ಜೊಕೋಗೆ ಸಿಗುವುದೇ ಜಾಕ್ ಪಾಟ್ ಪ್ರವೇಶ? ಈಗೇನಾಗಿದೆ…
ಈ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ ಎಂಬುದು ಅವರ ವಾದ.
Team Udayavani
ರೋಜರ್ ಫೆಡರರ್, ರಫೇಲ್ ನಡೇಲ್ ಅವರು ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ. ಹಾಗೆಯೇ ಇನ್ನೂ ಹಲವು ಆಟಗಾರರು ಬಂದಿದ್ದಾರೆ. ಸದ್ಯ ಜಗತ್ತಿನಲ್ಲಿ ಕೊರೊನಾ ತಾಂಡವವಾಡುತ್ತಿರುವುದರಿಂದ ಕಡ್ಡಾಯವಾಗಿ 2 ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ದೇಶಕ್ಕೆ ಪ್ರವೇಶ ಎಂದು ಆಸ್ಟ್ರೇಲಿಯಾ ನಿಯಮ ಮಾಡಿದೆ. ಅಲ್ಲದೆ ಕೊರೊನಾ ಸಂಬಂಧಿತ ಇನ್ನೂ ಹಲವಾರು ಕಠಿನ ನಿಯಮಗಳು ಇಲ್ಲಿ ಜಾರಿಯಲ್ಲಿವೆ. ವಾರದ ಹಿಂದಷ್ಟೇ ಲಸಿಕೆ ಕಾರಣದಿಂದಲೇ ಆಸ್ಟ್ರೇಲಿಯಾ ಓಪನ್ನಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಜೊಕೋ, ಅನಂತರ ವಿಕ್ಟೋರಿಯನ್ ಸ್ಟೇಟ್ನಿಂದ ಮೆಡಿಕಲ್ ವಿನಾಯಿತಿ ಸಿಕ್ಕಿದ್ದು, ಓಪನ್ನಲ್ಲಿ ಆಡಲಿದ್ದೇನೆ ಎಂದಿದ್ದರು. ಹೀಗಾಗಿಯೇ ಬುಧವಾರ ರಾತ್ರಿಯೇ ಮೆಲ್ಬೋರ್ನ್ ಗೆ ಬಂದಿಳಿದಿದ್ದರು...