21 ವರ್ಷಕ್ಕೆ ಇಹಲೋಕ ತ್ಯಜಿಸಿದ ಖ್ಯಾತ ಟಿಕ್‌ಟಾಕ್ ಸ್ಟಾರ್
Team Udayavani, Dec 3, 2022, 3:00 PM IST
ನವದೆಹಲಿ: ತನ್ನ ಟಿಕ್ ಟಾಕ್ ವಿಡಿಯೋಗಳಿಂದಲೇ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದ 21 ವರ್ಷದ ಯುವತಿ ಇಹಲೋಹ ತ್ಯಜಿಸಿದ್ದಾರೆ.
ಕೆನಾಡ ಮೂಲದ ಮೇಘಾ ಠಾಕೂರ್ ಟಿಕ್ ಟಾಕ್ ವಿಡಿಯೋಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಬಾಡಿ ಪಾಸಿಟಿವಿಟಿ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು. ಇದರೊಂದಿಗೆ ಆಗಾಗ ನೃತ್ಯದ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿದ್ದರು. ಟಿಕ್ ಟಾಕ್ ನಲ್ಲಿ ಇವರಿಗೆ 9.30 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದರು.
ಮೇಘಾ ಠಾಕೂರ್ ಅವರ ನಿಧನದ ಮಾಹಿತಿಯನ್ನು ಆಕೆಯ ಪೋಷಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹೇಳಿದ್ದಾರೆ.
ನಾವು ತುಂಬಾ ದುಃಖದಿಂದ ಘೋಷಿಸುತ್ತಿದ್ದೇವೆ.ನಮ್ಮ ಜೀವ, ನಮ್ಮ ಕೇರಿಂಗ್, ನಮ್ಮ ಸುಂದರ ಮಗಳು ಮೇಘಾ ಠಾಕೂರು ಹಠಾತ್ ಹಾಗೂ ಅನಿರೀಕ್ಷಿತವಾಗಿ ನ.24 ರ ಮುಂಜಾನೆ ನಿಧನರಾಗಿದ್ದಾಳೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಕೊಟ್ಟಿದ್ದಾರೆ.
ನ.24 ರಂದು ಮೇಘಾ ನಿಧನರಾಗಿದ್ದು, ಪೋಷಕರು ತಡವಾಗಿ ಬಹಿರಂಗ ಮಾಡಿದ್ದಾರೆ.
ಮೇಘಾ ಒಬ್ಬಳು ಆತ್ಮವಿಶ್ವಾಸಿ ಹಾಗೂ ಯುವ ಸ್ವಾವಲಂಬಿ ಮಹಿಳೆ. ಅವಳನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅವಳು ಅಭಿಮಾನಗಳನ್ನು ಇಷ್ಟಪಡುತ್ತಿದ್ದಳು. ಮೇಘಾಗೆ ನಿಮ್ಮ ಆಶೀರ್ವಾದವನ್ನು ಕೋರುತ್ತೇವೆ. ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವಳ ಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತವೆ” ಎಂದು ಆಕೆಯ ಪೋಷಕರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
View this post on Instagram