
ರಷ್ಯಾ ಬಳಿಯಿದೆ 12 ಲಕ್ಷ ಕೋಟಿ ರೂ.!
ಆರ್ಥಿಕ ದಿಗ್ಬಂಧನ; ಭಾರತದ ರೂಪಾಯಿಯನ್ನು ಖರ್ಚು ಮಾಡಲಾಗದೆ ಒದ್ದಾಡುತ್ತಿದೆ ರಷ್ಯಾ
Team Udayavani, Jun 2, 2023, 7:45 AM IST

ಬ್ಲೂಮ್‌ಬರ್ಗ್: ಉಕ್ರೇನ್ ಮೇಲೆ ಮುಗಿಬಿದ್ದು ಆರ್ಥಿಕ ದಿಗ್ಬಂಧನಕ್ಕೊಳಗಾಗಿ ಪರದಾಡುತ್ತಿರುವ ರಷ್ಯಾ ಒಂದು ವಿಚಿತ್ರ ಪೀಕಲಾಟದಲ್ಲಿ ಸಿಕ್ಕಿಬಿದ್ದಿದೆ.
ಭಾರತಕ್ಕೆ ಅದು ಪೆಟ್ರೋಲ್-ಡೀಸೆಲ್ ಸೇರಿದಂತೆ ಕೆಲವು ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಭಾರತ ರೂಪಾಯಿಯಲ್ಲಿ ಪಾವತಿ ಮಾಡುತ್ತಿದೆ. ಹೀಗಾಗಿ ರಷ್ಯಾ 147 ಬಿಲಿಯನ್ ಡಾಲರ್ (12 ಲಕ್ಷ ಕೋಟಿ ರೂ.) ಮೌಲ್ಯದ ರೂಪಾಯಿಗಳನ್ನು ಹೊಂದಿದೆ.
ಆದರೆ ಅದನ್ನು ಹೇಗೆ ಖರ್ಚು ಮಾಡುವುದು ಎಂದು ತಿಳಿಯದೇ ಒದ್ದಾಡುತ್ತಿದೆ. ರಷ್ಯಾದ ಬ್ಯಾಂಕುಗಳು, ಅದರ ಕರೆನ್ಸಿ ರೂಬೆಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧವಿದೆ. ಆ ದೇಶದ ಕರೆನ್ಸಿ ತನ್ನ ಮೌಲ್ಯವನ್ನೇ ಕಳೆದುಕೊಂಡಿದೆ. ಇಂತಹ ಹೊತ್ತಿನಲ್ಲಿ ಅದಕ್ಕೆ ಆಸರೆಯಾಗಿರುವುದು ಭಾರತ. ಆದರೆ ಭಾರತದೊಂದಿಗೆ ವ್ಯಾಪಾರ ನಡೆಸಿದರೂ, ಅದಕ್ಕೆ ಉಪಯೋಗವಾಗುತ್ತಿಲ್ಲ.
ಭಾರತ ರಷ್ಯಾದಿಂದ ತರಿಸಿಕೊಳ್ಳುತ್ತಿದ್ದರೂ, ರಫ್ತು ಮಾಡುವ ಪ್ರಮಾಣ ತೀರಾ ಕಡಿಮೆಯಿದೆ. ಆಮದು-ರಫ್ತು ಪ್ರಮಾಣ ಒಂದು ಹಂತದಲ್ಲೇನಾದರೂ ಇದ್ದಿದ್ದರೆ ಹಾಗೆಯೇ ಸರಿಹೊಂದಿಸಬಹುದಿತ್ತು. ಅದೂ ಆಗುತ್ತಿಲ್ಲ. ಭಾರತದ ಕರೆನ್ಸಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಲು ರಷ್ಯಾಕ್ಕೆ ಆಗುತ್ತಿಲ್ಲ. ಪ್ರತೀ ತ್ತೈಮಾಸಿಕದಲ್ಲಿ ಅಸಮತೋಲನ 2ರಿಂದ 3 ಬಿಲಿಯನ್ ಡಾಲರ್ ಮೌಲ್ಯದ ರೂಪಾಯಿ ಸಂಗ್ರಹ ಹೆಚ್ಚಾಗುತ್ತಲೇ ಇದೆ. ಭಾರತವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕರೆನ್ಸಿ ಬಳಕೆಯನ್ನು ಹೆಚ್ಚಿಸಬೇಕೆಂಬ ಉದ್ದೇಶ ಹೊಂದಿದೆ.
ಹಾಗಾಗಿ ಭಾರತಕ್ಕೆ ರಫ್ತು ಮಾಡುವ ದೇಶಗಳಿಗೆ ಹೆಚ್ಚುವರಿ ರೂಪಾಯಿಯಲ್ಲೇ ಪಾವತಿ ಮಾಡುತ್ತಿದೆ. ರೂಪಾಯಿ ಉಳಿದರೆ, ಅದನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆರ್‌ಬಿಐ ವಿದೇಶಿ ಕಂಪನಿಗಳಿಗೆ ಸಲಹೆ ನೀಡಿದೆ.
ರಷ್ಯಾಕ್ಕಿರುವ ಆಯ್ಕೆಗಳೇನು?: ಭಾರತೀಯ ಬ್ಯಾಂಕುಗಳಲ್ಲಿ ಸಂಗ್ರಹವಾಗಿರುವ ರೂಪಾಯಿಯನ್ನು, ಭಾರತೀಯ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿ, ಕಾಲಾನುಕ್ರಮದಲ್ಲಿ ಅದರ ಲಾಭ ಪಡೆಯಬಹುದು ಎಂಬ ಆಯ್ಕೆಯೂ ರಷ್ಯಾ ಮುಂದಿದೆ. ಆರಂಭದಲ್ಲಿ ಇದಕ್ಕೆ ಒಪ್ಪದಿದ್ದರೂ, ಸದ್ಯ ಇದೇ ರಷ್ಯಾ ಮುಂದಿರುವ ಉತ್ತಮ ಆಯ್ಕೆ ಎನಿಸಿದೆ. ಇನ್ನು ರಷ್ಯಾ ಮೂರನೇ ರಾಷ್ಟ್ರವಾದ ಚೀನಾದ ಯುವಾನ್, ಯುಎಇಯ ದಿರ್ಹಾಮ್ ಕರೆನ್ಸಿಯನ್ನು ಬಳಸಬಹುದು. ಇನ್ನೂ ಮುಖ್ಯವಾಗಿ ಭಾರತಕ್ಕೆ ಸರಿಸಮನಾಗಿ ರಷ್ಯಾದಿಂದ ತೈಲವನ್ನು ತರಿಸಿಕೊಳ್ಳುವ ರಾಷ್ಟ್ರಗಳು ತೀರಾ ಕಡಿಮೆಯಿವೆ. ಯಾವುದೇ ರೀತಿಯಲ್ಲಿ ನೋಡಿದರೂ ವಿಶ್ವದ ಬಹುತೇಕ ರಾಷ್ಟ್ರಗಳು ಹೇರಿರುವ ಆರ್ಥಿಕ ದಿಗ್ಬಂಧನ ಆ ದೇಶಕ್ಕೆ ಹೊರೆಯಾಗಿದೆ.
ರಷ್ಯಾದ ಸಂಕಷ್ಟಕ್ಕೆ ಇನ್ನೊಂದು ಮುಖ್ಯ ಕಾರಣವಿದೆ. ಆ ದೇಶದ ಬ್ಯಾಂಕುಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿವೆ. ಹಾಗಾಗಿ ಅನ್ಯದೇಶಗಳಿಂದ ಹಣ ಪಡೆಯಲು ಕಷ್ಟವಾಗುತ್ತಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ನು ಏಳಲ್ಲ ,ಎಂಟು ಖಂಡ!- 375 ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡ ವಿಜ್ಞಾನಿಗಳಿಂದ ಪತ್ತೆ

India ಸ್ವಾವಲಂಬನೆಯನ್ನು “ಆರ್ಥಿಕ ರಕ್ಷಣಾ ನೀತಿ” ಎಂದು ತಪ್ಪಾಗಿ ಭಾವಿಸಬಾರದು: ಜೈಶಂಕರ್

Tragedy: ಮದುವೆ ಸಮಾರಂಭದಲ್ಲಿ ಭೀಕರ ಅಗ್ನಿ ದುರಂತ: 100 ಮಂದಿ ಸಜೀವ ದಹನ, 150 ಮಂದಿಗೆ ಗಾಯ

Finance: ಮೌಲ್ಯವರ್ಧನೆ ಕಂಡ ಆಫ್ಘನ್ ಕರೆನ್ಸಿ

Corona: ಮತ್ತೆ ಮರುಕಳಿಸಲಿದೆ ಕೊರೊನಾ!
MUST WATCH
ಹೊಸ ಸೇರ್ಪಡೆ

Sukhpal Singh Khaira: ಡ್ರಗ್ಸ್ ಪ್ರಕರಣ.. ಕಾಂಗ್ರೆಸ್ ಶಾಸಕ ಸುಖ್ಪಾಲ್ ಸಿಂಗ್ ಖೈರಾ ಬಂಧನ

Asian Games 2023: ಮುಂದುವರೆದ ಭಾರತದ ಪದಕ ಬೇಟೆ… ಶೂಟಿಂಗ್ ನಲ್ಲಿ ಮತ್ತೊಂದು ಚಿನ್ನ

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ

Examಕರಾವಳಿಯ ಕೈ ತಪ್ಪಿದ ಕೆ-ಸೆಟ್ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ