ರೆಪೋ ದರ ಏರಿಕೆ ಪರಿಣಾಮ ನಿಭಾಯಿಸುವುದು ಹೇಗೆ?
ಅರ್ಥಿಕ ಚಟುವಟಿಕೆಗಳು ಮತ್ತೆ ಪುನಃಶ್ಚೇತನಗೊಳ್ಳುತ್ತವೆ ಎನ್ನುವುದು ಇದರ ಹಿಂದಿರುವ ಊಹೆ.
Team Udayavani
-ಪ್ರಮೋದ ಶ್ರೀಕಾಂತ ದೈತೋಟ
ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದೊಡನೆ, ಬ್ಯಾಂಕಿಂಗ್ ವಲಯವು ಸಾಲ ಯೋಜನೆಗಳಲ್ಲಿ ಬಡ್ಡಿ ದರಗಳನ್ನು ಅದೇ ಪ್ರಮಾಣದಲ್ಲಿ ಹೆಚ್ಚಿಗೆ ಮಾಡುತ್ತವೆ. ದೇಶದ ಪ್ರಮುಖ ಬ್ಯಾಂಕ್‌ಗಳು ಈಗಾಗಲೇ ಇದರ ಪರಿಣಾಮವನ್ನು ಗ್ರಾಹಕರ ಮೇಲೆ ಹೇರುವ ಮೂಲಕ ತಮ್ಮ ನಿವ್ವಳ ಬಡ್ಡಿ ಲಾಭಾಂಶದ ಮೇಲಾಗುವ ಪ್ರತಿಕೂಲ ಪರಿಣಾಮವನ್ನು ಇ ಎಂ ಐ ಹೆಚ್ಚಿಸುವ ಮೂಲಕ ಯಥಾವತ್ ಗ್ರಾಹಕರಿಂದ ವಸೂಲಿ ಮಾಡತೊಡಗಿವೆ. ಇಷ್ಟೇ ಅಲ್ಲದೆ ರೆಪೋ ದರ ಆಧರಿತ ಗೃಹ ಸಾಲಗಳು ಅಥವಾ ಇತರ ಯಾವುದೇ ಸಾಲಗಳಾಗಿದ್ದಲ್ಲಿ ಅದರ ಪರಿಣಾಮವನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಬ್ಯಾಂಕ್‌ಗಳು ನೋಡಿಕೊಳ್ಳುತ್ತವೆ. ಪ್ರಸ್ತುತ ಬಾಹ್ಯ ಮಾನದಂಡದ ಸೂಚ್ಯಂಕವನ್ನು ಬಳಸಿಕೊಂಡು ಫ್ಲೋಟಿಂಗ್ ದರದ ಸಾಲಗಳ ಮೇಲಿನ ಬಡ್ಡಿದರಗಳನ್ನು ಅಂತಿಮಗೊಳಿಸುತ್ತಿರುವ ಕಾರಣ ಬಡ್ಡಿ ದರದ ಬದಲಾವಣೆಗಳು ಬಹು ಬೇಗನೆ...