ವಿಕಟಕವಿ ಭಟ್ಟರ “ಪಂಚತಂತ್ರ’: ಬ್ಯೂಟಿಫುಲ್ ಫೋಟೋ ಗ್ಯಾಲರಿ

18

ವಿಕಟಕವಿ ಯೋಗರಾಜ್ ಭಟ್ ನಿರ್ದೇಶನದ ಯುವ ಪೀಳಿಗೆ ಮತ್ತು ವಯಸ್ಸಾದವರ ನಡುವಿನ ಚಕಮಕಿಗಳ ಕಥಾ ಹಂದರವಿರುವ “ಪಂಚತಂತ್ರ’ ತೆರೆಗೆ ಬರಲು ಸಜ್ಜಾಗಿದ್ದು, ಕಾರ್‌ ರೇಸ್‌ ಚಿತ್ರದ ವಿಶೇಷತೆಗಳಲ್ಲೊಂದು. ಅಲ್ಲದೇ ಚಿತ್ರವು “ಪಂಚತಂತ್ರ’ದ ಆಮೆ ಮತ್ತು ಮೊಲದ ಓಟ ನೆನಪಿಸುತ್ತದೆ. ನಾಯಕಿಯಾಗಿ ಮಂಗಳೂರಿನ ಸೋನಲ್‌ ಮೊಂತೇರೊ, ವಿಹಾನ್‌ ನಾಯಕರಾಗಿ ಸಿನಿಮಾದಲ್ಲಿ ಅಭಿನಯಿಸಿದ್ದು, ಹರಿಪ್ರಸಾದ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿರುವ ಪ್ರೇಮಕಥೆಯು ಈಗಿನ ಶರವೇಗದ ಯುವ ಪೀಳಿಗೆಯ ಮನಸ್ಸಿನ ಆಸೆಗಳು ಮತ್ತು ಭಾವನೆಗಳನ್ನು ಹೇಳುತ್ತದೆ. ಹಾಗೂ ಪ್ರೀತಿ, ಸಂಬಂಧಗಳು ಮತ್ತು ಚುರುಕು ಮುಟ್ಟಿಸುವ ಹಾಸ್ಯ ಪ್ರಸಂಗಗಳ ಜತೆಗೆ ಈ ಚಿತ್ರ ಎರಡು ಗುಂಪುಗಳ ನಡುವಿನ ಭೂ ವಿವಾದವನ್ನು ಹೇಳುತ್ತದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಿರುವಂತಹ ಅತೀ ದೊಡ್ಡ ಕಾರ್‌ ರೇಸ್‌ ಈ ಚಿತ್ರದಲ್ಲಿರುವುದರಿಂದ ಕ್ರೀಡಾಚಿತ್ರ ಕೂಡಾ ಎನ್ನಬಹುದಾಗಿದೆ. ಇನ್ನು “ಪಂಚತಂತ್ರ’ ಚಿತ್ರವು ಯುವಪೀಳಿಗೆ ಮತ್ತು ವಯಸ್ಸಾದವರ ನಡುವಿನ ತಮಾಷೆ ಭರಿತ ಜಗಳಗಳೊಂದಿಗೆ ಮನರಂಜಿಸುತ್ತದೆ. ಚಿತ್ರದ ಹಾಡುಗಳು ಈಗಾಗಲೇ ಸಾಮಾಝಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೇಮಂತ್‌ ಪರಾಡ್ಕರ್‌ ನಿರ್ಮಾಣದ ಈ ಚಿತ್ರದಲ್ಲಿ ರಂಗಾಯಣ ರಘು, ಅಕ್ಷ ರ, ಬಾಲರಜವಾಡಿ, ದೀಪಕ್‌ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಬ್ಯೂಟಿಫುಲ್ ಫೋಟೋ ಗ್ಯಾಲರಿ ನಿಮಗಾಗಿ…

ಹೊಸ ಸೇರ್ಪಡೆ