ಮೇಕೆದಾಟು ಯೋಜನೆ: ಏಕಿಷ್ಟು ಹಠ?
ಸರಕಾರದ ಎಚ್ಚರಿಕೆ ಸಂದೇಶಗಳೇನು? ಜೆಡಿಎಸ್‌ನ ಮುಂದಿನ ನಡೆಯೇನು ಎಂಬ ಕುರಿತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ..
Team Udayavani
ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ, ಯೋಜನೆಗೆ ನಮ್ಮ ಕೊಡುಗೆ ಜಾಸ್ತಿ ಇದೆ ಎಂದು ಜೆಡಿಎಸ್ ಹಕ್ಕು ಪ್ರತಿಪಾದಿಸುತ್ತಿರುವ ಮೇಕೆದಾಟು ಯೋಜನೆ ಇಂದು ನಿನ್ನೆಯದಲ್ಲ. 1848ರಲ್ಲೇ ಪ್ರಸ್ತಾವವಾಗಿತ್ತು. ಆದರೆ ಕಾವೇರಿ ನ್ಯಾಯ ಮಂಡಳಿಯ ಐ ತೀರ್ಪು ಹೊರಬಿದ್ದ ಮೇಲೆ ಮೇಕೆದಾಟು ಯೋಜನೆ ಸ್ವರೂಪ ಪಡೆದುಕೊಳ್ಳಲು ಆರಂಭವಾಯಿತು. 1948ರಲ್ಲಿ ಮೊದಲ ಬಾರಿಗೆ ಯೋಜನೆಯ ಪ್ರಸ್ತಾವವಾಗಿ ರಾಜ್ಯಗಳ ಪುನರ್ ವಿಂಗಡಣೆಯಾದ 1956ರಲ್ಲಿ ಚರ್ಚೆಯಲ್ಲಿತ್ತು. 1960ರಲ್ಲಿ ಕಾವೇರಿ ನದಿ ನೀರಿ ವಿಚಾರ ಪ್ರಾರಂಭವಾದ ಅನಂತರ ಮೇಕೆದಾಟು ವಿಚಾರ ತೆರೆಮರೆಗೆ ಸರಿಯಿತಾದರೂ 90ರ ದಶಕದಲ್ಲಿ ಮತ್ತೆ ಮುನ್ನೆಲೆಗೆ ಬಂದಿತು...