ಸಾಗರದಡಿ ಸಕ್ಕರೆಯ ನಿಕ್ಷೇಪ ಪತ್ತೆ! ಸಮುದ್ರದ ತಳದಲ್ಲಿ “ಸುಕ್ರೋಸ್’ ಮಾದರಿಯಲ್ಲಿ ಸಂಗ್ರಹ
ಜರ್ಮನಿಯ "ಮರೈನ್ ಮೈಕ್ರೋಬಯಾಲಜಿ' ವಿಜ್ಞಾನಿಗಳ ಸಂಶೋಧನೆ
Team Udayavani, May 25, 2022, 6:50 AM IST
ಬ್ರೆಮೆನ್: ಜರ್ಮನಿಯ ಬ್ರೆಮೆನ್ ನಗರದಲ್ಲಿರುವ “ಮ್ಯಾಕ್ಸ್‌ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್ ಮರೈನ್ ಮೈಕ್ರೋಬಯಾಲಜಿ ಸಂಸ್ಥೆ’ಯ ವಿಜ್ಞಾನಿಗಳು, ಜಗತ್ತಿನ ಸಮುದ್ರಗಳ ತಳದಲ್ಲಿರುವ ಹಸಿರು ಹುಲ್ಲುಗಾವಲುಗಳ ಅಡಿಯಲ್ಲಿ ಅಪಾರವಾದ ಸಕ್ಕರೆಯ ನಿಕ್ಷೇಪವಿದೆ ಎಂಬ ಅಚ್ಚರಿಯ ವಿಚಾರವನ್ನು ಹೊರಹಾಕಿದ್ದಾರೆ.
ಅಸಲಿಗೆ, ವಿಜ್ಞಾನಿಗಳು ಪತ್ತೆ ಹಚ್ಚಲು ಹೋಗಿದ್ದೇ ಒಂದು ಅವರಿಗೆ ಅಲ್ಲಿ ಸಿಕ್ಕಿದ್ದೇ ಮತ್ತೊಂದು! ಸಮುದ್ರದಾಳದ ಹಲ್ಲುಗಾವಲುಗಳು ಅತಿ ಶ್ರೇಷ್ಠ ಇಂಗಾಲದ ಹೀರುವಿಕೆಯ ಘಟಕಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಒಂದು ಚದುರ ಕಿ.ಮೀ. ವಿಸ್ತೀರ್ಣದ ಹುಲ್ಲುಗಾವಲು, ನೆಲದ ಮೇಲಿನ ಒಂದು ಕಾಡು ಹೀರಿಕೊಳ್ಳುವ ಇಂಗಾಲಕ್ಕಿಂತ 35 ಪಟ್ಟು ಹೆಚ್ಚು ಹೀರಿಕೊಳ್ಳುತ್ತದೆ.
ಹಾಗಾಗಿ, ಈ ಸಾಗರದಡಿ ಹುಲ್ಲುಗಾವಲುಗಳ ಇಂಗಾಲದ ಹೀರುವಿಕೆಯ ಶಕ್ತಿಯನ್ನು ಮತ್ತಷ್ಟು ಅಧ್ಯಯನ ಮಾಡುವ ಸಲುವಾಗಿ ಈ ವಿಜ್ಞಾನಿಗಳು ಇಟಲಿ ಬಳಿಯ ಎಲಾº ದ್ವೀಪದ ಬಳಿಯ ಸಾಗರದಡಿ ಧುಮುಕಿದ್ದರು. ಅಲ್ಲಿ ಅವರು ಸಂಶೋಧನೆಯಲ್ಲಿ ನಿರತರಾಗಿದ್ದಾಗ, ಹುಲ್ಲುಗಾವಲಿನ ಅಡಿಯಲ್ಲಿ ಸಕ್ಕರೆಯ ದೈತ್ಯ ನಿಕ್ಷೇಪಗಳೇ ಅಡಗಿರುವುದನ್ನು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ:ಸಿಂಧುದುರ್ಗ: ಪ್ರವಾಸಿಗರ ದೋಣಿ ಮುಳುಗಿ ಇಬ್ಬರ ಸಾವು; ಮತ್ತಿಬ್ಬರ ಸ್ಥಿತಿ ಗಂಭೀರ
ಅದಾದ ನಂತರ ವಿಶ್ವದ ನಾನಾ ಭಾಗಗಳಲ್ಲಿರುವ ಸಮುದ್ರದಡಿಯ ಹುಲ್ಲುಗಾವಲುಗಳ ಕೆಳಗೂ ಸಂಶೋಧನೆ ನಡೆಸಲಾಗಿದ್ದು ಇಡೀ ವಿಶ್ವದ ಸಮುದ್ರದಾಳದಲ್ಲಿ ಒಟ್ಟಾರೆ 0.6ರಿಂದ 1.3 ಮಿಲಿಯನ್ ಟನ್‌ನಷ್ಟು ಸಕ್ಕರೆಯ ನಿಕ್ಷೇಪವಿರುವುದು ಪತ್ತೆಯಾಗಿದೆ.
ಇದು, 3,200 ಕೋಟಿ ಕೋಕಾಕೋಲ ಬಾಟಲಿಗಳಲ್ಲಿರುವ ಸಕ್ಕರೆಗೆ ಸರಿಸಮವಾದದ್ದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನ್ಯೂಯಾರ್ಕ್ನಲ್ಲಿ ಶೂಟೌಟ್: ಭಾರತೀಯ ಮೂಲದ ವ್ಯಕ್ತಿಯ ಹತ್ಯೆ
ದೇಶಕ್ಕೆ ಕಪ್ಪು ಚುಕ್ಕಿ ತಂದಿಟ್ಟ ಎಮರ್ಜೆನ್ಸಿ: ಜರ್ಮನಿಯ ಮ್ಯೂನಿಚ್ನಲ್ಲಿ ಪ್ರಧಾನಿ ಅಭಿಮತ
ಈ ಹೋಟೆಲ್ ನಲ್ಲಿ ಆಂಟಿ ಎಂದರೆ ಆರ್ಡರ್ ಕ್ಯಾನ್ಸಲ್! 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ನಿಯಮ
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಆರ್ಥಿಕ ದುಸ್ಥಿತಿ: ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ