ಮುಂಗಾರು ಸಂಸತ್ ಅಧಿವೇಶನದಲ್ಲಿ ಇಂದು “ಪೆಗಾಸಸ್” ಚರ್ಚೆ ..!

ಅಧಿವೇಶನವನ್ನು ಉದ್ದೇಶಿಸಿ ವಿಚಾರ ಮಂಡನೆ ಮಾಡಲಿರುವ ಅಶ್ವಿನಿ ವೈಷ್ಣವ್

Team Udayavani, Jul 22, 2021, 10:22 AM IST

Pegasus row: IT Minister Ashwini Vaishnaw to speak in Parliament today

ನವ ದೆಹಲಿ : ಪೆಗಾಸಸ್ ಪ್ರಾಜೆಕ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ  ಜಾಗತಿಕ ಮಟ್ಟದಲ್ಲಿ ವಿವಾದ ಹುಟ್ಟುಹಾಕಿರುವ ಇಸ್ರೇಲಿ ಮೂಲದ ಪೆಗಾಸಸ್‌ ಸ್ಪೈವೇರ್‌ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಇಸ್ರೇಲ್‌ ಅಂತರ್‌ ಸಚಿವಾಲಯಗಳ ಸಮಿತಿಯೊಂದನ್ನು ರಚಿಸಿದ ಬೆನ್ನಿಗೆ  ಮುಂಗಾರು ಅಧಿವೇಶನದಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್ ವಿಚಾರ ಮಂಡನೆ ಮಾಡಲಿದ್ದಾರೆ.

ಸೋಮವಾರ ನಡೆದ ಸಂಸತ್ ಅಧಿವೇಶನದ ಕಲಾಪದಲ್ಲಿ ವೈಷ್ಣವ್, ಪೆಗಾಸಸ್ ಆಧಾರ ರಹಿತ ಚರ್ಚೆ ಎಂದು ಹೇಳಿದ್ದರು. ಈಗ ಪೆಗಾಸಸ್ ಸ್ಪೈವೇರ್ ಕುರಿತಾಗಿ ತನಿಖೆಗೆ ಸಮಿತಿ ರಚನೆಯಾದ ಹಿನ್ನೆಲೆಯಲ್ಲಿ ವಿಸ್ತೃತ ವಿಚಾರ ಮಂಡನೆ ಮಾಡುವ ಸಾಧ್ಯತೆ ಇದೆ  ಎಂದು ಹೇಳಲಾಗಿದೆ.

ಇದನ್ನೂ ಓದಿ : ಕೋವಿಡ್ 19 ಮಹಾಮಾರಿಗೆ ಜಾಗತಿಕವಾಗಿ 15 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಷಕರಿಲ್ಲ!

ಮುಂಗಾರು ಅಧಿವೇಶನ ಆರಂಭವಾಗುವ ಮುನ್ನಾ ದಿನ ಈ ಪೆಗಾಸಸ್ ವಿಚಾರ ಬೆಳಕಿಗೆ ಬಂದಿದ್ದು, ರಾಜಕೀಯ ಪ್ರಮುಖ ನಾಯಕರ, ಪತ್ರಕರ್ತರ, ಹಾಗೂ ಪ್ರಭಾವಿ ವ್ಯಕ್ತಿಗಳ ಫೋನ್ ನಂಬರ್ ಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ.

ಇನ್ನು,  ಇಸ್ರೇಲಿ ಮೂಲದ ಪೆಗಾಸಸ್‌ ಸ್ಪೈವೇರ್‌ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಇಸ್ರೇಲ್‌ ಅಂತರ್‌ ಸಚಿವಾಲಯಗಳ ಸಮಿತಿಯೊಂದನ್ನು ರಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿದ್ದು, ಇಸ್ರೇಲ್  ಪ್ರಧಾನಿ ನಫ್ತಾಲಿ ಬೆನೆಟ್‌ ಅವರಿಗೆ ಉತ್ತರದಾಯಿಯಾಗಿರುವ ರಾಷ್ಟ್ರೀಯ ಭದ್ರತ ಮಂಡಳಿ ಈ ಸಮಿತಿಯ ನೇತೃತ್ವ ವಹಿಸಿದೆ ಎಂದು ವರದಿಯಾಗಿದೆ

ಅಲ್ಲಿನ ರಕ್ಷಣ ಸಚಿವಾಲಯಕ್ಕಿಂತ ಹೆಚ್ಚು ಪರಿಣತಿ ಹೊಂದಿರುವ ಸದಸ್ಯರು ಈ ಸಮಿತಿಯಲ್ಲಿದ್ದಾರೆ ಎನ್ನಲಾಗಿದ್ದು, ಪೆಗಾಸಸ್‌ ಸ್ಪೈವೇರ್ ಸೃಷ್ಟಿಸಿರುವ ಎನ್‌ ಎಸ್‌ ಒ ಸಂಸ್ಥೆ ರಕ್ಷಣ ಸಚಿವಾಲಯದ ಅಧೀನದಲ್ಲಿದೆ.

ಭಾರತ ಮಾತ್ರವಲ್ಲದೆ, ಮೆಕ್ಸಿಕೊ, ಫ್ರಾನ್ಸ್‌, ಇರಾಕ್‌, ಮೊರಾಕ್ಕೊಗಳಲ್ಲಿಯೂ ಪೆಗಾಸಸ್‌ ವಿವಾದದ ಕಿಡಿ ಹೊತ್ತಿಸಿದ್ದು, ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಬಹುದು ಎಂಬ ಹಿನ್ನೆಲೆ ಯಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ತಲೆಮಾರುಗಳಿಂದ ನಡೆಯುತ್ತಿರುವ PINE APPLE ಕೃಷಿಯ ಯಶಸ್ಸಿನ ರಹಸ್ಯ ತೆರೆದಿಟ್ಟ SOANS F FARM

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVS

BJP ಅಸಮಾಧಾನ; ಶೀಘ್ರದಲ್ಲೇ ಆಂತರಿಕ ಭಾವನೆ ಹಂಚಿಕೊಳ್ಳುತ್ತೇನೆ!: ಸದಾನಂದ ಗೌಡ

Shakti Remark:ಸವಾಲು ಸ್ವೀಕರಿಸಿದ್ದೇನೆ-ರಾಹುಲ್‌ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು

Shakti Remark:ಸವಾಲು ಸ್ವೀಕರಿಸಿದ್ದೇನೆ-ರಾಹುಲ್‌ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು

Poll: ಪಶ್ಚಿಮಬಂಗಾಳ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ವರ್ಗಾವಣೆ; ಚುನಾವಣಾ ಆಯೋಗ

Poll: ಪಶ್ಚಿಮಬಂಗಾಳ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ವರ್ಗಾವಣೆ; ಚುನಾವಣಾ ಆಯೋಗ

ಹೆಡ್ ಲೈನ್ ಗಾಗಿ ಅಲ್ಲ, ಡೆಡ್ ಲೈನ್ ಗೆ ಕೆಲಸ ಮಾಡುವವ ನಾನು: ಪ್ರಧಾನಿ ಮೋದಿ

Loksabha; ಹೆಡ್ ಲೈನ್ ಗಾಗಿ ಅಲ್ಲ, ಡೆಡ್ ಲೈನ್ ಗೆ ಕೆಲಸ ಮಾಡುವವ ನಾನು: ಪ್ರಧಾನಿ ಮೋದಿ

Electoral Bonds ಕುರಿತ ಸುಪ್ರೀಂ ತೀರ್ಪನ್ನು ಗೌರವಿಸ್ತೇನೆ…ಆದರೆ… ಶಾ ಹೇಳಿದ್ದೇನು?

Electoral Bonds ಕುರಿತ ಸುಪ್ರೀಂ ತೀರ್ಪನ್ನು ಗೌರವಿಸ್ತೇನೆ…ಆದರೆ… ಶಾ ಹೇಳಿದ್ದೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.