ಪೇಶಾವರದಲ್ಲಿ ತಾಲಿಬಾನ್ ಅಟ್ಟಹಾಸ: 46 ಸಾವು,150ಕ್ಕೂ ಹೆಚ್ಚು ಮಂದಿಗೆ ಗಾಯ
ಪ್ರತೀಕಾರದ ದಾಳಿ; ಭದ್ರತಾ ಪಡೆಗಳೇ ಹೆಚ್ಚಿದ್ದ ಹೈಸೆಕ್ಯುರಿಟಿ ವಲಯದ ಮಸೀದಿಯೇ ಗುರಿ
Team Udayavani, Jan 30, 2023, 9:17 PM IST
ಪೇಶಾವರ : ಪಾಕಿಸ್ಥಾನದ ಪ್ರಕ್ಷುಬ್ಧ ವಾಯುವ್ಯ ಪೇಶಾವರ ನಗರದಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಭಕ್ತರು ತುಂಬಿದ್ದ ಮಸೀದಿಯಲ್ಲಿ ತಾಲಿಬಾನ್ ನ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, 46 ಜನ ಸಾವನ್ನಪ್ಪಿದ್ದು, ಸುಮಾರು 150 ಜನರು ಗಾಯಗೊಂಡಿದ್ದು ಆ ಪೈಕಿ ಹೆಚ್ಚಿನವರು ಪೊಲೀಸರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ 1.40 ರ ಸುಮಾರಿಗೆ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಳಗೆ ಪೊಲೀಸ್, ಸೇನೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬಂದಿಗಳನ್ನು ಒಳಗೊಂಡ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಮುಂದಿನ ಸಾಲಿನಲ್ಲಿದ್ದ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ 46 ಮಂದಿ ಸಾವನ್ನಪ್ಪಿದ್ದಾರೆ ಎಂದು ಲೇಡಿ ರೀಡಿಂಗ್ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪೇಶಾವರ ಪೊಲೀಸರು 38 ಸಂತ್ರಸ್ತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ಹೆಚ್ಚಾಗಿ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳೇ ಆಗಿದ್ದಾರೆ.
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ಥಾನ್ (ಟಿಟಿಪಿ) ಕಮಾಂಡರ್ ಉಮರ್ ಖಾಲಿದ್ ಖುರಾಸಾನಿ ಅವರ ಸಹೋದರ, ಆತ್ಮಾಹುತಿ ಸ್ಫೋಟವು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ಥಾನದಲ್ಲಿ ಕೊಲ್ಲಲ್ಪಟ್ಟ ತನ್ನ ಸಹೋದರನ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದ್ದಾನೆ.
ಪಾಕಿಸ್ಥಾನಿ ತಾಲಿಬಾನ್ ಎಂದು ಕರೆಯಲ್ಪಡುವ ಕಾನೂನುಬಾಹಿರ ಟಿಟಿಪಿ ಈ ಹಿಂದೆ ಭದ್ರತಾ ಸಿಬಂದಿಗಳನ್ನು ಗುರಿಯಾಗಿಸಿಕೊಂಡು ಹಲವಾರು ಆತ್ಮಾಹುತಿ ದಾಳಿಗಳನ್ನು ನಡೆಸಿದೆ.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಲು ಪೇಶಾವರಕ್ಕೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 19 ಮಂದಿ ಮೃತ್ಯು: 4 ದಿನದಲ್ಲಿ 5ನೇ ಘಟನೆ
ವಾಟ್ಸಾಪ್ ನಲ್ಲಿ ಧರ್ಮನಿಂದನೆ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ
ಅಮೆರಿಕಾದಲ್ಲಿ ಭಾರತೀಯ ಪತ್ರಕರ್ತನ ಮೇಲೆ ಖಲಿಸ್ತಾನಿ ಬೆಂಬಲಿಗರ ಹಲ್ಲೆ, ನಿಂದನೆ
ಟ್ರಂಪ್ ವಿರುದ್ಧ ಶೀಘ್ರ ಬಂಧನ ಆದೇಶ? ಅಶ್ಲೀಲ ನಟಿ ಜತೆಗಿನ ಸಂಬಂಧ ಮುಚ್ಚಿಟ್ಟ ಆರೋಪ
ಗೋಧಿಗಾಗಿ ಮುಗಿಬಿದ್ದ ಜನ ಪಾಕ್‌ನಲ್ಲಿ 4 ಮಂದಿ ಸಾವು !
MUST WATCH
ಹೊಸ ಸೇರ್ಪಡೆ
ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ
ಮಾಸ್ ಲುಕ್ ನಲ್ಲಿ ‘ರಾನಿ’ ಎಂಟ್ರಿ; ನಾಯಕ ನಟನಾಗಿ ಕಿರಣ್ ರಾಜ್
ಒಳಮೀಸಲಾತಿ ಹೆಚ್ಚಳ ರಾಜ್ಯ ಸರ್ಕಾರದ ಚುನಾವಣಾ ಗಿಮಿಕ್-ಡಾ.ಜಿ.ಪರಮೇಶ್ವರ
ಅಲ್ಪಸಂಖ್ಯಾತ ಮೀಸಲಾತಿ ಕೋಟಾ ರದ್ದುಗೊಳಿಸಿದ್ದು ಸರಿಯಾದ ಕ್ರಮ: ಅಮಿತ್ ಶಾ
ಬುಮ್ರಾ ಬಳಿಕ ಐಪಿಎಲ್ ನಿಂದ ಹೊರಬಿದ್ದ ಮತ್ತೊಬ್ಬ ಮುಂಬೈ ಇಂಡಿಯನ್ಸ್ ಬೌಲರ್