ಟ್ವಿಟರ್‌ನಿಂದ ಮತ್ತೆ 4,400 ಮಂದಿ ವಜಾ; ಸೂಚನೆ ಇಲ್ಲದೆ ನೌಕರರಿಗೆ ಪಿಂಕ್‌ ಸ್ಲಿಪ್‌

ಉದ್ಯೋಗಿಗಳ ಉಚಿತ ಊಟ ಸೌಲಭ್ಯ ಕಡಿತ; ಹೊಸ ನೇಮಕಾತಿ ಸ್ಥಗಿತಗೊಳಿಸಿದ ಡಿಸ್ನಿ ಪ್ಲಸ್‌

Team Udayavani, Nov 15, 2022, 7:15 AM IST

ಟ್ವಿಟರ್‌ನಿಂದ ಮತ್ತೆ 4,400 ಮಂದಿ ವಜಾ; ಸೂಚನೆ ಇಲ್ಲದೆ ನೌಕರರಿಗೆ ಪಿಂಕ್‌ ಸ್ಲಿಪ್‌

ವಾಷಿಂಗ್ಟನ್‌: ಇತ್ತೀಚೆಗೆ ಟ್ವಿಟರ್‌ ಕಂಪೆನಿಯು ತನ್ನ ಶೇ.50 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಕೆಲವು ದಿನಗಳಲ್ಲೇ ಕಂಪೆನಿ ಮಾಲಕ ಎಲಾನ್‌ ಮಸ್ಕ್ ಮಂಗಳವಾರ ಹೊಸದಾಗಿ 4,400 ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.

“ಗುತ್ತಿಗೆ ನೌಕರರಿಗೆ ಸೌಜನ್ಯಕ್ಕೂ ಕೂಡ ಕೆಲಸದಿಂದ ವಜಾಗೊಳಿಸಿರುವ ಮಾಹಿತಿ ಯನ್ನೂ ನೀಡಲಿಲ್ಲ. ಅವರು ಕಂಪೆನಿಯ ಸಿಸ್ಟಮ್‌ ಮತ್ತು ಇಮೇಲ್‌ ಆ್ಯಕ್ಸೆಸ್‌ ಕಳೆದು ಕೊಂಡಿದ್ದಾರೆ. ಮ್ಯಾನೇಜರ್‌ಗಳಿಗೆ ಕೂಡ ಅನಂತರ ಈ ಬಗ್ಗೆ ಮಾಹಿತಿ ತಿಳಿಯಿತು,’ ಎಂದು ಪ್ಲಾಟ್‌ಫಾರ್ಮರ್‌ ಮತ್ತು ಅಕ್ಸಿವ್ಸ್‌ ಸಂಸ್ಥೆಯ ಕೇಸಿ ನ್ಯೂಟನ್‌ ಟ್ವೀಟ್‌ ಮಾಡಿದ್ದಾರೆ.

ಉಚಿತ ಊಟ ಇಲ್ಲ: ಈ ಹಿಂದೆ ಟ್ವಿಟರ್‌ ಕಂಪೆನಿಯು ಉದ್ಯೋಗಿಗಳಿಗೆ ಕಚೇರಿ ಯಲ್ಲಿ ಉಚಿತ ಊಟವನ್ನು ಕಲ್ಪಿಸಿತ್ತು. “ದಿನಕ್ಕೆ ಒಬ್ಬ ಉದ್ಯೋಗಿಗೆ 400 ಡಾಲರ್‌(32,000 ರೂ.) ವೆಚ್ಚ ಮಾಡಲಾಗುತ್ತಿತ್ತು. ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಊಟಕ್ಕೆ ದರ ವಿಧಿಸಲಾಗುವುದು,’ ಎಂದು ಎಲಾನ್‌ ಮಸ್ಕ್ ತಿಳಿಸಿದ್ದಾರೆ. ಆದರೆ ಇದಕ್ಕೆ ಟ್ವಿಟರ್‌ ಮಾಜಿ ಉದ್ಯೋಗಿ ಟ್ರಾಕು ಹಾಕಿನ್ಸ್‌ ಪ್ರತಿಕ್ರಿಯಿಸಿದ್ದು, “ಮಸ್ಕ್ ಸುಳ್ಳು ಹೇಳುತ್ತಿದ್ದಾರೆ. ಊಟಕ್ಕೆ ಕಂಪೆನಿ ಇಷ್ಟೊಂದು ವೆಚ್ಚ ಮಾಡುತ್ತಿರಲಿಲ್ಲ. ಕಂಪೆನಿಯು ಉದ್ಯೋಗಿಗಳ ಊಟಕ್ಕೆಂದು ವರ್ಷಕ್ಕೆ 13 ಮಿಲಿಯನ್‌ ಡಾಲರ್‌ ವೆಚ್ಚ ಮಾಡುತ್ತಿತ್ತು,’ ಎಂದು ತಿಳಿಸಿದ್ದಾರೆ.

ವೆಚ್ಚ ಕಡಿತಕ್ಕೆ ಮುಂದಾದ ಡಿಸ್ನಿ ಪ್ಲಸ್‌: ಟ್ವಿಟರ್‌, ಮೆಟಾ ಅನಂತರ ಇದೀಗ ಡಿಸ್ನಿ ಪ್ಲಸ್‌ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಕೆಲವು ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ಕಂಪೆನಿಯು ಹೊಸ ನೇಮಕಾತಿಯನ್ನು ಸ್ಥಗಿತಗೊಳಿಸುತ್ತಿದೆ. ಟಾರ್ಗೆಟ್‌ ಮುಟ್ಟುವ ನಿಟ್ಟಿನಲ್ಲಿ ಇರುವಷ್ಟು ಉದ್ಯೋಗಿಗಳನ್ನೇ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಕಂಪೆನಿ ಸಿಇಒ ಬಾಬ್‌ ಚೆಪಕ್‌ ಮ್ಯಾನೇಜರ್‌ಗಳಿಗೆ ಪತ್ರ ಬರೆದಿದ್ದಾರೆ.

ಸಂಕಷ್ಟ: ಸಿಂಗಾಪುರದಲ್ಲಿ ಮೆಟಾ ಸೇರಿದಂತೆ ಅನೇಕ ಟೆಕ್‌ ಕಂಪೆನಿಗಳು ತನ್ನ ಉದ್ಯೋಗಿ ಗಳನ್ನು ಕೆಲಸದಿಂದ ವಜಾಗೊಳಿಸಿದೆ. ಇಲ್ಲಿ ಭಾರತೀಯ ಟೆಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿದ್ದಾರೆ. ವಜಾ ಕ್ರಮದಿಂದ ಭಾರತೀಯ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಇದೇ ಪರಿಸ್ಥಿತಿ ಎಚ್‌1ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿದ ಭಾರತೀಯ ಟೆಕಿಗಳಿಗೂ ಉಂಟಾಗಿದೆ. ಮೆಟಾದಿಂದ ವಜಾಗೊಂಡಿದ್ದ 11 ಸಾವಿರ ಮಂದಿಯ ಪೈಕಿ ಭಾರತೀಯರೂ ಇದ್ದಾರೆ. ಅವರಿಗೆ ಉದ್ಯೋಗ ಹುಡುಕಲು ಅಥವಾ ಸ್ವದೇಶಕ್ಕೆ ವಾಪಸಾಗಲು 60 ದಿನಗಳ ಅವಕಾಶ ಇದೆ.

 

 

ಟಾಪ್ ನ್ಯೂಸ್

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

politi

ಡೈಲಿಡೋಸ್:ಫ್ಲೆಕ್ಸ್‌ ಸಾಹೇಬ್ರ ಫಿಕ್ಸ್ಡ್‌ ರಾಜಕೀಯ-ಇವ್ರಿಗೆ ಗೆಲ್ಲೋಕ್ಕಿಂತ ನಿಲ್ಲೋದೇ ಮುಖ್ಯ

rcbಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

ಪಾನ್ ಮಸಾಲಾ, ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್‌ಗೆ ಗರಿಷ್ಠ ಮಿತಿ

vote

ಹೀಗೂ ಉಂಟು: ಗೆಲುವಿನ ಅಂತರ ಬರೀ 24 ಓಟು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ಥಿಕ ಸಂಕಷ್ಟದಲ್ಲಿ ಡಾಯಿಷ್‌ ಬ್ಯಾಂಕ್‌!

ಆರ್ಥಿಕ ಸಂಕಷ್ಟದಲ್ಲಿ ಡಾಯಿಷ್‌ ಬ್ಯಾಂಕ್‌!

ಬೆಲಾರುಸ್‌ನಲ್ಲಿ ವ್ಯೂಹಾತ್ಮಕ ಅಣ್ವಸ್ತ್ರ ನಿಯೋಜನೆ

ಬೆಲಾರುಸ್‌ನಲ್ಲಿ ವ್ಯೂಹಾತ್ಮಕ ಅಣ್ವಸ್ತ್ರ ನಿಯೋಜನೆ

ಆರ್ಥಿಕ ಬಿಕ್ಕಟ್ಟು: ಪಾಕಿಸ್ತಾನ ಹಣದುಬ್ಬರ ಶೇ.47 ಹೆಚ್ಚಳ

ಆರ್ಥಿಕ ಬಿಕ್ಕಟ್ಟು: ಪಾಕಿಸ್ತಾನ ಹಣದುಬ್ಬರ ಶೇ.47 ಹೆಚ್ಚಳ

tdy-6

ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 19 ಮಂದಿ ಮೃತ್ಯು: 4 ದಿನದಲ್ಲಿ 5ನೇ ಘಟನೆ

TDY-4

ವಾಟ್ಸಾಪ್‌ ನಲ್ಲಿ ಧರ್ಮನಿಂದನೆ ಬಗ್ಗೆ ಪೋಸ್ಟ್ ಹಾಕಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

Malayalam-actor-innocent

ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ

bjp cong election fight

ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ

politi

ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

politi

ಡೈಲಿಡೋಸ್:ಫ್ಲೆಕ್ಸ್‌ ಸಾಹೇಬ್ರ ಫಿಕ್ಸ್ಡ್‌ ರಾಜಕೀಯ-ಇವ್ರಿಗೆ ಗೆಲ್ಲೋಕ್ಕಿಂತ ನಿಲ್ಲೋದೇ ಮುಖ್ಯ

rcbಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

ಐಪಿಎಲ್‌ ಗೂ ಮೊದಲು ಆರ್‌ಸಿಬಿಗೆ ಗಾಯದ ಚಿಂತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.