
7 ಕೆಜಿ ತೂಕದ ಅಪರೂಪದ ಉಲ್ಕೆಯ ಆವಿಷ್ಕಾರ
Team Udayavani, Jan 19, 2023, 7:00 PM IST

ವಾಷಿಂಗ್ಟನ್: ಅಮೆರಿಕ ಮತ್ತು ಬೆಲ್ಜಿಯಂನ ವಿಜ್ಞಾನಿಗಳು ಅಂಟಾರ್ಕ್ಟಿಕಾದಲ್ಲಿ 7.6 ಕೆಜಿ ತೂಕದ ಅತ್ಯಂತ ಅಪರೂಪದ ಉಲ್ಕೆ ಸೇರಿದಂತೆ ಒಟ್ಟು 5 ಹೊಸ ಉಲ್ಕಾ ಶಿಲೆಗಳನ್ನು ಪತ್ತೆಹಚ್ಚಿದ್ದಾರೆ.
ಅಂಟಾರ್ಕ್ಟಿಕಾ ಎನ್ನುವುದು ಜಗತ್ತಿನಲ್ಲೇ ಉಲ್ಕೆಗಳ ಬೇಟೆಗೆ ಪ್ರಶಸ್ತ ತಾಣ ಎಂದು ಪ್ರಸಿದ್ಧಿ ಪಡೆದಿದೆ. ಅಂಟಾರ್ಕ್ಟಿಕಾವು ಮರುಭೂಮಿ ಪ್ರದೇಶವಾಗಿದ್ದು, ಒಣ ಹವೆಯನ್ನು ಹೊಂದಿರುವ ಕಾರಣ ಉಲ್ಕೆಗಳು ಸುಲಭವಾಗಿ ಗೋಚರಿಸುತ್ತವೆ. ಈ ವಿಜ್ಞಾನಿಗಳು ಅಂಟಾರ್ಕ್ಟಿಕಾದ ಬ್ಲೂ ಐಸ್ ಪ್ರದೇಶದ ಆಳದಲ್ಲಿ ಉಲ್ಕೆಗಳನ್ನು ಪತ್ತೆಹಚ್ಚಿದ್ದಾರೆ.
ಐದು ಉಲ್ಕೆಗಳ ಪೈಕಿ ಒಂದು 7.6 ಕೆ.ಜಿ. ದ್ರವ್ಯರಾಶಿ ಹೊಂದಿದೆ. ಕಳೆದೊಂದು ಶತಮಾನದಲ್ಲಿ ಅಂಟಾರ್ಕ್ಟಿಕಾದಲ್ಲಿ ಸುಮಾರು 45 ಸಾವಿರ ಉಲ್ಕೆಗಳು ಪತ್ತೆಯಾಗಿವೆ. ಈ ಪೈಕಿ ಕೇವಲ ನೂರರಷ್ಟು ಉಲ್ಕೆಗಳು ಮಾತ್ರ ಈ ಗಾತ್ರದ್ದು. ವಿಜ್ಞಾನಿಗಳು ಉಪಗ್ರಹ ಚಿತ್ರಗಳನ್ನು ಆಧರಿಸಿ ಹೊಸ ಉಲ್ಕೆಗಳಿರುವ ಪ್ರದೇಶಗಳನ್ನು ಕಂಡುಕೊಂಡಿದ್ದಾರೆ.
ದೊಡ್ಡ ಗಾತ್ರದ ಅಪರೂಪದ ಉಲ್ಕೆಗಳ ಮೂಲಕ ನಾವು ಭೂಮಿಯ ಸೃಷ್ಟಿಯ ಕುರಿತು ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Partygate case: ಸಂಸತ್ ಸ್ಥಾನಕ್ಕೂ ರಾಜೀನಾಮೆ ನೀಡಿದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್

ವಿಮಾನ ಅಪಘಾತದಲ್ಲಿ ನಾಪತ್ತೆ: 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಪತ್ತೆಯಾದ 4 ಮಕ್ಕಳು

Tokyo airport ರನ್ ವೇಯಲ್ಲಿ ಮುಖಾಮುಖಿಯಾದ ಎರಡು ಪ್ಯಾಸೆಂಜರ್ ವಿಮಾನಗಳು

ಡೊನಾಲ್ಡ್ ಟ್ರಂಪ್ ತಪ್ಪಿತಸ್ಥ; ಈ ಸ್ಥಿತಿ ಎದುರಿಸಿದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ

Pakistani; ಕೋರ್ಟ್ ಮಾರ್ಷಲ್‌ಗೆ ಸಂಚು: ಇಮ್ರಾನ್ ಖಾನ್ ಆರೋಪ