ಇಸ್ಲಾಂ ವಿರುದ್ಧವಾಗಿರುವ ನಿನ್ನಂಥ ಕಾಫೀರರನ್ನು ಕೊಲ್ಲುವ ಅಧಿಕಾರವಿದೆ:ಫರ್ಜಾದ್ ಗೆ ತಾಲಿಬಾನ್

ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿ ಚಿತ್ರ ಹಿಂಸ ನೀಡುತ್ತಿದೆ ತಾಲಿಬಾನ್ : ಮಾನವ ಹಕ್ಕುಗಳ ಕಾರ್ಯಕರ್ತ ಹಬೀಬುಲ್ಲಾ ಫರ್ಜಾದ್

Team Udayavani, Sep 13, 2021, 12:48 PM IST

13-3

ಪ್ರಾತಿನಿಧಿಕ ಚಿತ್ರ

ಕಾಬೂಲ್ : ಈ ಬಾರಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ತನ್ನ ನಿಜಬಣ್ಣವನ್ನು ಪದೇ ಪದೇ ಬಯಲು ಮಾಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ದೊರಕಿದೆ.

ಮಾನವ ಹಕ್ಕುಗಳ ಕಾರ್ಯಕರ್ತ ಹಬೀಬುಲ್ಲಾ ಫರ್ಜಾದ್ ಕಳೆದ ಬುಧವಾರ ಕಾಬೂಲ್‌ ನಲ್ಲಿ ಮಹಿಳೆಯರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ತಾಲಿಬಾನ್‌ನಿಂದ ಕ್ರೂರವಾಗಿ ಥಳಿತಕ್ಕೆ ಒಳಗಾಗಿದ್ದರು.

ತಾಲಿಬಾನ್ ಉಗ್ರ ಪಡೆ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ಆಡಳಿತದ ವಿರುದ್ಧ ನಿಂತವರ ಎಲ್ಲರ ಪಾಡು ಇದೇ ಆಗಿದೆ.

ಈ ಬಗ್ಗೆ ಅಲ್ಲಿನ ಸುದ್ದಿ ಸಂಸ್ಥೆ ಡೈಲಿ ಸ್ಟಾರ್ ವರದಿ ಮಾಡಿದ್ದು, ತಾಲಿಬಾನ್ ಉಗ್ರ ಸರ್ಕಾರದ ವಿರುದ್ಧ ನಿಂತವರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ಮಾನವ ಹಕ್ಕುಗಳ ಕಾರ್ಯಕರ್ತರುಯ ಹಾಗೂ ಪ್ರತಿಭಟನಾಕಾರರನ್ನು ಕಂಡಕಂಡಲ್ಲೆಲ್ಲಾ ಉಗ್ರ ಪಡೆ ಕ್ರೂರವಾಗಿ ಥಳಿಸುತ್ತಿದೆ  ಎಂದು ಹೇಳಿದೆ.

ಇದನ್ನೂ ಓದಿ : ಶುಭಾ ಪೂಂಜಾ ನಟನೆಯ ‘ಅಂಬುಜಾ’ ಫ‌ಸ್ಟ್‌ಲುಕ್‌ ಬಿಡುಗಡೆ: ಲಂಬಾಣಿ ಗೆಟಪ್ ನಲ್ಲಿ ಶುಭಾ ಮಿಂಚು

ತಾಲಿಬಾನ್ ಪಡೆ ಶರಿಯಾ ಕಾನೂನಿನ ಅನ್ವಯ ಹಲವಾರು ಫತ್ವಾ ಹೊರಡಿಸಿದ್ದು, ಇದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಅಲ್ಲಿನ ಕೆಲವು ಮಹಿಳಾ ಮಾನವ ಹಕ್ಕುಗಳ ಕಾರ್ಯಕರ್ತರು ತಾಲಿಬಾನ್ ವಿರುದ್ಧವಾಗಿ ಪ್ರತೀಭಟನೆ ಮಾಡಿದ್ದರು. ಪ್ರತಭಟನೆ ಮಾಡುತ್ತಿರುವವರನ್ನು ಹಾಗೂ ಪ್ರತಿಭಟನೆಯ ಘಟನೆಯನ್ನು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಕೂಡ ತಾಲಿಬಾನ್ ಪಡೆ ಬಂಧಿಸಿ ಚಿತ್ರ ಹಿಂಸೆ ನೀಡಿತ್ತು ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿದ ಹಬೀಬುಲ್ಲಾ, ತಾಲಿಬಾನ್ ಉಗ್ರ ಸಂಘಟನೆ ನನ್ನನ್ನು ಕ್ರೂರವಾಗಿ ಥಳಿಸಿದರು. ಅಮಾನುಷವಾಗಿ ಹೊಡೆದರು. ನಾನು ಪ್ರಜ್ಞೆಯನ್ನು ಕಳೆದುಕೊಂಡೆ ಮತ್ತು ಸುಮಾರು ಒಂದು ಗಂಟೆಯ ನಂತರ ನಾನು ಎಚ್ಚರವಾದಾಗ, ಅವರು ನನ್ನನ್ನು ಬೇರೆ ಕೋಣೆಗೆ ಕರೆದೊಯ್ದರು, ಅಲ್ಲಿ ಪತ್ರಕರ್ತರು ಸೇರಿದಂತೆ ಹಲವರು ಬಂಧಿತ ಪ್ರತಿಭಟನಾಕಾರರು ಇದ್ದರು ಎಂದು ತಾಲಿಬಾನ್ ಬಂಧನದ ಅನುಭವವನ್ನು ತೆರೆದಿಟ್ಟಿದ್ದಾರೆ.

ಮಹಿಳಾ ಪ್ರತಿಭಟನಾಕಾರರು ದೇಶದಲ್ಲಿ ಅಫ್ಘಾನ್ ಮಹಿಳೆಯರಿಗೆ ಸಮಾನ ಹಕ್ಕುಗಳು ನೀಡುವಂತೆ ತಾಲಿಬಾನ್ ಗೆ ಕೋರಿದ್ದರು.

ಈ ಕುರಿತಾಗಿ ಪ್ರತಿಕ್ರಿಯಿಸಿದ ತಾಲಿಬಾನ್, ನೀವು ದೇಶದ ಇಸ್ಲಾಂ ನ ವಿರುದ್ಧವಾಗಿ ನಡೆಯುತ್ತಿದ್ದೀರಿ. ಇಸ್ಲಾಂ ನ ವಿರುದ್ಧದ ಧೋರಣೆಯನ್ನು ತಾಲಿಬಾನ್ ಸಹಿಸುವುದಿಲ್ಲ. ನಿಮ್ಮಂತಹ ಕಾಫೀರರನ್ನು ಕೊಲ್ಲುವ ಅಧಿಕಾರ ತಾಲಿಬಾನ್ ಗೆ ಇದೆ ಎಂದು ಖಡಕ್ ಎಚ್ಚರಿಸಿತ್ತು.

ತಾಲಿಬಾನ್ ಅಫ್ಗಾನಿಸ್ತಾನವನ್ನು ಸ್ವಾಧೀನ ಪಡಸಿಕೊಂಡ ನಂತರ ಅಫ್ಘಾನಿಸ್ತಾನದಲ್ಲಿನ ಅನಾಗರಿಕತೆಯ ಇತ್ತೀಚಿನ ದೃಶ್ಯಗಳು ಯುದ್ಧ-ಪೀಡಿತ ದೇಶದಲ್ಲಿ ಮಾನವ ಹಕ್ಕುಗಳ ವಿನಾಶಕಾರಿ ಸ್ಥಿತಿಯನ್ನು ಬಹಿರಂಗಪಡಿಸಿದೆ.

ಇನ್ನು,  ಈ ಕುರಿತಾಗಿ ಡಾ. ಸೈಯದ್ ಅಖ್ತರ್ ಅಲಿ ಶಾ, ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ ನಲ್ಲಿ ಬರೆಯುತ್ತಾ, ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದುರಂತ ಘಟನೆಗಳು ಆಘಾತಕ್ಕೊಳಗಾಗಿಸಿದೆ. ಪ್ರಸ್ತುತ, ಅಫ್ಘಾನಿಸ್ತಾನದಲ್ಲಿ ಮಾನವ ಮೂಲಭೂತ ಹಕ್ಕುಗಳು ಇಲ್ಲದಂತಾಗಿದೆ. ಬಂದೂಕುದಾರಿಗಳ ಬಿಗಿ ಹಿಡಿತದಲ್ಲಿ ಅಫ್ಗಾನಿಸ್ತಾನದ ಜನರು ಉಸಿರುಗಟ್ಟುವ ಸ್ಥಿತಿಯಲ್ಲಿದ್ದಾರೆ ಎನ್ನುವುದಕ್ಕೆ ಅನುಮಾನವೇ ಇಲ್ಲ ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ : ಟೀಂ ಇಂಡಿಯಾದ ಏಕದಿನ, ಟಿ20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್ ಬೈ?

ಟಾಪ್ ನ್ಯೂಸ್

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.