ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್.!
Team Udayavani, Dec 5, 2022, 6:55 AM IST
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಾಸ್ಕೋದ ತಮ್ಮ ಅಧಿಕೃತ ನಿವಾಸದಲ್ಲಿ ಮೆಟ್ಟಿಲು ಇಳಿಯುವಾಗ ಜಾರಿ ಬಿದ್ದಿದ್ದಾರೆ. ಇದರ ಪರಿಣಾಮ ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡಿದ್ದಾರೆ ಎಂದು ಪುಟಿನ್ ಅವರ ಭದ್ರತಾ ತಂಡದ ಹೇಳಿಕೆ ಉಲ್ಲೇಖೀಸಿ ಟೆಲಿಗ್ರಾಂ ಸುದ್ದಿವಾಹಿನಿ ವರದಿ ಮಾಡಿದೆ.
“ಇನ್ನೇನು ಐದು ಮೆಟ್ಟಿಲುಗಳು ಇರುವಾಗ ಪುಟಿನ್(70) ಜಾರಿ ಬಿದ್ದರು. ಕ್ಯಾನ್ಸರ್‌ನಿಂದಾಗಿ ಹೊಟ್ಟೆ ಮತ್ತು ಕರುಳಿನ ಸಮಸ್ಯೆ ಇರುವುದರಿಂದ ಅವರು ಬಿದ್ದ ತಕ್ಷಣ ಅನಿಯಂತ್ರಿತ ಮಲವಿಸರ್ಜನೆ ಆಗಿದೆ,’ ಎಂದು ವರದಿಗಳು ತಿಳಿಸಿವೆ.
“ರಕ್ತ ಕ್ಯಾನ್ಸರ್ ಕಾರಣ ಪುಟಿನ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ,’ ಎಂದು ಪುಟಿನ್‌ಗೆ ಆಪ್ತವಾಗಿರುವ ರಷ್ಯಾ ನಾಯಕರೊಬ್ಬರು ಇತ್ತೀಚೆಗೆ ಹೇಳಿದ್ದರು.