ಐಎಸ್‌ಐ ನೆರವು…ಮಾದಕ ಭಯೋತ್ಪಾದನೆ
ಹಣವನ್ನು ಮತಾಂತರ ಹಾಗೂ ಬೇರೆ ರೀತಿಯ ದೇಶ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ.
Team Udayavani
ದೇಶದ ಗಡಿ ರಾಜ್ಯಗಳಲ್ಲಿ ಬಡವರನ್ನೇ ಗುರುತಿಸಿ ಅವರಿಗೆ ಹಣದ ಆಮಿಷ ಒಡ್ಡಿ ಡ್ರಗ್ಸ್ ಮಾರಾಟ ಮಾಡುವುದು ಪಾಕಿಸ್ಥಾನ ಮಾಡಿಕೊಂಡು ಬಂದಿರುವ ಕಿತಾಪತಿ. ಅಂದರೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ, ಗುಜರಾತ್, ಅಸ್ಸಾಂ, ಮಣಿಪುರ ಮತ್ತು ಇತರೆ ರಾಜ್ಯಗಳ ಗಡಿಗಳಲ್ಲಿ ಈ ಕೆಲಸ ಮಾಡುತ್ತಿದೆ. ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಪಾಕಿಸ್ಥಾನ ವಾಪಸ್ ತೆಗೆದುಕೊಂಡು ಹೋಗುವುದಿಲ್ಲ. ಬದಲಾಗಿ ಇಲ್ಲಿಯೇ ದೇಶ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡುತ್ತಿದೆ. ಅಂದರೆ ಧರ್ಮಗಳ ನಡುವೆ ದ್ವೇಷ ಬಿತ್ತುವುದು, ಧರ್ಮದ ಹೆಸರಿನಲ್ಲಿ ಹಿಂಸಾಚಾರ ಹೆಚ್ಚು ಮಾಡುವುದು, ಆರ್ಥಿಕವಾಗಿ ಹಿಂದುಳಿದವರನ್ನೇ ಬಳಸಿಕೊಂಡು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸವನ್ನು ಪಾಕಿಸ್ಥಾನ ಮಾಡುತ್ತಿದೆ. ಈ ಕೆಲಸದಲ್ಲಿ ಪಾಕಿಸ್ಥಾನದ ಐಎಸ್‌ಐ ನೇರವಾಗಿಯೇ...