ದಕ್ಷಿಣ ಭಾರತದ ಪ್ರಸಿದ್ಧ ತಿಂಡಿ …ಇಡ್ಲಿಗೂ ಇದೆ ಕುತೂಹಲಕರ ಇತಿಹಾಸ
ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದಾರೆಂಬುದು ಕಂಡು ಬರುತ್ತದೆ
ಶ್ರೀರಾಮ್ ನಾಯಕ್
ಶ್ರೀರಾಮ್ ನಾಯಕ್
ಕೆಲ ಆಹಾರ ತಜ್ಞರು ಹೇಳುವ ಪ್ರಕಾರ ಇಡ್ಲಿ ಭಾರತಕ್ಕೆ ಬಂದದ್ದು ಇಂಡೋನೇಷ್ಯಾದಿಂದ. ಸುಮಾರು 800ರಿಂದ 1200ರ ಶತಮಾನದಲ್ಲಿ ಭಾರತಕ್ಕೆ ಬಂದಿದೆ ಎನ್ನುತ್ತಾರೆ. ಇಂಡೋನೇಷ್ಯಾದಲ್ಲಿ ಇದನ್ನು “ಕೆಡ್ಲಿ ”ಎಂದೂ ಕರೆಯಲಾಗುತ್ತದೆ. ಕನ್ನಡದ ಶಿವಕೋಟ್ಯಾಚಾರ್ಯರ “ವಡ್ಡಾರಾಧನೆ” ಕೃತಿಯಲ್ಲಿ ಇಡ್ಡಲಿಗೆ ಎಂಬ ತಿಂಡಿಯ ಉಲ್ಲೇಖ ಮಾಡಿದ್ದಾರೆ. ಇಡ್ಲಿ ಎಂದರೆ ಕಡಿಮೆಯೇ? ಅದರಲ್ಲಿ ವಿವಿಧ ಬಗೆಯ ಇಡ್ಲಿಗಳಿವೆ ಉದಾಃ ರವೆ ಇಡ್ಲಿ , ಉದ್ದಿನ ಇಡ್ಲಿ, ರಾಗಿ ಇಡ್ಲಿ, ಅಕ್ಕಿ ಇಡ್ಲಿ.... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕರ್ನಾಟಕದಲ್ಲಂತೂ ಹಲವು ಹೊಟೇಲ್ ಗಳು ಇಡ್ಲಿಯಿಂದಲೇ ಪ್ರಸಿದ್ಧಿ ಪಡೆದಿದೆ...