37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ಹೋದ ಮಹಿಳೆ… ಮುಂದೇನಾಯ್ತು?

ಮಹಿಳೆಯ ಹುಚ್ಚಾಟಕ್ಕೆ ಕಂಗಾಲಾದ ಪ್ರಯಾಣಿಕರು

Team Udayavani, Nov 30, 2022, 3:27 PM IST

37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲು ತೆರೆಯಲು ಹೋದ ಮಹಿಳೆ…

ಟೆಕ್ಸಾಸ್‌: ಬಸ್ಸಿನಲ್ಲಿ ಜಗಳವಾದರೆ ಬಸ್ಸನ್ನು ನಿಲ್ಲಿಸಬಹುದು, ರೈಲಿನಲ್ಲಿ ಪ್ರಯಾಣಿಕರಿಂದ ಕಿರಿಕಿರಿಯಾದರೆ ರೈಲನ್ನೂ ನಿಲ್ಲಿಸಬಹುದು ಆದರೆ ಪ್ರಯಾಣಿಕನೊಬ್ಬ ಸಾವಿರಾರು ಅಡಿ ಎತ್ತರದಲ್ಲಿ ಹಾರಾಡುತ್ತಿರುವ ವಿಮಾನದ ಬಾಗಿಲು ತೆರೆಯಲು ಹೋದರೆ…

ದಿನವೊಂದಕ್ಕೆ ದೇಶದಲ್ಲಿ ನಾನಾ ರೀತಿಯ ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ, ಕೆಲವೊಂದು ಹಾಸ್ಯಾಸ್ಪದವಾಗಿರುತ್ತದೆ, ಇನ್ನು ಕೆಲವು ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಇರುತ್ತದೆ. ಇಲ್ಲಿ ಕೂಡಾ ಅಂತದ್ದೇ ಒಂದು ಸನ್ನಿವೇಶ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳು ಸುಮಾರು 37,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಬಾಗಿಲನ್ನೇ ತೆರೆಯಲು ಹೋಗಿದ್ದಾರೆ, ಈ ವೇಳೆ ಅಲ್ಲಿದ್ದ ಇತರ ಪ್ರಯಾಣಿಕರ ಪರಿಸ್ಥಿತಿ ಹೇಗಾಗಬೇಡ.

ಅಂದಹಾಗೆ ಈ ಘಟನೆ ನಡೆದಿರುವುದು ಅಮೆರಿಕಾದ ಟೆಕ್ಸಾಸ್‌ನಲ್ಲಿ, ಸೌತ್‌ವೆಸ್ಟ್ ಏರ್‌ಲೈನ್ಸ್ 192 ರ ಮೂಲಕ, ಟೆಕ್ಸಾಸ್‌ನ ಹೂಸ್ಟನ್‌ನಿಂದ ಓಹಿಯೋದ ಕೊಲಂಬಸ್‌ಗೆ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು, ವಿಮಾನ ಸುಮಾರು 37,000 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು ಈ ವೇಳೆ ಇದ್ದಕ್ಕಿದ್ದ ಹಾಗೆ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಆಸನದಿಂದ ಎದ್ದು ಬಂದು ವಿಮಾನದ ಹಿಂಬದಿಯಲ್ಲಿರುವ ಬಾಗಿಲನ್ನು ತೆರೆಯಲು ಹೋಗಿದ್ದಾರೆ, ಕೂಡಲೇ ಎಚ್ಚೆತ್ತ ವಿಮಾನದ ಸಿಬ್ಬಂಧಿ ಮಹಿಳೆಯನ್ನು ತಡೆದಿದ್ದಾರೆ, ಆದರೂ ಆಕೆಯನ್ನು ದೂಡಿ ಬಾಗಿಲ ಬಳಿ ಹೋದ ಮಹಿಳೆ ಇನ್ನೇನು ಬಾಗಿಲು ಓಪನ್ ಮಾಡಬೇಕೆನ್ನುವಷ್ಟರಲ್ಲಿ ಅಲ್ಲೇ ಇದ್ದ ಪ್ರಾಣಿಕರೊಬ್ಬರು ಮಹಿಳೆಯನ್ನು ಹಿಡಿದಿದ್ದಾರೆ, ಕೋಪಗೊಂಡ ಮಹಿಳೆ ತನ್ನನ್ನು ಹಿಡಿದ ವ್ಯಕ್ತಿಯ ಕೈಯನ್ನೇ ಕಚ್ಚಿದ್ದಾಳೆ, ಈ ವೇಳೆ ಅಲ್ಲಿದ್ದ ಸಹ ಪ್ರಯಾಣಿಕರು ಈ ಮಹಿಳೆಯನ್ನು ಹಿಡಿದಿಟ್ಟಿದ್ದಾರೆ. ಬಳಿಕ ಸಿಬ್ಬಂದಿಯ ಸೂಚನೆಯ ಮೇರೆಗೆ ಹಿಲರಿ ಕ್ಲಿಂಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು.

ವಿಮಾನ ಭೂಸ್ಪರ್ಶವಾದ ಕೂಡಲೇ ವಿಮಾನದೊಳಗೆ ರಾದ್ದಂತ ಮಾಡಿದ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಜೊತೆಗೆ ಮಹಿಳೆಯ ಕಡಿತದಿಂದ ಗಾಯಗೊಂಡ ಪ್ರಯಾಣಿಕನಿಗೆ ಚಿಕಿತ್ಸೆಯನ್ನು ನೀಡಲಾಯಿತು.

ಪೊಲೀಸರ ವಶದಲ್ಲಿದ್ದ ಮಹಿಳೆಯನ್ನು ಅಗ್ಬೆಗ್ನಿನೌ ಎಂದು ಹೇಳಲಾಗಿದ್ದು, ವಿಚಾರಣೆ ವೇಳೆ ಆಕೆ ಜೀಸಸ್ ಹೇಳಿದಂತೆ ನಾನು ನಡೆದುಕೊಳ್ಳುತ್ತಿದ್ದೇನೆ, ಜೀಸಸ್ ನನ್ನನ್ನು ಓಹಿಯೋಗೆ ತೆರಳುವಂತೆ ಹೇಳಿದ್ದಾರೆ ಅಲ್ಲದೆ ವಿಮಾನದಲ್ಲಿ ಬಾಗಿಲನ್ನು ತೆರೆಯಲು ಹೇಳಿದ್ದಾರೆ, ಅದರಂತೆ ನಾನು ಬಾಗಿಲನ್ನು ತೆರೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದು ಮುಖ್ಯ ವಿಚಾರ ಏನೆಂದರೆ ಈ ಮಹಿಳೆ ತಾನು ಓಹಿಯೋಗೆ ವಿಮಾನದಲ್ಲಿ ತೆರಳುವ ವಿಚಾರ ಆಕೆಯ ಮನೆಯವರಿಗೂ ತಿಳಿದಿರಲಿಲ್ಲವಂತೆ.

ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ಸತ್ತ ಮೊಸಳೆಯ ಹೊಟ್ಟೆಯಲ್ಲಿತ್ತು ಬಾಲಕನ ದೇಹದ ಭಾಗಗಳು

ಟಾಪ್ ನ್ಯೂಸ್

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

baby 2

ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್‌!

1 SUNDAY

ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

ಶಾರುಖ್‌ ಹಾಡಿಗೆ ಚೀನ ಪೋರನ ಡಾನ್ಸ್‌ ! ವಿಡಿಯೋ ವೈರಲ್‌

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆ

“ವಂದೇ ಮೆಟ್ರೋ’ಗೆ ನಮೋ ಕರೆ! 100 ಕಿ.ಮೀ. ವ್ಯಾಪ್ತಿಯ 2 ನಗರಗಳ ನಡುವೆ ಸಂಚಾರಕ್ಕೆ ಯೋಜನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

ಈಗ ಲ್ಯಾಟಿನ್‌ ಅಮೆರಿಕದ ಮೇಲೆ ಚೀನ ಗುಪ್ತಚರ ಬಲೂನ್‌ ಹಾರಾಟ

ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ಥಾನ !

ವಿಕಿಪೀಡಿಯಾ ಮೇಲೆ ನಿರ್ಬಂಧ ವಿಧಿಸಿದ ಪಾಕಿಸ್ಥಾನ !

ಎಚ್‌1ಬಿ ವೀಸಾ: 2022ರಲ್ಲಿ ಅಮೆಜಾನ್‌, ಇನ್ಫಿ, ಟಿಸಿಎಸ್‌ಗಳಿಗೆ ಸಿಂಹಪಾಲು

ಎಚ್‌1ಬಿ ವೀಸಾ: 2022ರಲ್ಲಿ ಅಮೆಜಾನ್‌, ಇನ್ಫಿ, ಟಿಸಿಎಸ್‌ಗಳಿಗೆ ಸಿಂಹಪಾಲು

imran-khan

‘ಜೈಲ್ ಭರೋ’ ಚಳವಳಿಗೆ ಸಿದ್ಧರಾಗಿ ; ಬೆಂಬಲಿಗರಿಗೆ ಇಮ್ರಾನ್ ಖಾನ್ ಕರೆ

MUST WATCH

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

ಹೊಸ ಸೇರ್ಪಡೆ

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

ಕುಡಿದು ಬಂದು ಪತ್ನಿಗೆ ಹಲ್ಲೆ,ನಿಂದನೆ: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ FIR

TDY-1

ಚೀನಾದ ಗೂಢಚಾರಿಕೆ ಬಲೂನ್‌ ಹೊಡದುರುಳಿಸಿದ ಅಮೆರಿಕಾ: ಚೀನಾ ಆಕ್ರೋಶ

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು

baby 2

ಇನ್ನೂ ಜನಿಸದ ಕಂದಮ್ಮನಿಗಾಗಿ ಮಿಡಿದ ಸುಪ್ರೀಂಕೋರ್ಟ್‌!

1 SUNDAY

ರಾಶಿ ಫಲ: ಧೀರ್ಘ ಪ್ರಯಾಣಕ್ಕೆ ಅವಕಾಶ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.