ಬ್ಯಾಂಕ್ ದರೋಡೆಗೆ ಸಂಚು: ಸುರಂಗ ತೋಡುತ್ತಿದ್ದ ವ್ಯಕ್ತಿಯನ್ನೇ ರಕ್ಷಿಸಿದ ರಕ್ಷಣಾ ಪಡೆ!
Team Udayavani, Aug 13, 2022, 7:56 PM IST
ರೋಮ್: ಬ್ಯಾಂಕ್ ದರೋಡೆ ಮಾಡಬೇಕೆಂದು ಸಂಚು ಹಾಕಿಕೊಂಡು, ಸುರಂಗ ತೋಡುತ್ತಿದ್ದ ವ್ಯಕ್ತಿಯನ್ನೇ ರಕ್ಷಣಾ ಪಡೆ ಬಂದು ರಕ್ಷಿಸಿರುವ ವಿಚಿತ್ರ ಘಟನೆ ಇಟಲಿಯ ರೋಮ್ ನಗರದಲ್ಲಿ ನಡೆದಿದೆ.
ಐವರು ವ್ಯಕ್ತಿಗಳ ಗುಂಪೊಂದು ಬ್ಯಾಂಕ್ ದರೋಡೆ ಮಾಡುವುದಕ್ಕೆ ಸಂಚು ಹಾಕಿತ್ತು. ಅದರ ಹತ್ತಿರ ಮುಚ್ಚಿದ್ದ ಅಂಗಡಿಯೊಂದರಿಂದ ಸುರಂಗ ಕೊರೆದು ಬ್ಯಾಂಕ್ ದರೋಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಅದರಂತೆ 6 ಅಡಿ ಆಳದ ಸುರಂಗವನ್ನೂ ಕೊರೆದಿದ್ದಾರೆ. ಗುರುವಾರ ನಾಲ್ವರು ಸುರಂಗದಿಂದ ಹೊರಗಿದ್ದಾಗ ಸುರಂಗ ಏಕಾಏಕಿ ಕುಸಿದುಬಿದ್ದಿದೆ. ಅದರ ಮಧ್ಯದಲ್ಲಿ ಒಬ್ಬ ಮಾತ್ರ ಸಿಲುಕಿಕೊಂಡಿದ್ದಾನೆ. ತಕ್ಷಣ ಈ ವಿಚಾರವನ್ನು ರಕ್ಷಣಾ ಸಿಬ್ಬಂದಿಗೆ ತಿಳಿಸಲಾಗಿದೆ.
ರಕ್ಷಣಾ ಪಡೆಯ ಸಿಬ್ಬಂದಿ ಬರೋಬ್ಬರಿ 8 ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ, ಪಕ್ಕದಲ್ಲಿ ಮತ್ತೊಂದು ಸುರಂಗ ಮಾಡಿ, ದರೋಡೆಕೋರನನ್ನು ರಕ್ಷಿಸಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ನಾಲ್ವರನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ