
ಚೀನಾದ ಗೂಢಚಾರಿಕೆ ಬಲೂನ್ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ
Team Udayavani, Feb 5, 2023, 8:56 AM IST

ವಾಷಿಂಗ್ಟನ್: ಇತ್ತೀಚೆಗಷ್ಟೇ (ಜ.28 ರಂದು) ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶ ಮೊಂಟಾನ, ಲ್ಯಾಟಿನ್ ಅಮೆರಿಕದಲ್ಲಿ ಹಾರಾಡಿದ ಚೀನಾದ ಗುಪ್ತಚರ ಬಲೂನ್‌ನನ್ನು ಹೊಡದುರುಳಿಸಿದೆ ಎಂದು ಯುಎಸ್‌ನ ರಕ್ಷಣಾ ಸಂಸ್ಥೆ ಪೆಂಟಗನ್ ಹೇಳಿದೆ.
ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾದ ಸ್ಪೈ ಬಲೂನ್ ಬಗ್ಗೆ ಗಂಭೀರವಾಗಿ ಮಿಲಿಟರಿ ಅಧಿಕಾರಿಗಳ ಜೊತೆ ಚರ್ಚಿಸಿದ ಜೋ ಬೈಡೆನ್, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅಧ್ಯಕ್ಷ ಜೋ ಬಿಡೆನ್ ಅವರ ಕೋರಿಕೆಯ ಮೇರೆಗೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಬಲೂನ್ ಹೊಡದುರುಳಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಹೊಡೆದುರುಳಿಸುವುದರಿಂದ ಕೆಳಗಿರುವ ಹಲವಾರು ಜನರಿಗೆ ಅಪಾಯವಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದರು.
ಅದರಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಅಮೆರಿಕಾದ ಫೈಟರ್ ಜೆಟ್ ಚೀನಾದ ಗುಪ್ತಚರ ಬಲೂನ್‌ನನ್ನು ಹೊಡದುರುಳಿಸಿದೆ. ಕೆರೊಲಿನಾ ಕರಾವಳಿಯಲ್ಲಿ ಪತ್ತೆಯಾದ ಸ್ಫೈ ಬಲೂನನ್ನು ಅಮೆರಿಕಾ ಹೊಡದುರುಳಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯವು ಈ ಬಲೂನ್ ಚೀನಾಕ್ಕೆ ಸೇರಿದ್ದು ಎಂದು ಶುಕ್ರವಾರ ದೃಢಪಡಿಸಿತ್ತು. ಇದು ಹವಾಮಾನ ಸಂಶೋಧನೆ ನಡೆಸುತ್ತಿರುವ ನಾಗರಿಕ ವಾಯುನೌಕೆಯಾಗಿದ್ದು, ಆಕಸ್ಮಿಕವಾಗಿ ಹಾರಿ ಹೋಗಿದೆ ಎಂದು ಹೇಳಿತ್ತು.
ಟಾಪ್ ನ್ಯೂಸ್
