

Team Udayavani, Oct 30, 2018, 6:47 PM IST
ವಾಷಿಂಗ್ಟನ್:ಅಮೆರಿಕದ ನೆಲದಲ್ಲಿ ಜನಿಸಿದ ಮಕ್ಕಳಿಗೆ ಹಾಗೂ ಅಕ್ರಮ ವಲಸಿಗ ನಿವಾಸಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್, ಅಮೆರಿಕದಲ್ಲಿ ಜನಿಸಿದವರಿಗೆ ಮಾತ್ರ ದೇಶದ ಪ್ರಜೆ ಎಂಬ ಹಕ್ಕನ್ನು ನೀಡುವ ಕಾನೂನು ಜಾರಿಗೆ ತರುವ ಚಿಂತನೆಯಲ್ಲಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಅಮೆರಿಕದ ಪ್ರಸ್ತುತ ಕಾಯ್ದೆ ಪ್ರಕಾರ, ಬೇರೆ ದೇಶದ ಮಕ್ಕಳು, ಅಕ್ರಮ ವಲಸಿಗರು ಯಾರೇ ಆಗಿರಲಿ ಅವರು ಸ್ವಯಂ ಆಗಿ ಅಮೆರಿಕದ ಪ್ರಜೆಯಾಗುವ ಹಕ್ಕನ್ನು ಪಡೆಯುತ್ತಾರೆ. ಆದರೆ ಟ್ರಂಫ್ ಇದೀಗ ಸ್ವಯಂ ಘೋಷಿತ ಅಮೆರಿಕ ಪ್ರಜೆ ಎಂದುಕೊಳ್ಳುವವರಿಗೆ ಮತ್ತು ಅಕ್ರಮ ವಲಸಿಗರಿಗೆ ಕಡಿವಾಣ ಹಾಕಲು ಮುಂದಾಗಿರುವುದಾಗಿ ವರದಿ ಹೇಳಿದೆ.
ಯಾವುದೇ ದೇಶದ ಮಗು ಇರಲಿ ಅದು ಇಲ್ಲಿ ಬೆಳೆಯುತ್ತಾ ದೇಶದ ನಾಗರಿಕ ಹಕ್ಕು ಮತ್ತು ಎಲ್ಲಾ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಇರುವ ಜಗತ್ತಿನ ಒಂದೇ ಒಂದು ದೇಶವೆಂದರೆ ಅದು ಅಮೆರಿಕ ಮಾತ್ರ ಎಂದು ಟ್ರಂಫ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದು ನಿಜಕ್ಕೂ ತುಂಬಾ ಹಾಸ್ಯಾಸ್ಪದ ವಿಚಾರ. ಇದಕ್ಕೆ ಅಂತ್ಯ ಹಾಡಲೇಬೇಕಿದೆ ಎಂದು ಹೇಳಿದ್ದಾರೆ. ಪ್ರತಿವರ್ಷ ವಿಸಿಟಿಂಗ್ ವೀಸಾದಲ್ಲಿ ಬಂದ ಸಾವಿರಾರು ಮಕ್ಕಳ ಪೋಷಕರು ಅಮೆರಿಕದ ಪ್ರಜೆಗಳಾಗುತ್ತಿದ್ದಾರೆ ಎಂದು ತಿಳಿಸಿದರು.
Ad
NASA: ಪ್ರತಿಷ್ಠಿತ ನಾಸಾದ 2000ಕ್ಕೂ ಅಧಿಕ ಉದ್ಯೋಗಿಗಳ ವಜಾ-ಟ್ರಂಪ್ ನಿರ್ಧಾರಕ್ಕೆ ಆಕ್ರೋಶ
fastest Internet: ಜಪಾನ್‌ನಲ್ಲೀಗ ಭಾರತಕ್ಕಿಂತ 16 ಮಿಲಿಯನ್ ಹೆಚ್ಚು ವೇಗದ ಇಂಟರ್ನೆಟ್
Dhaka; ಬಾಂಗ್ಲಾದೇಶ ಗಲಭೆ: ಹಸೀನಾ ವಿರುದ್ಧ ದೋಷಾರೋಪಣೆ
Elon Musk; ಎಐ ಚಾಟ್‌ಬೋಟ್‌ನ ಅತ್ಯಾಧುನಿಕ ಆವೃತ್ತಿ ಗ್ರಾಕ್ 4 ಅನಾವರಣ
Canada; ಹೊಸದಾಗಿ ತೆರೆದ ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ!
You seem to have an Ad Blocker on.
To continue reading, please turn it off or whitelist Udayavani.