
Taiwan Strait; ಅಮೆರಿಕ ನೌಕೆಗೆ ಢಿಕ್ಕಿ: ಚೀನ ಪ್ರಯತ್ನ?
Team Udayavani, Jun 6, 2023, 8:10 AM IST

ವಾಷಿಂಗ್ಟನ್: ತೈವಾನ್ ವಿಚಾರವಾಗಿ ಈಗಾಗಲೇ ಜಿದ್ದಾಜಿದ್ದಿಗೆ ಬಿದ್ದಿರುವ ಅಮೆರಿಕ-ಚೀನದ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಇದರ ಭಾಗವಾಗಿ ತೈವಾನ್ ಜಲಸಂಧಿಯಲ್ಲಿ ಅಮೆರಿಕ ನೌಕೆಗೆ ಅಡ್ಡಪಡಿಸಲು ಯತ್ನಿಸಿದ ಚೀನ ನೌಕೆಯ ಉದ್ಧಟತನದ ವೀಡಿಯೊವನ್ನು ಸೋಮವಾರ ಅಮೆರಿಕ ಬಿಡುಗಡೆಗೊಳಿಸಿದ್ದು, ಚೀನದ ವಿರುದ್ಧ ಕಿಡಿಕಾರಿದೆ.
ಅಲ್ಲದೇ ಇಂಥ ಮನಸ್ಥಿತಿ ಅಸುರಕ್ಷಿತ ಎಂದಿದೆ. ತೈವಾನ್ ಜಲಸಂ ಧಿಯಲ್ಲಿ ಶನಿವಾರ ಕೆನಡಾದ ನೌಕೆ ಹಾಗೂ ಅಮೆರಿಕದ ವಿಧ್ವಂಸಕ ನೌಕೆ ಯುಎಸ್‌ಎಸ್ ಚುಂಗ್-ಹೂನ್ ಸಾಗುತ್ತಿದ್ದವು. ಈ ವೇಳೆ ಅದೇ ಮಾರ್ಗದಲ್ಲಿ ಬಂದಂಥ ಚೀನ ನೌಕೆ, ಬೇಕು ಎಂದೇ ಅಮೆರಿಕದ ನೌಕೆಯ ಮಾರ್ಗ ಸಮೀಪಿಸಿ ಢಿಕ್ಕಿ ಹೊಡೆಯಲು ಯತ್ನಿಸಿದೆ. ಆದರೆ ಅಮೆರಿಕ ನೌಕೆ ವೇಗ ಕಡಿಮೆ ಮಾಡಿದ್ದರಿಂದ ಸಂಘರ್ಷ ತಪ್ಪಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಪುಟ್ಟಕ್ಕನ ಮಕ್ಕಳ ಔಟಿಂಗ್

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

Goa: ಕ್ಯಾಸಿನೊ ಆಪರೇಟರ್ ಡೆಲ್ಟಾ ಕಾರ್ಪ್‍ಗೆ GST ಬಾಕಿ ಕುರಿತು ನೋಟಿಸ್