

Team Udayavani, Apr 11, 2017, 4:38 PM IST
ವಾಷಿಂಗ್ಟನ್: ಏರ್ ಲೈನ್ಸ್ ಸಿಬ್ಬಂದಿಗಳಿಗೆ ಆಸನದ ವ್ಯವಸ್ಥೆ ಮಾಡಿಸುವ ನಿಟ್ಟಿನಲ್ಲಿ ಸೀಟಿನಲ್ಲಿ ಕುಳಿತಿದ್ದ ಏಷ್ಯಾ ಮೂಲದ ವೈದ್ಯರೊಬ್ಬರನ್ನು ದರದರನೆ ಕೆಳಗೆ ಎಳೆದು ಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಯುನೈಟೆಡ್ ಏರ್ ಲೈನ್ಸ್ ನಲ್ಲಿ ನಡೆದಿದ್ದು, ವಿಮಾನದೊಳಗಿನ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.
ಶಿಕಾಗೋದ ಓ ಹರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆಂಟುಕಿಗೆ ಹೊರಟಿದ್ದ ಅಮೆರಿಕದ ಪ್ರತಿಷ್ಠಿತ ಯುನೈಟೆಡ್ ವಿಮಾನ ಟೇಕ್ ಆಫ್ ಆಗುವ ಮುನ್ನ, ವಿಮಾನದೊಳಕ್ಕೆ ಆಗಮಿಸಿದ್ದ ವಿಮಾನಯಾನ ಅಧಿಕಾರಿ ಸೀಟಿನಲ್ಲಿ ಕುಳಿತಿದ್ದ ವೈದ್ಯರಿಗೆ ಮೇಲೆಳುವಂತೆ ಸೂಚಿಸಿದ್ದರು. ಆದರೆ ಅದಕ್ಕೆ ಅವರು ನಿರಾಕರಿಸಿದಾಗ, ಸೀಟಿನಿಂದ ಕೆಳಕ್ಕೆ ಎಳೆದು ಹಾಕಿ ಎಳೆದಾಡುತ್ತಿರುವ ಘಟನೆಯನ್ನು ಸಹಪ್ರಯಾಣಿಕರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತೀವ್ರ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಆ ವ್ಯಕ್ತಿಯಿಂದ ಯಾವುದೇ ತೊಂದರೆ ಇಲ್ಲವಾಗಿತ್ತು, ಯಾವುದೇ ರೀತಿಯ ಅನುಚಿತ ವರ್ತನೆ ತೋರಿಲ್ಲ. ಕೇವಲ ತಮ್ಮ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳಿಗೆ ಆಸನದ ವ್ಯವಸ್ಥೆ ಮಾಡಿಸುವ ನಿಟ್ಟಿನಲ್ಲಿ ಬಲವಂತದಿಂದ ವರ್ತಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾನು ಅಗತ್ಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ, ಹಾಗಾಗಿ ನಾನು ಸೀಟು ಬಿಟ್ಟು ಕೊಡಲ್ಲ ಎಂದು ಆ ವ್ಯಕ್ತಿ ಹೇಳಿದ್ದರು. ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಸೋಮವಾರ ಕರ್ತವ್ಯಕ್ಕೆ ಹಾಜರಾಗಬೇಕಿತ್ತು ಎಂದು ತಮ್ಮಲ್ಲಿ ಹೇಳಿರುವುದಾಗಿ ಸಹ ಪ್ರಯಾಣಿಕರೊಬ್ಬರು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ಘಟನೆ ಬಗ್ಗೆ ಯುನೈಟೆಡ್ ವಿಮಾನಯಾನ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಆಸ್ಕರ್ ಮುನೋಝ್ ಕ್ಷಮೆಯಾಚಿಸಿದ್ದು, ಘಟನೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಇಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಮಾಧ್ಯಮದ ವರದಿ ಹೇಳಿದೆ.
Ad
America: ಕಾರು-ಮಿನಿ ಟ್ರಕ್ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ
ಅಧ್ಯಕ್ಷ ಟ್ರಂಪ್ vs ಉದ್ಯಮಿ ಎಲಾನ್ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್!
Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…
ಬ್ರಿಕ್ಸ್ ರಾಷ್ಟ್ರಗಳಿಗೆ 10% ಹೆಚ್ಚುವರಿ ಸುಂಕ: ಅಮೆರಿಕ ಅಧ್ಯಕ್ಷ ಬೆದರಿಕೆ
Dubai: 2024ರಲ್ಲಿ ಸೌದಿ ಅರೇಬಿಯಾದಲ್ಲಿ 345 ಮಂದಿಗೆ ಗಲ್ಲು ಶಿಕ್ಷೆ: ದಾಖಲೆ
America: ಕಾರು-ಮಿನಿ ಟ್ರಕ್ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ
Arrested: ಕರೆ ಮಾಡಲು ಕೊಟ್ಟ ಮೊಬೈಲ್ ವಾಪಸ್ ಕೇಳಿದ್ದಕ್ಕೆ ಹಲ್ಲೆ: ಬಂಧನ
ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ
Bengaluru: ವರದಕ್ಷಿಣೆ: ಡಿವೈಎಸ್ಪಿ ವಿರುದ್ಧ ಕೇಸ್
High Court: ಗಾರ್ಡನ್ ಅಲ್ಲ, ಫ್ಲೆಕ್ಸ್ ಸಿಟಿ: ಹೈಕೋರ್ಟ್ ಚಾಟಿ
You seem to have an Ad Blocker on.
To continue reading, please turn it off or whitelist Udayavani.