ಶವದ ಪೆಟ್ಟಿಗೆಯಲ್ಲಿ ವರನನ್ನು ಮಂಟಪಕ್ಕೆ ಹೊತ್ತು ತಂದ ಸ್ನೇಹಿತರು! ವಿಡಿಯೋ ವೈರಲ್
Team Udayavani, Nov 17, 2022, 4:35 PM IST
ವಾಷಿಂಗ್ಟನ್: ಇಂಟರ್ ನೆಟ್ ನಲ್ಲಿ ದಿನಕ್ಕೆ ನೂರಾರು ವಿಡಿಯೋಗಳು ಹರಿದಾಡುತ್ತವೆ. ಕೆಲವೊಂದು ವಿಡಿಯೋಗಳು ವೈರಲ್ ಆಗುತ್ತವೆ. ಮದುವೆಯ ದಿನ ವರನೊಬ್ಬ ಮದುವೆ ಮಂಟಪಕ್ಕೆ ಬಂದಿರುವ ರೀತಿ ನೋಡಿ ಇಲ್ಲಿ ಎಲ್ಲರಿಗೆ ಅಚ್ಚರಿಯಾಗಿದೆ.
ಮದುವೆ ಅಂದರೆ ಸಂಭ್ರಮ ಹಾಗೂ ಸಂತಸ. ಕೆಲ ಹುಡುಗರಿಗೆ ತನ್ನ ಗೆಳೆಯರು ಮದುವೆ ಇದ್ದರೆ ಅಲ್ಲೊಂದಿಷ್ಟು ಮೋಜು – ಮಸ್ತಿಯನ್ನು ಮಾಡುತ್ತಾರೆ. ಇಂಥದ್ದೇ ಒಂದು ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಲ್ಲಿ ಮದುವೆಗೆ ಕ್ಷಣಗಣನೆ ಆರಂಭವಾಗಿತ್ತು… ಮದುವೆ ಹೆಣ್ಣು ಶೃಂಗಾರಗೊಂಡು ಸಿದ್ದವಾಗಿದ್ದಳು. ಅತಿಥಿಗಳೂ ನೆರೆದಿದ್ದರು. ಎಲ್ಲರೂ ಮದುವೆ ವರನಿಗಾಗಿ ಕಾಯುತ್ತಿದ್ದರು.. ಈ ಸಂತಸದ ಸಮಯದಲ್ಲಿ ಅಲ್ಲೊಂದು ಕಾರು ಬರುತ್ತದೆ. ಆ ಕಾರಿನಿಂದ ಇಳಿದ ಕೆಲವರು ಕಾರಿನ ಹಿಂಬದಿಯಿಂದ ಶವದ ಪೆಟ್ಟಿಗೆಯನ್ನು ಹೊರಕ್ಕೆ ತರುತ್ತಾರೆ. ನಾಲ್ಕೈದು ಮಂದಿ ಶವದ ಪೆಟ್ಟಿಗೆ ಹಿಡಿದು ಮಂಟಪದ ಬಳಿಗೆ ಬರುತ್ತಾರೆ. ಸಂಭ್ರಮದ ಕ್ಷಣದಲ್ಲಿದ್ದವರಿಗೆ ಇದು ಅಚ್ಚರಿಯಾಗುತ್ತದೆ. ಎಲ್ಲರೂ ಒಮ್ಮೆ ಶಾಕ್ ನಿಂದ ನೋಡುತ್ತಾರೆ.
ಇದಾದ ಬಳಿಕ ಆ ಶವದ ಪೆಟ್ಟಿಗೆ ಯಿಂದ ಒಬ್ಬ ವ್ಯಕ್ತಿ ಹೊರ ಬರುತ್ತಾನೆ. ಆತ ಬೇರೆ ಯಾರು ಅಲ್ಲ…ವರ! ಶವದ ಪೆಟ್ಟಿಗೆಯಲ್ಲಿ ವರನನ್ನು ಮದುವೆ ಮಂಟಪಕ್ಕೆ ತರುವ ಪ್ಲ್ಯಾನ್ ಮಾಡಿಕೊಂಡು, ಎಲ್ಲರಿಗೂ ಶಾಕ್ ಕೊಟ್ಟಿದ್ದು ವರನ ಸ್ನೇಹಿತರು. ಈ ಇಡೀ ಘಟನೆಯನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ಟಿಕ್ ಟಾಕ್ ನಲ್ಲಿ ಪೋಸ್ಟ್ ಮಾಡಿದ್ದು ಸದ್ಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…
ಮಂಗಳೂರಿನಲ್ಲಿ ಗಾಂಜಾ ಜಾಲ; ಪೆಡ್ಲರ್ ಸಹಿತ ನಾಲ್ವರ ಬಂಧನ
ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ
ಗುಬ್ಬಿ, ತುಮಕೂರು ನಗರ, ಗ್ರಾಮಾಂತರ ಕ್ಷೇತ್ರ ಕಗ್ಗಂಟು
ನಿರೀಕ್ಷಣಾ ಜಾಮೀನು: ಮಾಡಾಳ್ ವಿರೂಪಾಕ್ಷಪ್ಪಗೆ ಸುಪ್ರೀಂ ನೋಟಿಸ್ ಜಾರಿ