. ಟೋಕಿಯೋದಲ್ಲಿರುವ ಮೇಜಿ ಜಿಂಗು ಮಂದಿರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಲು ಯುವ ಜೋಡಿ ನಿರ್ಧರಿಸಿದೆ. ಜಪಾನ್‌ನಲ್ಲಿ ರಾಜಮನೆತನದವರು ಇತರ ಸಾಮಾಜದವರನ್ನು ಮದುವೆಯಾ ಗುತ್ತಿರುವುದು ಹೆಚ್ಚಾಗಿರುವ ಕಾರಣ ಈಗ ಜಪಾನ್‌ನಲ್ಲಿ ಕೇವಲ 18 ರಾಜ ಮನೆತನಗಳು ಮಾತ್ರ ಉಳಿದಿವೆ.
Ad
Israel Iran War: ಇಸ್ರೇಲ್ ಯುದ್ಧದಲ್ಲಿ 1060 ಪ್ರಜೆಗಳ ಸಾವು: ಇರಾನ್ ಸರ್ಕಾರ
Milan Airport: ವಿಮಾನ ಎಂಜಿನ್‌ಗೆ ಸಿಲುಕಿ ವ್ಯಕ್ತಿ ಸಾವು!
America: ಕಾರು-ಮಿನಿ ಟ್ರಕ್ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ
ಅಧ್ಯಕ್ಷ ಟ್ರಂಪ್ vs ಉದ್ಯಮಿ ಎಲಾನ್ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್!
Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…
Holehonnuru; ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಸಾವು ಪ್ರಕರಣ; ಮೂವರು ಆರೋಪಿಗಳ ಬಂಧನ
SAvsZIM: ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಜಯಭೇರಿ
Israel Iran War: ಇಸ್ರೇಲ್ ಯುದ್ಧದಲ್ಲಿ 1060 ಪ್ರಜೆಗಳ ಸಾವು: ಇರಾನ್ ಸರ್ಕಾರ
ನನಗೆ ಸಚಿವ ಸ್ಥಾನ ಬೇಕಿಲ್ಲ, ಡಿ.ಕೆ.ಶಿವಕುಮಾರ್ ಸಿಎಂ ಆದ್ರೆ ಸಾಕು: ಸಿ.ಪಿ.ಯೋಗೇಶ್ವರ್
Tamil Nadu: ಶಾಲಾ ವಾಹನಕ್ಕೆ ರೈಲು ಡಿಕ್ಕಿ: 3 ವಿದ್ಯಾರ್ಥಿಗಳು ಸಾವು
You seem to have an Ad Blocker on.
To continue reading, please turn it off or whitelist Udayavani.