ಸಮುದ್ರಕ್ಕೆ ಬಿತ್ತು ಯುವತಿಯ ಮೊಬೈಲ್ ; ಆಮೆಲೇನಾಯ್ತು ನೀವೇ ನೋಡಿ!

ವೈರಲ್ ಆಗಿದೆ ನಾರ್ವೆಯ ಹಾರ್ಬರ್ ನಲ್ಲಿ ನಡೆದ ಈ ವಿಸ್ಮಯ!

Team Udayavani, May 9, 2019, 12:24 PM IST

ನಾರ್ವೆ: ಬೋಟ್ ನಲ್ಲಿ ಸಾಗುತ್ತಿದ್ದ ಯುವತಿಯೊಬ್ಬಳ ಸ್ಮಾರ್ಟ್ ಫೋನ್ ಒಂದು ಅಚಾನಕ್ ಆಗಿ ಸಮುದ್ರದ ನೀರಿನೊಳಗೆ ಬೀಳುತ್ತದೆ. ಅಯ್ಯೋ ತನ್ನ ಮೊಬೈಲ್ ನೀರಿಗೆ ಬಿತ್ತಲ್ಲ ಎಂದು ಆ ಯುವತಿ ಚಿಂತಿಸುತ್ತಿರುವಾಗಲೇ ನೀರಿನಲ್ಲಿದ್ದ ತಿಮಿಂಗಿಲವೊಂದು ಆ ಮೊಬೈಲ್ ಫೋನನ್ನು ತನ್ನ ಬಾಯಲ್ಲಿ ಇರಿಸಿಕೊಂಡು ಮೇಲಕ್ಕೆ ಬರುತ್ತದೆ.

ಈ ದೃಶ್ಯವನ್ನು ನೋಡಿದ ಆ ಬೋಟ್ ನಲ್ಲಿದ್ದ ಯುವತಿ ಹಾಗೂ ಇತರರು ಒಂದು ಕ್ಷಣ ಆಶ್ಚರ್ಯಕ್ಕೊಳಗಾಗುತ್ತಾರೆ. ಬಳಿಕ ತಿಮಿಂಗಿಲದ ಬಾಯಿಯಿಂದ ಮೊಬೈಲ್ ಫೋನನ್ನು ತೆಗೆದುಕೊಳ್ಳುತ್ತಾರೆ.

ಬೋಟ್ ನಲ್ಲಿದ್ದವರು ಮೊಬೈಲ್ ಅನ್ನು ತೆಗೆದುಕೊಳ್ಳುವವರೆಗೂ ಆ ತಿಮಿಂಗಲವು ಹಾಗೆಯೇ ನಿಂತಿರುತ್ತದೆ. ನಾರ್ವೆ ದೇಶದ ಹ್ಯಾಮರ್ ಫೆಸ್ಟ್ ಬಂದರು ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಸಾ ಓಫ್ಡಾಲ್ ಎನ್ನುವ ಯುವತಿಯೇ ಮೊಬೈಲ್ ಅನ್ನು ನೀರಿಗೆ ಬೀಳಿಸಿದಾಕೆ.

ಈ ವೈರಲ್ ವಿಡಿಯೋವನ್ನು ನೀವೂ ಒಮ್ಮೆ ನೋಡಿಬಿಡಿ…

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ