ಉಚಿತ ಎಲೆಕ್ಟ್ರಿಕ್ ಗಾಲಿಕುರ್ಚಿ; ಐಐಟಿ ಮದ್ರಾಸ್ ವಿದ್ಯಾರ್ಥಿಗಳ ಸಾಧನೆಯ ಯಶೋಗಾಥೆ
ನಿಯೋಮೋಶನ್ ಸ್ಟಾರ್ಟಪ್ ಭಾರತದ ಮೊದಲ ಎಲೆಕ್ಟ್ರಿಕ್ ಗಾಲಿಕುರ್ಚಿ ತಯಾರಿಕ ಸಂಸ್ಥೆಯಾಗಿದೆ.
Team Udayavani
ಜಯಶಂಕರ್
ನಿಯೋಮೋಶನ್ ಸಂಸ್ಥೆ ನಿಯೋ ಫ್ಲೈ ಮತ್ತು ನಿಯೋಬೊಲ್ಟ ಎಂಬ ಎರಡು ರೀತಿಯ ಗಾಲಿಕುರ್ಚಿಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ನಿಯೋ ಫ್ಲೈ ಮಾದರಿ ಅಂಗವಿಕಲರ ಅಗತ್ಯ ಮತ್ತು ಜೀವನಶೈಲಿ ಆಧರಿಸಿ ಗಾಲಿಕುರ್ಚಿಯನ್ನು 18 ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು. ಆದರೆ ನಿಯೋಬೋಲ್ಟ ಮಾದರಿ ಗಾಲಿಕುರ್ಚಿಯಲ್ಲಿ ಎಲೆಕ್ಟ್ರಿಕ್ ಮೋಟಾರನ್ನು ಅಳವಡಿಸಲಾಗಿದೆ. ಈ ಮೂಲಕ ಗಾಲಿಕುರ್ಚಿಯನ್ನು ಸ್ಕೂಟರ್ ರೀತಿಯಲ್ಲಿ ಚಲಾಯಿಸಬಹುದು. ಇದು ಗಂಟೆಗೆ ಸುಮಾರು 25 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು...