“ವಿಕ್ಟರಿ ದಿನ” : ರಷ್ಯಾ ರಾಯಭಾರಿ ಸೆರ್ಗೆ ಮುಖಕ್ಕೆ ಕೆಂಪು ಬಣ್ಣ
Team Udayavani, May 10, 2022, 12:19 AM IST
ಕೀವ್/ಮಾಸ್ಕೋ: 2ನೇ ವಿಶ್ವಯುದ್ಧ ಜಯದ ದಿನವಾದ ಮೇ 9 ಅನ್ನು ರಷ್ಯಾ “ವಿಕ್ಟರಿ ದಿನ’ವಾಗಿ ಆಚರಿಸುತ್ತಿದ್ದು, ಪೋಲೆಂಡ್ನಲ್ಲಿ ಕೂಡ ರಷ್ಯಾ ವತಿಯಿಂದ ಈ ಸಂಭ್ರಮಾಚರಣೆ ನಡೆದಿದೆ. ಆಗ ರಷ್ಯಾ ವಿರೋಧಿ ಹೋರಾಟಗಾರರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿ ನಡೆದ ಪ್ರತಿಭಟನೆ ವೇಳೆ, ವಿಕ್ಟರಿ ದಿನದ ಕಾರ್ಯಕ್ರಮದಲ್ಲಿ ಹಾಜರಿದ್ದ ಪೋಲೆಂಡ್ನ ರಷ್ಯಾ ರಾಯಭಾರಿ ಸೆರ್ಗೆ ಆ್ಯಂಡ್ರೀವ್ ಅವರ ಮುಖಕ್ಕೆ ಕೆಂಪು ಬಣ್ಣ ಎರಚಲಾಗಿದೆ. ಪೂರ್ತಿ ಮುಖ ಬಣ್ಣವಾದರೂ ಏನೂ ಪ್ರತಿಕ್ರಿಯಿಸದೆ ಸುಮ್ಮನಿದ್ದ ಸೆರ್ಗೆ ಅವರು, ಮುಖ ಒರೆಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಎರಡೆರಡು ವಿಕ್ಟರಿ: ಇನ್ನೊಂದೆಡೆ, ರಷ್ಯಾದ ಈ ಖುಷಿಯನ್ನು ಹೆಚ್ಚು ದಿನ ಇರಲು ಬಿಡುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿ ದ್ದಾರೆ. ಶೀಘ್ರವೇ ಉಕ್ರೇನ್ ಎರಡೆರಡು “ವಿಕ್ಟರಿ ದಿನ’ ಆಚರಿಸಿಕೊಳ್ಳಲಿದೆ ಎಂದೂ ಹೇಳಿದ್ದಾರೆ. ಜತೆಗೆ ರಷ್ಯಾ ವಿರುದ್ಧದ ಯುದ್ಧದಲ್ಲಿ ತಾವೇ ಗೆಲ್ಲುವ ವಿಶ್ವಾಸ ಹೊರಹಾಕಿದ್ದಾರೆ. ರಷ್ಯಾ ಅಧ್ಯಕ್ಷ ಪುತಿನ್ ಕೂಡ ಮಾತನಾಡಿದ್ದು, “ನೆರೆ ರಾಷ್ಟ್ರವಾದ ಉಕ್ರೇನ್ ನಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದ ಕಾರಣಕ್ಕೇ ನಾವು ದಾಳಿ ನಡೆಸುವುದು ಅನಿವಾರ್ಯವಾಗಿತ್ತು’ ಎಂದು ತಮ್ಮ ನಿಲು ವನ್ನು ಸಮರ್ಥಿಸಿ ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ